ವಿದ್ಯಾಮಾತಾದ ವಿದ್ಯಾರ್ಥಿನಿ ಜಯಪ್ರಭಾ ಕೆ. ಬ್ಯಾಂಕ್ ಆಫ್ ಬರೋಡಕ್ಕೆ ಆಯ್ಕೆ| ಬ್ಯಾಂಕ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆಯಾದ ಪ್ರತಿಭಾನ್ವಿತ ವಿದ್ಯಾರ್ಥಿನಿ; ವಿದ್ಯಾಮಾತಾ ಅಕಾಡೆಮಿಯ ನಿರಂತರ ತರಬೇತಿಗೆ ಮತ್ತೊಂದು ಯಶಸ್ಸು

ಕಳೆದ ಹಲವಾರು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯ ಜೊತೆಗೆ ನಿರಂತರವಾದ ಮಾರ್ಗದರ್ಶನವನ್ನು ನೀಡುತ್ತಾ ಕರಾವಳಿ ಕರ್ನಾಟಕದಲ್ಲಿ ಮನೆಮಾತಾಗಿರುವ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ ಜಯಪ್ರಭಾ ಕೆ ರವರು ಬ್ಯಾಂಕ್ ಆಫ್ ಬರೋಡ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನೇಮಕಾತಿಯ ಎಲ್ಲಾ ಹಂತಗಳಲ್ಲಿ ಉತ್ತೀರ್ಣರಾಗಿ ಇದೀಗ ಬ್ಯಾಂಕಿಂಗ್ ಅಸಿಸ್ಟೆಂಟ್ ಆಗಿ ನೇಮಕಗೊಂಡಿದ್ದಾರೆ.
ಪುತ್ತೂರು ತಾಲೂಕು ಮುಂಡೂರು ಗ್ರಾಮದ ಕೊಡೆಂಕೇರಿ ನಿವಾಸಿ ಪದ್ಮನಾಭರವರ ಪುತ್ರಿ ಜಯಪ್ರಭಾ ರವರು ವಿವಿಧ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಇವರು ಇತ್ತೀಚೆಗೆ ಭಾರತೀಯ ವಾಯು ಸೇನೆಯ AFCAT ನೇಮಕಾತಿ ಪರೀಕ್ಷೆಯಲ್ಲಿ ಸಹ ಉತ್ತೀರ್ಣರಾಗಿದ್ದರು, ಇದೀಗ ಬ್ಯಾಂಕ್ ಆಫ್ ಬರೋಡದ ನೇಮಕಾತಿಯಲ್ಲೂ ಕೂಡ ಉತ್ತೀರ್ಣರಾಗಿ ನೇಮಕಾತಿಯ ಎಲ್ಲಾ ಹಂತಗಳನ್ನು ಯಶಸ್ವೀಯಾಗಿ ಮುಗಿಸಿದ್ದು BOB ಗೆ ನೇಮಕಗೊಂಡಿದ್ದಾರೆ.
ಈ ಮೂಲಕ ತರಬೇತಿ ನೀಡಿದ ವಿದ್ಯಾಮಾತಾ ಅಕಾಡೆಮಿಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿ ಹೆತ್ತವರಿಗೆ ಗೌರವ ತಂದಿದ್ದಾರೆ.

. . . . . . . . .

ನಿರಂತರ ಪರಿಶ್ರಮಕ್ಕೆ ತಕ್ಕ ಫಲ ದಕ್ಕಿಸಿಕೊಂಡ ಗ್ರಾಮೀಣ ಪ್ರತಿಭೆ:
ಫಾರ್ಮಸಿ ವಿಷಯದಲ್ಲಿ ಪದವಿ ವಿದ್ಯಾರ್ಹತೆ ಹೊಂದಿರುವ ಜಯಪ್ರಭಾ ರವರು ವಿದ್ಯಾಮಾತಾ ಅಕಾಡೆಮಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಹಾಗೂ ಮಾರ್ಗದರ್ಶನ ಪಡೆದುಕೊಂಡಿದ್ದು ಇವರ ಕಠಿಣ ಮತ್ತು ನಿರಂತರವಾದ ಪರಿಶ್ರಮ ಹಾಗೂ ಇವರ ಈ ಸಾಧನೆಯ ಬೆನ್ನೆಲುಬಾಗಿ ನಿಂತ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ರವರು “ಒಂದೇ ಸೂರಿನಡಿಯಲ್ಲಿ ನಾವು ನೀಡುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯು ಫಲಪ್ರದವಾಗುತ್ತಿದ್ದು ಬ್ಯಾಂಕ್ ಆಫ್ ಬರೋಡಕ್ಕೆ ನೇಮಕಗೊಂಡ ಜಯಪ್ರಭಾ ರವರು ಇನ್ನಷ್ಟು ಸರಕಾರಿ ಉದ್ಯೋಗಾಕಾಂಕ್ಷಿಗಳಿಗೆ ಆದರ್ಶವಾಗಿದ್ದು, ಪ್ರಸ್ತುತ ಪ್ರಾರಂಭವಾಗಿರುವ ನೇಮಕಾತಿ ಪರ್ವಕ್ಕೆ ತರಬೇತಿ ನೀಡಲು ನಮಗೆ ಹೊಸ ಉತ್ಸಾಹ ಬಂದಿದ್ದು ಇನ್ನಷ್ಟು ಅಭ್ಯರ್ಥಿಗಳು ನೇಮಕಗೊಳ್ಳಲಿ ಎಂಬುದೇ ನಮ್ಮ ಆಶಯ” ಎಂದು ಸಂತಸ ವ್ಯಕ್ತಪಡಿಸಿದರು.
ಜಯಪ್ರಭಾ ರವರ ಸಾಧನೆಗೆ ಆಡಳಿತ ಮಂಡಳಿ, ತರಬೇತುದಾರರು ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

. . . . . . .


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading