ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ವಿದ್ಯಾರ್ಥಿ ಸಂಘದ ರಚನೆ ಮತ್ತು ಪ್ರತಿಜ್ಞಾ ಸ್ವೀಕಾರ; ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೋಡಿಗೆ ಸಮಾರಂಭ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ವಿದ್ಯಾರ್ಥಿ ಸಂಘದ ರಚನೆ ಮತ್ತು ಪ್ರತಿಜ್ಞಾ ಸ್ವೀಕಾರ ವಿಧಿ ಹಾಗೂ 2021-22 ಸಾಲಿನ ವಿದ್ಯಾರ್ಥಿಗಳಿಗೆ ಬಿಳ್ಕೊಡಿಗೆ ಸಮಾರಂಭ ಕಾರ್ಯಕ್ರಮವು ಆ. 3ರಂದು ಕಾಲೇಜಿನ ಧನ್ವಂತರಿ ಸಭಾಂಗಣದಲ್ಲಿ ನಡೆಯಿತು.

. . . . . . . . .

ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದ ಸಭಾಧ್ಯಕ್ಷತೆ ವಹಿಸಿ ಗ್ರಾಮೀಣ ಪ್ರದೇಶದ ಆರೋಗ್ಯದಲ್ಲಿನ ಆಯುರ್ವೇದ ವೈದ್ಯರುಗಳ ಮಹತ್ವ ಅಂತೆಯೇ ದೇಶದ ಏಳಿಗೆಯಲ್ಲಿ ಯುವ ಜನಾಂಗದ ಪ್ರಾಮುಖ್ಯತೆಯನ್ನು ತಿಳಿಸಿದರು.

. . . . . . .

ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಯ ಸಹಾಯಕ ಕಾರ್ಮಿಕ ಆಯುಕ್ತರಾದ ನಾಝಿಯ ಸುಲ್ತಾನ ಇವರು ಭಾಗವಹಿಸಿ, ಜೀವನದಲ್ಲಿ ನಾಯಕತ್ವ ಗುಣದ ಮೌಲ್ಯಗಳು, ಮಾನವ ಕುಲದ ತತ್ವಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ. ಯವರು ಕಾಲೇಜಿನ ನೂತನ ವಿದ್ಯಾರ್ಥಿ ಸಂಘಕ್ಕೆ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಕಾಲೇಜಿನ ಅಕಾಡೆಮಿಕ್ ಕೊ ಆರ್ಡಿನೇಟರ್ ಆದ ಡಾ. ಕವಿತಾ ಬಿ.ಎಂ. ರವರು 2026-27ನೇ ಸಾಲಿನ ನೂತನ ವಿದ್ಯಾರ್ಥಿ ಸಂಘವನ್ನು ಸಭೆಗೆ ಪರಿಚಯಿಸಿ ಅವರಿಗೆ ವಿದ್ಯಾರ್ಥಿ ಮಂಡಲದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ನೂತನ ಸ್ನಾತಕೋತ್ತರ ನಾಯಕನಾಗಿ ಡಾ. ಆದರ್ಶ್ ಪಿ ಎಸ್, ಪದವಿ ವಿದ್ಯಾರ್ಥಿ ನಾಯಕಿಯಾಗಿ ರೋಹನ್ ಎಸ್.ಪಿ. ಗೌಡ., ವಿದ್ಯಾರ್ಥಿನಿ ಪ್ರತಿನಿಧಿಯಾಗಿ ಕು. ಸ್ಪಂದ ಯಂ.ವಿ., ಪ್ರಧಾನ ಕಾರ್ಯದರ್ಶಿಯಾಗಿ ಕು. ಸ್ಪಂದನಾ ಎಸ್ ಟಿ, ಖಜಾಂಜಿಯಾಗಿ ಹೇಮಪ್ರಸಾದ್ ಎಂ. ಪಿ., ಹಾಗೂ 26 ವಿವಿಧ ಕಮಿಟಿಗಳ ಸದಸ್ಯರನ್ನೊಳಗೊಂಡ ವಿದ್ಯಾರ್ಥಿ ಸಂಘವನ್ನು ರಚನೆ ಮಾಡಲಾಯಿತು.

ನಿರ್ಗಮಿತ ವಿದ್ಯಾರ್ಥಿ ನಾಯಕಿ ಕು. ನೀಲಾ ಮಹoತಪ್ಪ ಅಂಗಡಿ ತಮ್ಮ ವಿದ್ಯಾರ್ಥಿ ಸಂಘಕ್ಕೆ ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸಿದರು.

ಅಂತಿಮ ವರ್ಷದ ವಿದ್ಯಾರ್ಥಿಯಾದ ಸಂಪತ್ ಎಸ್. ಹಿರೇಮಠ್ ಕಾಲೇಜಿನಲ್ಲಿ ಕಳೆದ ಸಿಹಿ ನೆನಪುಗಳನ್ನು ಮೆಲುಕು ಹಾಕಿದರು.

ಈ ಸಂದರ್ಭದಲ್ಲಿ ಕಾಲೇಜಿನ ಆಯುರ್ ನ್ಯೂಸ್ ಪುಸ್ತಕವನ್ನು ಡಾ. ಕೆ.ವಿ. ಚಿದಾನಂದರವರು ಬಿಡುಗಡೆ ಗೊಳಿಸಿದರು.

ಕಾರ್ಯಕ್ರಮವನ್ನು ವಿದ್ಯಾರ್ಥಿ ಕು. ದೀಪ್ತಿ ಮತ್ತು ತಂಡದವರು ಪ್ರಾರ್ಥಿಸಿ, ಕು. ಸ್ಪಂದನಾ ಎಸ್ ಟಿ ವಂದಿಸಿ, ಕು. ಸುಜ್ಯಶ್ರೀ ಸಾಹೋ ಹಾಗೂ ಕು. ರಕ್ಷಿತಾ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕೋತರ ವಿದ್ಯಾರ್ಥಿಗಳು, ಕಲಿಕಾ ವೈದ್ಯರುಗಳು, ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading