ಕುಕ್ಕೆ ಸುಬ್ರಹ್ಮಣ್ಯ : 40 ಸಾವಿರಕ್ಕಿಂತಲೂ ಅಧಿಕ ಭಕ್ತಾಧಿಗಳ ಆಗಮನ

ಸುಬ್ರಹ್ಮಣ್ಯ ಜೂನ್ 27 : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಜೂ.27 ಶನಿವಾರದಂದು 40 ಸಾವಿರಕ್ಕಿಂತಲೂ ಅಧಿಕ ಭಕ್ತಾಧಿಗಳ ಆಗಮನವಾಗಿದೆ. ಶುಕ್ರವಾರ ರಂಜಾನ್ ರಜೆ, ಶನಿವಾರ ನಾಲ್ಕನೇ ಶನಿವಾರ ರಜೆ ಹಾಗೂ ಆದಿತ್ಯವಾರ ರಜೆಯಾಗಿ ಸರಣಿ ರಜೆಗಳು ಬಂದ ಕಾರಣ ಸರಕಾರಿ ಕಚೇರಿಗಳು ಇನ್ನಿತರ ಸಂಘ-ಸಂಸ್ಥೆಗಳ ನೌಕರರಿಗೆ ಅನುಕೂಲವಾದ್ದರಿಂದ ರಾಜ್ಯದ ವಿವಿಧ ಪುಣ್ಯಕ್ಷೇತ್ರಗಳ ದರ್ಶನ ಹಾಗೂ ಸೇವೆ ಮಾಡುತ್ತಾ ಶುಕ್ರವಾರದಿಂದಲೇ ಕುಕ್ಕೆಗೆ ಅಧಿಕ ಸಂಖ್ಯೆಯಲ್ಲಿ ಭಕ್ತರ ಆಗಮನವಾಗಿದೆ. ಶುಕ್ರವಾರ ಹಾಗೂ ಶನಿವಾರ ದೇವಳದ ಎಲ್ಲಾ ವಸತಿಗೃಹಗಳು ತುಂಬಿದ್ದು, ಖಾಸಗಿ ವಸತಿ ಗೃಹಗಳಲ್ಲಿ ಕೂಡ ಭಕ್ತರ ಕಾದರಿಸುವಿಕೆ ಹಾಗೂ ರಾತ್ರಿ ವಾಸ್ತವ್ಯಕ್ಕಾಗಿ ಕೊಠಡಿಗಳು ಭರ್ತಿಯಾಗಿ ಅದೆಷ್ಟೋ ಭಕ್ತರು ತಂಗುವಿಕೆಗಾಗಿ ಕೊಠಡಿ ಇಲ್ಲದೆ ಶ್ರೀ ದೇವಳದ ರಥ ಬೀದಿ ಸಭಾಂಗಣದಲ್ಲಿ ಹಾಗೂ ಶ್ರೀ ದೇವಳದ ಛತ್ರಗಳಲ್ಲಿ ಆಶ್ರಯವನ್ನು ಪಡೆದಿದ್ದರು. ಇತ್ತ ಶ್ರೀ ದೇವಳದ ಸುತ್ತಮುತ್ತ ಹಾಗೂ ಆದಿಸುಬ್ರಹ್ಮಣ್ಯ ಸುತ್ತುಮುತ್ತು ಇರುವ ಪಾರ್ಕಿಂಗ್ ಪ್ರದೇಶಗಳೆಲ್ಲವೂ ವಾಹನಗಳಿಂದ ಬರ್ತಿಯಾಗಿದ್ದು, ಮಾರ್ಗದ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವ ಪ್ರಮೇಯ ಕೂಡ ಬಂದು ಒದಗಿತ್ತು. ಶನಿವಾರ ಮುಂಜಾನೆ ಎಂದಲೇ ಕುಮಾರಧಾರ ಸ್ಥಾನಗಟ್ಟದಲ್ಲಿ ಭಕ್ತರು ತೀರ್ಥ ಸ್ನಾನ ಮಾಡಿ ದೇವಳದ ಹೊರಾಂಗಣದಿಂದಲೇ ಸರತಿ ಸಾಲಿನಲ್ಲಿ ಬಂದು ಶ್ರೀ ದೇವರ ದರ್ಶನ ಮಾಡಿದ್ದರು. ತದನಂತರ ತೀರ್ಥ ಪ್ರಸಾದ ಸ್ವೀಕರಿಸಿದರು.

. . . . . . . . .

ನಿರಂತರ ಅನ್ನದಾನ : ಕುಕ್ಕೆಯಲ್ಲಿ ಶನಿವಾರ ಮುಂಜಾನೆಯಿಂದಲೇ ಅತ್ಯಧಿಕ ಭಕ್ತರು ಆಗಮಿಸಿದ್ದು, ಬೆಳಗ್ಗೆ ಉಪಹಾರ 8:00 ಗಂಟೆಯಿಂದ 10:00 ಗಂಟೆವರೆಗೆ ನಿರಂತರವಾಗಿ ನಡೆದು ತದನಂತರ 10:30 ರಿಂದ ಸಂಜೆ ನಾಲ್ಕು ಗಂಟೆವರೆಗೂ ನಿರಂತರವಾಗಿ ಅನ್ನದಾನ ಸೇವೆ ನಡೆದಿರುತ್ತದೆ. ಅನ್ನದಾನದಲ್ಲಿ ಸಾರು, ಸಾಂಬಾರ್, ಚಟ್ನಿ, ಪಲ್ಯ, ಪಾಯಸ, ಮಜ್ಜಿಗೆ ಇದ್ದು, ಅನ್ನದಾನದಲ್ಲಿ ಭಾಗವಹಿಸಿದ ಎಲ್ಲಾ ಭಕ್ತರಿಗೂ ನೀಡಲಾಗಿತ್ತು. ಶ್ರೀ ದೇವಳದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಸೆಕ್ಯೂರಿಟಿ ಹಾಗೂ ಸ್ಥಳೀಯ ಠಾಣೆಯ ಪೊಲೀಸ್ ಸಿಬ್ಬಂದಿಯವರು ಭಕ್ತರ ಸುಗಮ ದರ್ಶನಕ್ಕೆ ಹಾಗೂ ಅನ್ನದಾನ ಸೇವೆಗೆ ಮತ್ತು ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆಯನ್ನು ಕೈಗೊಂಡಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading