ಏಷ್ಯನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ “ಎಕ್ಸ್‌ಲೆಂಟ್ ಸ್ಪೋರ್ಟ್ಸ್ ಯೋಗ ಅವಾರ್ಡ್” ಪಡೆದ ಅಕ್ಷಯ ಬಾಬ್ಲುಬೆಟ್ಟು

ಏಷ್ಯನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ “ಎಕ್ಸ್‌ಲೆಂಟ್ ಸ್ಪೋರ್ಟ್ಸ್ ಯೋಗ ಅವಾರ್ಡ್” ಗೆ ಯೋಗಪಟು ಅಕ್ಷಯ ಬಾಬ್ಲುಬೆಟ್ಟು ಆಯ್ಕೆಯಾಗಿದ್ದಾರೆ. ಈಕೆ ಯೋಗಾಸನದಲ್ಲಿ 06 ವಿಶ್ವ ದಾಖಲೆ ನಿರ್ಮಿಸಿದ್ದು, 12 ಚಿನ್ನದ ಪದಕ, 02 ಬೆಳ್ಳಿ ಪದಕ ಹಾಗೂ 03 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ. ಪ್ರಮುಖವಾಗಿ ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತರಾಗಿದ್ದು, ಇದರ ಆಧಾರದಲ್ಲಿ ಈ ಅವಾರ್ಡ್ ಗೆ ಆಯ್ಕೆ ಮಾಡಲಾಗಿದ್ದು, ಕಡಬ ತಾಲೂಕಿನ ಏನೆಕಲ್ಲು ನಿವಾಸಿ ಮೋಹನ್ ಕುಮಾರ್ ಹಾಗೂ ಶ್ರೀಮತಿ ದಿವ್ಯಾ ಕುಮಾರಿ ದಂಪತಿಗಳ ಪುತ್ರಿಯಾಗಿರುವ ಈಕೆ ಕಡಬದ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಏನೆಕಲ್ಲಿನ ನಿರಂತರ ಯೋಗ ಕೇಂದ್ರದಲ್ಲಿ ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ರವರಿಂದ ಯೋಗ ಶಿಕ್ಷಣವನ್ನು ಪಡೆಯುತ್ತಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading