ದೇವಚಳ್ಳ : ಸ.ಹಿ.ಪ್ರಾ ಶಾಲೆಯಲ್ಲಿ ಮಂತ್ರಿಮಂಡಲ ರಚನೆ

ಜೂ.04ನೇ ಗುರುವಾರದಂದು ಸ.ಹಿ.ಪ್ರಾ ಶಾಲೆ ದೇವಚಳ್ಳ ಇಲ್ಲಿ ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು.

. . . . . . . . .

ಶಾಲಾ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಭ್ಯರ್ಥಿಗಳು ಮುಖ್ಯಗುರುಗಳಿಗೆ ನಾಮಪತ್ರ ಸಲ್ಲಿಸಿದರು. ನಂತರ ಅಭ್ಯರ್ಥಿಗಳು ಮತ ಪ್ರಚಾರ ಪ್ರಕ್ರಿಯೆ ಪ್ರಾರಂಭಿಸಿದರು. ಎಲ್ಲಾ ವಿದ್ಯಾರ್ಥಿಗಳು ಮತದಾನವನ್ನು ಇ.ವಿ.ಎಂ ಮೂಲಕ ತಮ್ಮ ಆಯ್ಕೆಯ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು. ಮತದಾನ ಕೊನೆಗೊಂಡ ನಂತರ ಮತ ಎಣಿಕೆ ಮಾಡಲಾಯಿತು. ಅತೀ ಹೆಚ್ಚು ಮತ ಗಳಿಸಿದ ಲುಖ್ ಮಾನ್ ಅಬ್ದುಲ್ಲಾ 7 ನೇ ತರಗತಿ ಶಾಲಾ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡಿರುತ್ತಾನೆ. ಉಪಮುಖ್ಯಮಂತ್ರಿಯಾಗಿ ಅತೀ ಹೆಚ್ಚು ಮತ ಪಡೆದಿರುವ ಶ್ರೀನಿವಾಸ ಪ್ರಸನ್ನ ಬಿ.ಕೆ 6ನೇ ತರಗತಿ ಆಯ್ಕೆಗೊಂಡಿರುತ್ತಾನೆ. ನಂತರ ಶಾಲಾ ವಿವಿಧ ಮಂತ್ರಿಮಂಡಲಗಳನ್ನು ರಚಿಸಲಾಯಿತು. ಶಾಲಾ ದೈ.ಶಿ ಶಿಕ್ಷಕಿಯಾದ ಶ್ರೀಮತಿ ವನಿತಾ ಆಯ್ಕೆಗೊಂಡ ಎಲ್ಲಾ ಮಂತ್ರಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಶಾಲಾ ಎಲ್ಲಾ ಶಿಕ್ಷಕರವೃಂದದವರು ಈ ಮತದಾನದಲ್ಲಿ ಸಹಕಾರ ನೀಡಿದರು. ವಿದ್ಯಾರ್ಥಿಗಳಿಗೆ ಇ.ವಿ.ಎಂ ಮೂಲಕ ಮತದಾನ ಮಾಡುವ ವಿಧಾನವು ಹೆಚ್ಚು ಖುಷಿ ಹಾಗೂ ಪ್ರಭಾವ ಬೀರಿರುತ್ತದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading