ಕುಲ್ಕುಂದ : ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ

ಜೂ.13ರಂದು ಬೆಳಗ್ಗಿನ ಜಾವ ಸುಬ್ರಮಣ್ಯದಿಂದ ಅಕ್ರಮವಾಗಿ ಜಾನುವಾರುಗಳನ್ನು ಕದ್ದು ಸಾಗಾಟದ ಮಾಡುತ್ತಿದ್ದ ಪಿಕಪ್ ವಾಹನ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ಪಲ್ಟಿಯಾದ ಘಟನೆ ಜೂ.13 ರಂದು ವರದಿಯಾಗಿದೆ. ಈ ಸಂದರ್ಭದಲ್ಲಿ ಆರೋಪಿಗಳು ವಾಹನದಲ್ಲಿ ಇದ್ದ 2 ಗೋವುಗಳ ಹಗ್ಗ ಬಿಚ್ಚಿ ಯಾವುದೇ ಸುಳಿವು ಸಿಗದ ರೀತಿಯಲ್ಲಿ ಕೈಕಂಬದವರೆಗೆ ಓಡಿಸಿದ್ದರು. ನಂತರ ಪಲ್ಟಿಯಾಯದ ವಾಹನವನ್ನು ಮೇಲೆತ್ತುವ ಸಂದರ್ಭದಲ್ಲಿ ಕಡಬದ ಹಿಂದೂ ಸಂಘಟನೆಯ ಕಾರ್ಯತರಿಗೆ ಅನುಮಾನಗೊಂಡು ಪೊಲೀಸ್ ಠಾಣೆಗೆ ಮಾಹಿತಿ ನೀಡಿದಾಗ ಅಕ್ರಮ ಗೋ ಸಾಗಾಟದ ಕುರುಹು ಕಂಡು ಬಂದಿರುತ್ತದೆ. ಹತ್ತಿರದ ಸಿಸಿಟಿವಿ ಪರಿಶೀಲಿಸಿದಾಗ ಅದೇ ವಾಹನದಲ್ಲಿ ಎರಡು ಗೋವುಗಳ ಸಾಗಾಟ ಕಂಡುಬಂದಿರುತ್ತದೆ. ಕಾರ್ಯಕರ್ತರ ಒತ್ತಡದಿಂದ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಇವರ ಮೇಲೆ ಪ್ರಕರಣ ದಾಖಲಾಗಿರುತ್ತದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading