“ಮಾರುಕಟ್ಟೆ ರೌಂಡ್ ಅಪ್” – ಸೋಮವಾರ(ಜೂ.08)ದಿಂದ ಶನಿವಾರ(ಜೂ.13)ದವರೆಗಿನ “ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ”ಯ ಸಮಗ್ರ ನೋಟ – ರಬ್ಬರ್ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆ

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ದಿನನಿತ್ಯವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ಪ್ರತಿದಿನದ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ “ಅಮರ ಸುಳ್ಯ ಸುದ್ದಿ ವಾರಪತ್ರಿಕೆ”ಯ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದೇವೆ. ಈ ವಾರ ಅಂದರೆ ಜೂನ್ 08 ಸೋಮವಾರದಿಂದ ಜೂನ್ 13 ಶನಿವಾರದವರೆಗೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಕಂಡುಬಂದಿರುವ ಏರಿಳಿತಗಳೇನು..!? ಎನ್ನುವುದನ್ನು ಈ ವಾರದ “ಮಾರುಕಟ್ಟೆ ರೌಂಡ್ ಅಪ್” ವರದಿಯಲ್ಲಿ ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ…

ಮೊದಲಿಗೆ ನಾವು ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ಉಂಟಾದ ಏರಿಳಿತಗಳನ್ನು ನೋಡುವುದಾದರೆ ಈ ವಾರದ ಪ್ರಾರಂಭದಲ್ಲಿ ಅಂದರೆ ಜೂನ್ 08 ಸೋಮವಾರದಂದು ಹೊಸ ಅಡಿಕೆ ಕನಿಷ್ಠ 390 ರಿಂದ ಗರಿಷ್ಠ 470 ರೂಪಾಯಿ, ಹಳೆ ಅಡಿಕೆ ಕನಿಷ್ಠ 390 ರಿಂದ ಗರಿಷ್ಠ 550 ರೂಪಾಯಿ, ಡಬಲ್ ಚೋಲ್ ಕನಿಷ್ಠ 390 ರಿಂದ ಗರಿಷ್ಠ 550 ರೂಪಾಯಿ, ಫಟೋರಾ ಕನಿಷ್ಠ 340 ರಿಂದ ಗರಿಷ್ಠ 390 ರೂಪಾಯಿ, ಉಳ್ಳಿಗಡ್ಡೆ ಕನಿಷ್ಠ 265 ರಿಂದ ಗರಿಷ್ಠ 285 ರೂಪಾಯಿ ಹಾಗೂ ಕರಿಗೋಟು ಕನಿಷ್ಠ 245 ರಿಂದ ಗರಿಷ್ಠ 275 ರೂಪಾಯಿ ಇತ್ತು. ಫಟೋರಾ ಧಾರಣೆಯನ್ನು ಹೊರತುಪಡಿಸಿ ಉಳಿದೆಲ್ಲಾ ವಿಭಾಗಗಳ ಅಡಿಕೆ ಧಾರಣೆಗಳು ವಾರಪೂರ್ತಿ ಜೂನ್ 13 ಶನಿವಾರದವರೆಗೆ ವಾರದ ಪ್ರಾರಂಭಿಕ ದರದಲ್ಲೇ ಸ್ಥಿರವಾಗಿ ನಿಂತಿದ್ದು, ಫಟೋರಾ ಧಾರಣೆಯು ವಾರಪೂರ್ತಿ ವಾರದ ಪ್ರಾರಂಭಿಕ ದರದಲ್ಲೇ ಸ್ಥಿರವಾಗಿದ್ದರೂ ಕೂಡ ವಾರಾಂತ್ಯದಲ್ಲಿ ಅಂದರೆ ಜೂನ್ 13 ಶನಿವಾರದಂದು ಪ್ರತೀ ಕೆ.ಜಿಗೆ 5 ರೂಪಾಯಿಗಳಷ್ಟು ಇಳಿಕೆ ಕಾಣುವ ಮೂಲಕ ಕನಿಷ್ಠ 335 ರಿಂದ ಗರಿಷ್ಠ 385 ರೂಪಾಯಿಗಳಿಗೆ ಕುಸಿತ ಕಂಡಿತ್ತು.

ಇನ್ನು ಇತರೆ ಪ್ರಮುಖ ಕೃಷಿ ಉತ್ಪನ್ನಗಳಾದ ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಈ ವಾರ ಕಂಡುಬಂದ ಏರಿಳಿತಗಳನ್ನು ನೋಡುವುದಾದರೆ ವಾರದ ಪ್ರಾರಂಭದಲ್ಲಿ ಅಂದರೆ ಜೂನ್ 08 ಸೋಮವಾರದಂದು ಕಾಳುಮೆಣಸು ಕನಿಷ್ಠ 570 ರಿಂದ ಗರಿಷ್ಠ 665 ರೂಪಾಯಿ, ಹಸಿ ಕೊಕ್ಕೋ ಕನಿಷ್ಠ 75 ರಿಂದ ಗರಿಷ್ಠ 105 ರೂಪಾಯಿ, ಒಣ ಕೊಕ್ಕೋ ಕನಿಷ್ಠ 290 ರಿಂದ ಗರಿಷ್ಠ 320 ರೂಪಾಯಿ ಹಾಗೂ ಕೊಬ್ಬರಿ ಕನಿಷ್ಠ 125 ರಿಂದ ಗರಿಷ್ಠ 142 ರೂಪಾಯಿ ಇತ್ತು. ಜೂನ್ 09 ಮಂಗಳವಾರದಂದು ಹಾಗೂ ಜೂನ್ 10 ಬುಧವಾರದಂದು ಇದೇ ಧಾರಣೆ ಮುಂದುವರಿದಿದ್ದು, ಜೂನ್ 11 ಗುರುವಾರದಂದು ಕಾಳುಮೆಣಸು ಧಾರಣೆಯಲ್ಲಿ ಏರಿಕೆ ಕಂಡುಬಂದಿದ್ದು, ಗರಿಷ್ಠ ಬೆಲೆಯಲ್ಲಿ ₹5 ಏರಿಕೆಯಾಗುವ ಮೂಲಕ ಕಾಳುಮೆಣಸು ಪ್ರತಿ ಕೆಜಿಗೆ ₹670 ರ ಉತ್ತಮ ಮಟ್ಟ ತಲುಪಿತ್ತು, ಆದರೆ ಕನಿಷ್ಠ ದರ ₹570 ರಲ್ಲೇ ಮುಂದುವರಿದಿತ್ತು. ಕೊಕ್ಕೋ ಹಾಗೂ ಕೊಬ್ಬರಿ ಧಾರಣೆಗಳಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ. ಜೂನ್ 12 ಶುಕ್ರವಾರದಂದು ಕೂಡ ಕಾಳುಮೆಣಸು ಧಾರಣೆಯಲ್ಲಿ ಏರಿಕೆ ದಾಖಲಾಗಿದ್ದು, ಗರಿಷ್ಠ ಬೆಲೆ ಮಾತ್ರವಲ್ಲದೆ, ಕನಿಷ್ಠ ಬೆಲೆಯಲ್ಲೂ ಭಾರಿ ಸುಧಾರಣೆ ಕಂಡಿತ್ತು. ಗರಿಷ್ಠ ದರ ₹5 ಏರಿಕೆಯಾಗಿ ಪ್ರತಿ ಕೆಜಿಗೆ ₹675 ತಲುಪಿದ್ದರೆ, ಕನಿಷ್ಠ ದರ ಬರೋಬ್ಬರಿ ₹15 ಜಿಗಿದು ₹585 ಕ್ಕೆ ಬಂದು ನಿಂತಿತ್ತು. ಆದರೆ ಕೊಕ್ಕೋ ಹಾಗೂ ಕೊಬ್ಬರಿ ಧಾರಣೆಗಳು ವಾರದ ಪ್ರಾರಂಭಿಕ ದರದಲ್ಲೇ ಸ್ಥಿರವಾಗಿ ನಿಂತಿದ್ದವು. ಇನ್ನು ವಾರದ ಕೊನೆಯ ದಿನವಾದ ಜೂನ್ 13 ಶನಿವಾರದಂದು ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಧಾರಣೆಗಳು ಸಂಪೂರ್ಣ ಸ್ಥಿರತೆಯನ್ನು ಕಾಯ್ದುಕೊಂಡಿದ್ದವು.

ಇನ್ನು ಕೊನೆಯದಾಗಿ ಈ ವಾರ ರಬ್ಬರ್ ಧಾರಣೆಯಲ್ಲಿ ಉಂಟಾದ ಏರಿಳಿತಗಳನ್ನು ನೋಡುವುದಾದರೆ ಈ ವಾರದ ಪ್ರಾರಂಭದಲ್ಲಿ ಅಂದರೆ ಜೂನ್ 08 ಸೋಮವಾರದಂದು ಗ್ರೇಡ್ ರಬ್ಬರ್ 260.5 ರೂಪಾಯಿ, ಲಾಟ್ ರಬ್ಬರ್ 219 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆ ರಬ್ಬರ್ 151 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ ರಬ್ಬರ್ 141 ರೂಪಾಯಿ ಇತ್ತು. ಜೂನ್ 09 ಮಂಗಳವಾರದಂದು ರಬ್ಬರ್ ಧಾರಣೆಗಳಲ್ಲಿ ಏರಿಕೆ ಕಂಡುಬಂದಿದ್ದು, ಗ್ರೇಡ್ ರಬ್ಬರ್ ಪ್ರತೀ ಕೆ.ಜಿಗೆ 1.50 ರೂಪಾಯಿ, ಲಾಟ್ ರಬ್ಬರ್ 1 ರೂಪಾಯಿ ಹಾಗೂ ಸ್ಕ್ರ್ಯಾಪ್ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ರಬ್ಬರ್ ಗಳು ತಲಾ 1 ರೂಪಾಯಿಗಳಷ್ಟು ಏರಿಕೆ ಕಂಡುಬಂದಿದ್ದವು. ಜೂನ್ 10 ಬುಧವಾರದಂದು ಕೂಡ ರಬ್ಬರ್ ಧಾರಣೆಯಲ್ಲಿ ಏರಿಕೆ ಕಂಡುಬಂದಿದ್ದು, ಲಾಟ್ ರಬ್ಬರ್ ಪ್ರತೀ ಕೆ.ಜಿಗೆ 2 ರೂಪಾಯಿ, ಗ್ರೇಡ್ ರಬ್ಬರ್ 1 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ 1 ರೂಪಾಯಿಗಳಷ್ಟು ಏರಿಕೆ ಕಂಡಿದ್ದು, ಸ್ಕ್ರ್ಯಾಪ್ ಪ್ರಥಮ ದರ್ಜೆ ರಬ್ಬರ್ ಸ್ಥಿರವಾಗಿತ್ತು. ಜೂನ್ 11 ಗುರುವಾರದಂದು ಮತ್ತೆ ರಬ್ಬರ್ ಧಾರಣೆಯಲ್ಲಿ ಏರಿಕೆ ಕಂಡುಬಂದಿದ್ದು, ನಾಲ್ಕು ವಿಭಾಗಗಳ ರಬ್ಬರ್ ಧಾರಣೆಗಳಲ್ಲೂ ತಲಾ 50 ಪೈಸೆಗಳಷ್ಟು ಏರಿಕೆ ದಾಖಲಾಗಿತ್ತು. ಜೂನ್ 12 ಶುಕ್ರವಾರದಂದು ಕೂಡ ರಬ್ಬರ್ ಧಾರಣೆಯಲ್ಲಿ ಭರ್ಜರಿ ಏರಿಕೆಯ ಹಾದಿ ಮುಂದುವರಿದಿದ್ದು, ಗ್ರೇಡ್ ರಬ್ಬರ್ ಪ್ರತೀ ಕೆ.ಜಿಗೆ 1 ರೂಪಾಯಿ ಏರಿಕೆ ಕಂಡರೆ ಲಾಟ್ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ ರಬ್ಬರ್ ತಲಾ 50 ಪೈಸೆಗಳಷ್ಟು ಏರಿಕೆ ಕಂಡಿತ್ತು. ಆದರೆ ಸ್ಕ್ರ್ಯಾಪ್ ಪ್ರಥಮ ದರ್ಜೆ ರಬ್ಬರ್ ಸ್ಥಿರತೆಯನ್ನು ಕಾಯ್ದುಕೊಂಡಿತ್ತು. ಇನ್ನು ವಾರದ ಕೊನೆಯ ದಿನವಾದ ಜೂನ್ 13 ಶನಿವಾರದಂದು ಕೂಡ ರಬ್ಬರ್ ಧಾರಣೆಯಲ್ಲಿ ಅಕ್ಷರಶಃ ಭರ್ಜರಿ ಜಿಗಿತ ಕಂಡುಬಂದಿದ್ದು, ಗ್ರೇಡ್ ರಬ್ಬರ್ ಪ್ರತೀ ಕೆ.ಜಿಗೆ 1.50 ರೂಪಾಯಿ, ಲಾಟ್ ರಬ್ಬರ್ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ ರಬ್ಬರ್ ತಲಾ 1 ರೂಪಾಯಿಗಳಷ್ಟು ಏರಿಕೆ ಕಂಡರೆ ಸ್ಕ್ರ್ಯಾಪ್ ಪ್ರಥಮ ದರ್ಜೆ ರಬ್ಬರ್ 1.50 ರೂಪಾಯಿಗಳಷ್ಟು ಏರಿಕೆ ಕಂಡುಬಂದಿತ್ತು. ಅಂತಿಮವಾಗಿ ವಾರದ ಕೊನೆಯಲ್ಲಿ ಅಂದರೆ ಜೂ.13 ಶನಿವಾರದಂದು ಗ್ರೇಡ್ ರಬ್ಬರ್ 266 ರೂಪಾಯಿ, ಲಾಟ್ ರಬ್ಬರ್ 224 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆ ರಬ್ಬರ್ 154 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ ರಬ್ಬರ್ 145 ರೂಪಾಯಿಗಳಿಗೆ ತಲುಪಿ ಭರ್ಜರಿ ಏರಿಕೆ ಕಂಡು ಸಾರ್ವಕಾಲಿಕ ದಾಖಲೆ ಮಾಡಿತ್ತು.

ಒಟ್ಟಿನಲ್ಲಿ ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಎಲ್ಲಾ ವಿಭಾಗಗಳ ಅಡಿಕೆ ಧಾರಣೆಗಳು ವಾರಪೂರ್ತಿ ಸ್ಥಿರತೆಯ ಕಡೆಗೆ ಮುಖ ಮಾಡಿದ್ದರೆ ಫಟೋರಾ ಧಾರಣೆಯು ವಾರಾಂತ್ಯದಲ್ಲಿ ಕೊಂಚ ಕುಸಿತ ಕಂಡಿತ್ತು. ರಬ್ಬರ್ ಧಾರಣೆಯು ವಾರಪೂರ್ತಿ ನಿರಂತರವಾಗಿ ಏರಿಕೆಯ ಕಡೆಗೆ ಸಾಗುತ್ತಾ ಭರ್ಜರಿ ಜಿಗಿತ ಕಂಡು ವಾರಾಂತ್ಯದಲ್ಲಿ ಸಾರ್ವಕಾಲಿಕ ದಾಖಲೆಯನ್ನು ಮಾಡಿತ್ತು. ಇನ್ನು ಕೊಕ್ಕೋ ಹಾಗೂ ಕೊಬ್ಬರಿ ಧಾರಣೆಗಳು ವಾರಪೂರ್ತಿ ಸ್ಥಿರತೆಯನ್ನು ಕಾಯ್ದುಕೊಂಡಿದ್ದರೆ ಕಾಳುಮೆಣಸು ಧಾರಣೆಯು ವಾರದ ಆರಂಭದಲ್ಲಿ ಸ್ಥಿರವಾಗಿದ್ದು, ವಾರಾಂತ್ಯದಲ್ಲಿ ಕೊಂಚ ಏರಿಕೆಯತ್ತ ಸಾಗಿ ನಂತರ ಸ್ಥಿರತೆಯತ್ತ ಮುಖ ಮಾಡಿತ್ತು.

ಕೃಷಿಕರ ಗಮನಕ್ಕೆ : ಈ ಲೇಖನದಲ್ಲಿ ಪ್ರಕಟಿಸಲಾದ ಮಾರುಕಟ್ಟೆ ಧಾರಣೆಗಳು ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಂಡ ಕಳೆದ ವಾರದ(ಜೂನ್ 08 ರಿಂದ ಜೂನ್ 13) ಕ್ಯಾಂಪ್ಕೋ ಮಾರುಕಟ್ಟೆಯ ಅಂಕಿ-ಅಂಶಗಳಾಗಿವೆ. ಮಾರುಕಟ್ಟೆ ಧಾರಣೆಯು ಪ್ರತೀದಿನದ ಬೇಡಿಕೆ ಹಾಗೂ ಪೂರೈಕೆಗೆ ಅನುಗುಣವಾಗಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಇಲ್ಲಿ ನೀಡಲಾದ ಮಾಹಿತಿಯು ಕೇವಲ ಕೃಷಿಕರ ಅರಿವಿಗಾಗಿ ಮಾತ್ರವಾಗಿದ್ದು, ಇದು ಭವಿಷ್ಯದ ದರಗಳ ಮುನ್ಸೂಚನೆಯಲ್ಲ. ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading