ಕುಕ್ಕೆ ಸುಬ್ರಹ್ಮಣ್ಯ : ಎಸ್.ಎಸ್.ಪಿ.ಯು ಕಾಲೇಜಿನಲ್ಲಿ ನಿವೃತ್ತರಾದ ಗ್ರಂಥಪಾಲಕರಿಗೆ ಪುಷ್ಪಾರ್ಚನೆಯ ಸ್ವಾಗತ

ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್.ಎಸ್.ಪಿ.ಯು ಕಾಲೇಜಿನಲ್ಲಿ ಸುಮಾರು 26 ವರ್ಷಗಳ ಕಾಲ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿದ್ದ ಬಾಬು.ಎಚ್ ಹಾಸನಡ್ಕ ಅವರು ಶನಿವಾರ ಸೇವಾ ನಿವೃತ್ತಿ ಹೊಂದಿದರು. ಅವರು ಶನಿವಾರ ಕಾಲೇಜಿಗೆ ಆಗಮಿಸುವಾಗ ವಿದ್ಯಾರ್ಥಿಗಳು ಪುಷ್ಪಾರ್ಚನೆ ಮೂಲಕ ಅವರನ್ನು ಬರಮಾಡಿಕೊಂಡರು.
ಸ್ವಾಗತ : ತಮ್ಮ ಸೇವಾವಧಿಯ ಅಂತಿಮ ದಿನ ವಿದ್ಯಾಸಂಸ್ಥೆಗೆ ಗ್ರಂಥಪಾಲಕರು ಆಗಮಿಸುವಾಗ ಪ್ರೌಢಶಾಲಾ ವಿಭಾಗದ ಹಿರಿಯ ಸಹಶಿಕ್ಷಕ ಎಂ.ಕೃಷ್ಣ ಭಟ್ ಮತ್ತು ಕಾಲೇಜಿನ ಪ್ರಾಚಾರ್ಯ ಸೋಮಶೇಖರ್ ನಾಯಕ್ ಕಾಲೇಜಿನ ದ್ವಾರದ ಬಳಿ ಪುಷ್ಪಗುಚ್ಚ ನೀಡಿ ಸ್ವಾಗತಿಸಿದರು.
ಗುರುನಮನ : ಬಳಿಕ ಕಾಲೇಜಿನ ದ್ವಾರದಿಂದ ಬ್ಯಾಂಡ್ ನಿನಾದದ ನಡುವೆ ಅವರನ್ನು ಬರಮಾಡಿಕೊಳ್ಳಲಾಯಿತು. ಕಾಲೇಜಿನ ಸುಮಾರು 800 ವಿದ್ಯಾರ್ಥಿಗಳು ಎರಡು ಭಾಗದಲ್ಲಿ ಸಾಲಾಗಿ ನಿಂತು ಅವರಿಗೆ ಪುಷ್ಪಾರ್ಚನೆ ಮಾಡಿದರು. ಕೆಲವು ವಿದ್ಯಾರ್ಥಿಗಳು ಪಾದಸ್ಪರ್ಶ ಮಾಡಿ ಗುರು ನಮನ ಸಲ್ಲಿಸಿದರು. ಬಳಿಕ ಬಾಬು.ಎಚ್ ಅವರು ಪ್ರಾಚಾರ್ಯರ ಕಚೇರಿಯಲ್ಲಿ ತಮ್ಮ ಸೇವಾವಧಿಯ ಕೊನೆಯ ದಿನದ ಹಾಜರಾತಿಗೆ ಸಹಿ ಮಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಸೋಮಶೇಖರ್ ನಾಯಕ್, ಪ್ರೌಢಶಾಲಾ ಮುಖ್ಯ ಗುರು ನಂದಾ ಹರೀಶ್, ಹಿರಿಯ ಸಹಶಿಕ್ಷಕ ಎಂ‌.ಕೃಷ್ಣ ಭಟ್, ಸಾಂಸ್ಕೃತಿಕ ಸಂಘದ ಸಂಚಾಲಕಿ ರೇಖಾರಾಣಿ ಸೋಮಶೇಖರ್, ವಿದ್ಯಾರ್ಥಿ ಸರಕಾರದ ಸಂಚಾಲಕ ಜಯಪ್ರಕಾಶ್.ಆರ್, ಸ್ಟಾಪ್ ಸೆಕ್ರೆಟರಿ ಗಿರೀಶ್, ಸ್ಪೀಚ್ ಮುಖ್ಯಸ್ಥೆ ಉಪನ್ಯಾಸಕಿ ಜಯಶ್ರೀ.ವಿ ದಂಬೆಕೋಡಿ, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್, ಉಪನ್ಯಾಸಕರಾದ ಶ್ರೀಧರ್ ಪುತ್ರನ್, ಮನೋಜ್ ಕುಮಾರ್ ಬಿ.ಎಸ್, ಜ್ಯೋತಿ.ಪಿ ರೈ, ಸವಿತಾ ಕೈಲಾಸ್, ಪ್ರವೀಣ್.ಎ, ಸೌಮ್ಯ ದಿನೇಶ್, ಶ್ರುತಿ ಅಶ್ವಥ್, ಭವ್ಯಶ್ರೀ ಕುಲ್ಕುಂದ, ಸೌಮ್ಯಕೀರ್ತಿ, ಮಾನಸಾ ಭಟ್, ಸಾಂಸ್ಕೃತಿಕ ಸಂಘದ ಸಹ ಸಂಚಾಲಕ ರತ್ನಾಕರ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading