ಸುಳ್ಯ ಗಾಂಧಿನಗರ ಕೇಂದ್ರ ಜುಮ್ಮಾ ಮಸ್ಜಿದ್ ನಲ್ಲಿ ಸಂಭ್ರಮದ ಈದುಲ್ ಅಝ್ ಹಾ (ಬಕ್ರೀದ್ ) ಆಚರಣೆ

ಸಮರ್ಪಣಾ ಭಾವ ದಿಂದ ಮಾನವ ಕ್ರಿಯಾ ಶೀಲತೆ ಬೆಳೆಸಬೇಕು : ಖಾಮಿಲ್ ಸಖಾಫಿ

. . . . . . . . .

ತ್ಯಾಗ, ಬಲಿದಾನ ಗಳ ಪ್ರತೀಕವಾಗಿ ಪವಿತ್ರ ಹಜ್ ಕರ್ಮದ ಹಿನ್ನಲೆಯಲ್ಲಿ ಆಚರಿಸಲ್ಪಡುವ ಮುಸ್ಲಿಮರ ಬಕ್ರೀದ್ ಹಬ್ಬ ಸುಳ್ಯ ತಾಲೂಕಿನಲ್ಲಿ ಸಂಭ್ರಮ ದಿಂದ ಆಚರಿಸಲಾಯಿತು
ಸುಳ್ಯ ಗಾಂಧಿನಗರ ಕೇಂದ್ರ ಜುಮಾ ಮಸೀದಿ ಯಲ್ಲಿ ಧರ್ಮ ಗುರುಗಳಾದ ಅಶ್ರಫ್ ಖಾಮಿಲ್ ಸಖಾಫಿ ಯವರ ನೇತೃತ್ವದಲ್ಲಿ ಈದ್ ಸಂದೇಶ, ಖುತುಬಾ ಪ್ರವಚನ ಮತ್ತು ವಿಶೇಷ ಪ್ರಾರ್ಥನೆ ನೆರವೇರಿತು
ನಂತರ ಮಾತನಾಡಿದ ಇಮಾಮರು ಪ್ರವಾದಿ ಇಬ್ರಾಹಿಂ ರವರು ದೇವರ ಸತ್ವ ಪರೀಕ್ಷೆಯನ್ನು ತಾಳ್ಮೆ ಮತ್ತು ತ್ಯಾಗದ ಮೂಲಕ ದೇವರ ಸಂಪ್ರೀತಿಯನ್ನು ಗಳಿಸಿ ದವರು ಅವರ ತತ್ವ ಆದರ್ಶ ಇಂದಿಗೂ ಪ್ರಸ್ತುತ ಎಂದರು
ಈ ಸಂದರ್ಭದಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ, ಜುಮ್ಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಮಹಮ್ಮದ್ ಕೆ ಎಂ ಎಸ್, ಪದಾಧಿಕಾರಿಗಳಾದ ಹಮೀದ್ ಬೀಜ ಕೊಚ್ಚಿ, ಎಸ್. ಎಂ. ಹಮೀದ್. ಕೆ. ಎಸ್. ಉಮ್ಮರ್, ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಜನತಾ, ಅನ್ಸಾರ್ ಅಧ್ಯಕ್ಷ ಹಾಜಿ ಎಸ್. ಅಬ್ದುಲ್ಲ ಕಟ್ಟೆ ಕ್ಕಾರ್ಸ್, ಉಪಾಧ್ಯಕ್ಷ ಕೆ. ಬಿ. ಇಬ್ರಾಹಿಂ, ಗ್ರೀನ್ ವ್ಯೂ ಕನ್ವಿನರ್ ಶಾಫಿ ಕುತ್ತಾಮೊಟ್ಟೆ ಅಬ್ದುಲ್ ಮಜೀದ್ ಜನತಾ, ಸಿದ್ದೀಕ್ ಕೊಕ್ಕೊ ಮೊದಲಾದವರು ಭಾಗವಹಿಸಿದ್ದರು

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading