ಸುಬ್ರಹ್ಮಣ್ಯದ ರೂಪತಿ ಅವರಿಗೆ ಪಿ.ಎಚ್.ಡಿ ಪದವಿ ಪ್ರಧಾನ

ಸುಬ್ರಹ್ಮಣ್ಯ : ದೈಹಿಕ ಶಿಕ್ಷಣ ನಿರ್ದೇಶಕಿ ರೂಪತಿ.ಎಂ ಅವರಿಗೆ ಕುವೆಂಪು ವಿಶ್ವ ವಿದ್ಯಾನಿಲಯವು ಪಿ.ಎಚ್.ಡಿ ಪದವಿ ಪ್ರಧಾನ ಮಾಡಿದೆ. ಇವರು ಮೇ.06 ಬುಧವಾರದಂದು ನಡೆದ ಕುವೆಂಪು ವಿಶ್ವವಿದ್ಯಾನಿಲಯದ 35ನೇ ವಾರ್ಷಿಕ ಘಟಕೋತ್ಸವ ಸಮಾರಂಭದಲ್ಲಿ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ “ಡಾಕ್ಟರ್ ಆಫ್ ಫಿಲಾಸಫಿ” ಪದವಿ ಪ್ರಮಾಣ ಪತ್ರ ಸ್ವೀಕರಿಸಿದರು. ಕುವೆಂಪು ವಿಶ್ವವಿದ್ಯಾನಿಲಯದ ಸ್ನಾತಕೋತರ ಅಧ್ಯಯನ ಹಾಗೂ ಸಂಶೋಧನಾ ದೈಹಿಕ ಶಿಕ್ಷಣ, ಕ್ರೀಡೆ ಮತ್ತು ಯೋಗ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಸ್.ಎಂ ಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಇವರು ಸಿದ್ಧಪಡಿಸಿದ “ಫಾಕ್ಟೋರಿಯಲ್ ಎಕ್ಸ್‌ಪ್ರೆಷನ್ಸ್ ಆಪ್ ಫೆಸಿಫಿಕ್ ಫಿಟ್ ನೆಸ್ ಟೆಸ್ಟ್ ವೇರಿಯೇಬಲ್ಸ್ ಆಪ್ ಫಿಮೇಲ್ ಹ್ಯಾಂಡ್ ಬಾಲ್ ಪ್ಲೇಯರ್ಸ್” ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇವರು ಸುಬ್ರಹ್ಮಣ್ಯದ ಅರಂಪಾಡಿ ನಿವಾಸಿ ರಾಷ್ಟ್ರೀಯ ಕಬಡ್ಡಿ ಆಟಗಾರ ಹಾಗೂ ಕ್ರೀಡಾ ತರಬೇತುದಾರ ಕಿರಣ್ ಅರಂಪಾಡಿ ಅವರ ಪತ್ನಿ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading