ಇಂದಿನ(ಮೇ 05) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಕೊಬ್ಬರಿ ದರದಲ್ಲಿ ಇಳಿಕೆ ; ರಬ್ಬರ್ ದರದಲ್ಲಿ ಏರಿಕೆ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 05 ಮೇ 2026
ವಾರ : ಮಂಗಳವಾರ
ಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಮೇ 05) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.

ಅಡಿಕೆ ಧಾರಣೆ
ಹೊಸ ಅಡಿಕೆ : 445 ರಿಂದ 475
ಹಳೆ ಅಡಿಕೆ : 450 ರಿಂದ 550
ಡಬಲ್ ಚೋಲ್ : 450 ರಿಂದ 550
ಫಟೋರಾ : 355 ರಿಂದ 405
ಉಳ್ಳಿಗಡ್ಡೆ : 240 ರಿಂದ 290
ಕರಿಗೋಟು : 245 ರಿಂದ 275
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಆಧಾರದಲ್ಲಿ ದರವನ್ನು ನಿಗದಿಪಡಿಸಲಾಗುವುದು)
ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ವಾರದ ಆರಂಭವು ಅತ್ಯಂತ ದೃಢವಾಗಿ ಸಾಗುತ್ತಿದೆ. ನಿನ್ನೆ(ಮೇ 4) ಮತ್ತು ಇಂದು(ಮೇ 5) ಧಾರಣೆಯನ್ನು ಗಮನಿಸಿದರೆ, ಎಲ್ಲಾ ತಳಿಯ ಅಡಿಕೆ ಬೆಲೆಗಳು ಯಾವುದೇ ಏರಿಳಿತವಿಲ್ಲದೆ ಸ್ಥಿರತೆಯನ್ನು ಕಾಯ್ದುಕೊಂಡಿವೆ.

ಇತರ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ
ಕಾಳುಮೆಣಸು : 575 ರಿಂದ 675
ಹಸಿ ಕೊಕ್ಕೋ : 75 ರಿಂದ 105
ಒಣ ಕೊಕ್ಕೋ : 285 ರಿಂದ 315
ಕೊಬ್ಬರಿ : 130 ರಿಂದ 158
(ಕಾಳುಮೆಣಸಿನ ತೇವಾಂಶ ಮತ್ತು ಲೀಟರ್ ತೂಕದ ಆಧಾರದಲ್ಲಿ ದರದಲ್ಲಿ ವ್ಯತ್ಯಾಸವಾಗುವುದು)
(ಮಿಲ್ಲಿಂಗ್ ಕ್ವಾಲಿಟಿ ಕೊಬ್ಬರಿಯನ್ನು ಮಾತ್ರ ಖರೀದಿ ಮಾಡಲಾಗುವುದು)
ನಿನ್ನೆ(ಮೇ 4) ಮತ್ತು ಇಂದು(ಮೇ 5) ಕ್ಯಾಂಪ್ಕೋ ಮಾರುಕಟ್ಟೆ ಧಾರಣೆಯನ್ನು ಗಮನಿಸಿದರೆ, ಕಾಳುಮೆಣಸು ಮತ್ತು ಕೊಕ್ಕೋ ಬೆಲೆಗಳು ಬದಲಾಗದೆ ದೃಢವಾಗಿದ್ದರೂ, ಕೊಬ್ಬರಿ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.
ಕೊಬ್ಬರಿ ದರ ಇಳಿಕೆ : ನಿನ್ನೆ(ಮೇ 4) ಗರಿಷ್ಠ ₹160 ಇದ್ದ ಕೊಬ್ಬರಿ ಗರಿಷ್ಠ ಬೆಲೆಯು ಇಂದು(ಮೇ 5) ₹158 ಕ್ಕೆ ಇಳಿದಿದೆ. ಕನಿಷ್ಠ ದರವು ₹150 ರಿಂದ ನೇರವಾಗಿ ₹130 ಕ್ಕೆ ಕುಸಿದಿರುವುದು ಕಂಡುಬಂದಿದೆ.

ರಬ್ಬರ್ ಧಾರಣೆ
ಗ್ರೇಡ್ : 247
ಲಾಟ್ : 211
ಸ್ಕ್ರ್ಯಾಪ್ ಪ್ರಥಮ ದರ್ಜೆ : 149
ಸ್ಕ್ರ್ಯಾಪ್ ದ್ವಿತೀಯ ದರ್ಜೆ : 140
ರಬ್ಬರ್ ಮಾರುಕಟ್ಟೆಯಲ್ಲಿ ಇಂದಿನ ವಹಿವಾಟು ಆಶಾದಾಯಕವಾಗಿದ್ದು, ನಿನ್ನೆ(ಮೇ 4) ಹೋಲಿಸಿದರೆ ಇಂದು(ಮೇ 5) ಗ್ರೇಡ್ ರಬ್ಬರ್ ಬೆಲೆಯಲ್ಲಿ ಅಲ್ಪ ಏರಿಕೆ ಕಂಡುಬಂದಿದೆ. ಉಳಿದಂತೆ ಲಾಟ್ ಮತ್ತು ಸ್ಕ್ರ್ಯಾಪ್ ರಬ್ಬರ್ ಬೆಲೆಗಳು ಸ್ಥಿರವಾಗಿವೆ.
ಗ್ರೇಡ್ ರಬ್ಬರ್ ಏರಿಕೆ : ನಿನ್ನೆ(ಮೇ 4) ₹246 ರಷ್ಟಿದ್ದ ಗ್ರೇಡ್ ರಬ್ಬರ್ ಬೆಲೆಯು ಇಂದು(ಮೇ 5) ಪ್ರತಿ ಕೆಜಿಗೆ ₹1 ರಷ್ಟು ಏರಿಕೆ ಕಂಡು ₹247 ಕ್ಕೆ ತಲುಪಿದೆ.

ಕೃಷಿಕರ ಗಮನಕ್ಕೆ : ಈ ಮೇಲಿನ ಮಾರುಕಟ್ಟೆ ಧಾರಣೆಯು ಇಂದಿನ ಮಾರುಕಟ್ಟೆ ಸ್ಥಿತಿ-ಗತಿಯನ್ನು ಆಧರಿಸಿದ್ದು, ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading