ಇಂದಿನ(ಮೇ 02) ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ – ರಬ್ಬರ್ ಬೆಲೆಯಲ್ಲಿ ಏರಿಕೆ ; ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 02 ಮೇ 2026
ವಾರ : ಶನಿವಾರ
ಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಮೇ 02) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.

ಅಡಿಕೆ ಧಾರಣೆ
ಹೊಸ ಅಡಿಕೆ : 445-475
ಹಳೆ ಅಡಿಕೆ : 450-550
ಡಬಲ್ ಚೋಲ್ : 450-550
ಫಟೋರ : 355-405
ಉಳ್ಳಿಗಡ್ಡೆ : 240-290
ಕರಿಗೋಟು : 245-275
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ)
ದರ ಸ್ಥಿತಿ-ಗತಿ: ಮೊನ್ನೆ ಏಪ್ರಿಲ್ 30ಕ್ಕೆ ಹೋಲಿಸಿದರೆ ಇಂದು ಮೇ 2ರಂದು ಮಾರುಕಟ್ಟೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಹೊಸ ಅಡಿಕೆ ಗರಿಷ್ಠ 475 ರೂಪಾಯಿ ಹಾಗೂ ಹಳೆ ಅಡಿಕೆ ಮತ್ತು ಡಬಲ್ ಚೋಲ್ 550 ರೂಪಾಯಿಗಳಲ್ಲಿ ತಮ್ಮ ದೃಢತೆಯನ್ನು ಕಾಯ್ದುಕೊಂಡಿವೆ. ಇನ್ನುಳಿದಂತೆ ಫಟೋರ, ಉಳ್ಳಿಗಡ್ಡೆ ಮತ್ತು ಕರಿಗೋಟು ದರಗಳೂ ಸಹ ಯಥಾಸ್ಥಿತಿಯಲ್ಲಿ ಮುಂದುವರಿದಿವೆ.

ಇತರ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ
ಕಾಳುಮೆಣಸು : 580-680
ಹಸಿ ಕೊಕ್ಕೋ : 70-100
ಒಣ ಕೊಕ್ಕೋ : 285-315
ಕೊಬ್ಬರಿ : 150-170
(ಕಾಳುಮೆಣಸಿನ ತೇವಾಂಶ ಮತ್ತು ಲೀಟರ್ ತೂಕದ ಆಧಾರದಲ್ಲಿ ದರದಲ್ಲಿ ವ್ಯತ್ಯಾಸವಾಗುವುದು) – (ಮಿಲ್ಲಿಂಗ್ ಕ್ವಾಲಿಟಿ ಕೊಬ್ಬರಿಯನ್ನು ಮಾತ್ರ ಖರೀದಿ ಮಾಡಲಾಗುವುದು)
ದರ ಸ್ಥಿತಿ-ಗತಿ: ಇಂದಿನ ಮಾರುಕಟ್ಟೆಯಲ್ಲಿ ಕಾಳುಮೆಣಸು, ಕೊಕ್ಕೋ ಮತ್ತು ಕೊಬ್ಬರಿ ದರಗಳು ಯಾವುದೇ ಏರಿಳಿತವಿಲ್ಲದೆ ಯಥಾಸ್ಥಿತಿಯಲ್ಲಿ ಮುಂದುವರಿದಿವೆ.

ರಬ್ಬರ್ ಧಾರಣೆ
ಗ್ರೇಡ್ : 246
ಲಾಟ್ : 211
ಸ್ಕ್ರ್ಯಾಪ್ ಪ್ರಥಮ ದರ್ಜೆ : 149
ಸ್ಕ್ರ್ಯಾಪ್ ದ್ವಿತೀಯ ದರ್ಜೆ : 140
ದರ ಏರಿಕೆಯ ವಿವರ: ರಬ್ಬರ್ ಮಾರುಕಟ್ಟೆಯಲ್ಲಿ ಮೇ ತಿಂಗಳ ಆರಂಭದಲ್ಲೂ ಸಕಾರಾತ್ಮಕ ಬದಲಾವಣೆ ಮುಂದುವರಿದಿದೆ. ಮೊನ್ನೆ ಏಪ್ರಿಲ್ 30ರಂದು 245 ರೂಪಾಯಿ ಇದ್ದ ಗ್ರೇಡ್ ರಬ್ಬರ್ ಬೆಲೆಯು ಇಂದು ಮೇ 2ರಂದು ಪ್ರತಿ ಕೆಜಿಗೆ 1 ರೂಪಾಯಿ ಏರಿಕೆ ಕಂಡು 246 ರೂಪಾಯಿಗಳಿಗೆ ತಲುಪಿದೆ.
ಲಾಟ್ ಮತ್ತು ಸ್ಕ್ರಾಪ್ ಧಾರಣೆ: ಕೇವಲ ಗ್ರೇಡ್ ಮಾತ್ರವಲ್ಲದೆ, ಲಾಟ್ ರಬ್ಬರ್ ಬೆಲೆಯಲ್ಲೂ ಇಂದೂ 1 ರೂಪಾಯಿ ಏರಿಕೆಯಾಗಿದ್ದು 211 ರೂಪಾಯಿಗಳಲ್ಲಿ ವಹಿವಾಟು ನಡೆಸುತ್ತಿದೆ. ಆದರೆ, ಸ್ಕ್ರ್ಯಾಪ್ (Scrap I & II) ವಿಭಾಗದ ಬೆಲೆಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಇವು ಮೊನ್ನೆಯ ದರದಲ್ಲೇ ಸ್ಥಿರವಾಗಿವೆ.

ಕೃಷಿಕರ ಗಮನಕ್ಕೆ : ಈ ಮೇಲಿನ ಮಾರುಕಟ್ಟೆ ಧಾರಣೆಯು ಇಂದಿನ ಮಾರುಕಟ್ಟೆ ಸ್ಥಿತಿ-ಗತಿಯನ್ನು ಆಧರಿಸಿದ್ದು, ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ(ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading