ವಿದ್ಯಾಮಾತಾದಿಂದ ಬೇಸಿಗೆ ರಜಾ ಕಾಲದ ಶಾರ್ಟ್ ಟರ್ಮ್ ಕೋರ್ಸ್ ಗಳು ಪ್ರಾರಂಭ

. . . . . . . . .

ಬೇಸಿಗೆ ಕೌಶಲ ಸಂಭ್ರಮ 2026ರ ಮೂಲಕ ಪ್ರಾರಂಭವಾಗಲಿರುವ ಹೊಸ ತರಬೇತಿಗಳು

. . . . . . .

ಇಂದಿನ ಯುವ ಪೀಳಿಗೆಯ ಭವಿಷ್ಯವನ್ನು ಬಾಲ್ಯದಲ್ಲೇ ಭದ್ರ ಗೊಳಿಸುವ ತರಬೇತಿಗಳನ್ನು ಪರಿಚಯಿಸಿದ ಪ್ರತಿಷ್ಠಿತ ತರಬೇತಿ ಕೇಂದ್ರ

ಶೈಕ್ಷಣಿಕ ವಿದ್ಯಾಭ್ಯಾಸವನ್ನು ಮುಗಿಸಿರುವ ಮತ್ತು ಸದ್ಯ ಬೇಸಿಗೆ ರಜೆಯಲ್ಲಿರುವ ಅಲ್ಲದೇ ಸರಕಾರಿ ಮತ್ತು ಖಾಸಗಿ ವಲಯಗಳಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವ ಜನತೆಗೆ ಪೂರಕವಾಗಿರುವ ಸೀಮಿತ ಅವಧಿಯಲ್ಲಿ ವಿಶೇಷ ಕೌಶಲ್ಯಭರಿತ ತರಬೇತಿಗಳನ್ನು ವಿದ್ಯಾಮಾತಾ ಅಕಾಡೆಮಿಯು ಪರಿಚಯಿಸುತ್ತಿದೆ.
ಪ್ರಾರಂಭದಲ್ಲಿ ಬೇಸಿಗೆ ಕೌಶಲ ಸಂಭ್ರಮ 2026ರ ಅಡಿಯಲ್ಲಿ 4ನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿ ತರಬೇತಿ ಒದಗಿಸಲಾಗುತ್ತದೆ ಈ ತರಬೇತಿಯು ಎಪ್ರಿಲ್ 20 2026 ರಿಂದ ಮೇ 20 2026ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 3 ರ ವರೆಗೆ ನಡೆಯುತ್ತದೆ.
ಇದರ ಮುಂದುವರೆದ ಭಾಗವಾಗಿ ವಿದ್ಯಾಮಾತಾ ಅಕಾಡೆಮಿ ಯಲ್ಲಿ 4ನೇ ತರಗತಿಯಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಿವಿಧ ವಸತಿ ಶಾಲಾ ಪ್ರವೇಶ ಪರೀಕ್ಷೆಗಳಾದ ನವೋದಯ, ಸೈನಿಕ, ಮೊರಾರ್ಜಿಗಳಂತಹ ಪ್ರವೇಶ ಪರೀಕ್ಷೆಗಳಿಗೆ ತರಬೇತಿ, ಗಣಿತ ವಿಷಯದ ಕುರಿತು ಮಕ್ಕಳಲ್ಲಿ ಇರುವ ಭಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ 07 ವರ್ಷದಿಂದ 15 ವರ್ಷದೊಳಗಿನ ಮಕ್ಕಳಿಗೆ ಮಾಥ್ಸ್ ಕ್ಲಬ್ ಎಂಬ ವಿಶಿಷ್ಟ ಗಣಿತ ತರಗತಿ ಅಲ್ಲದೇ ವೇದಿಕ್ ಗಣಿತ, ಮಾನಸಿಕ ಸಾಮರ್ಥ್ಯ, ಮೈಂಡ್ ಗೇಮ್, ಮಾಥ್ಸ್ ಒಲಿಂಪಿಯಾಡ್ ನಂತಹ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಗಣಿತ ಸಂಬಂಧಿತ ಸ್ಪರ್ಧೆಗಳಿಗೆ ಆನ್ಲೈನ್ ಮತ್ತು ಆಫ್ ಲೈನ್ ಪೂರ್ವ ತಯಾರಿ ತರಗತಿಗಳು,
16 ರಿಂದ 22 ವರ್ಷದವರೆಗಿನ ವಿದ್ಯಾರ್ಥಿಗಳಿಗೆ ರಕ್ಷಣಾ ಪಡೆಗಳಲ್ಲಿ ಅಧಿಕಾರಿಯಾಗುವ ಪ್ರಯತ್ನದಲ್ಲಿರುವವರಿಗೆ NDA ಮತ್ತು CDS ಹಾಗೂ 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳಿಗೆ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದ ವಲಯದಲ್ಲಿರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೇರ ತರಗತಿ ಮತ್ತು ಆನ್ಲೈನ್ ತರಗತಿಗಳು ಅಲ್ಲದೇ ರಜಾ ದಿನಗಳಲ್ಲಿ ಬ್ಯಾಂಕಿಂಗ್, ರೈಲ್ವೆ, PDO, VAO, KAS ಹಾಗೂ ಭಾರತೀಯ ಸೇನೆ, ಪೊಲೀಸ್ ಪರೀಕ್ಷೆಗಳಿಗೆ ಸೀಮಿತ ಅವಧಿಯ ಪೂರ್ವ ತಯಾರಿ ತರಬೇತಿಗಳನ್ನು ವಿದ್ಯಾಮಾತಾ ಅಕಾಡೆಮಿಯು ಒದಗಿಸುತ್ತಿದ್ದು ಇದರ ಜೊತೆಗೆ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಅರಸುತ್ತಿರುವವರಿಗೆ ಕಂಪ್ಯೂಟರ್ ತರಗತಿಗಳು, AI, ಡಿಜಿಟಲ್ ಮಾರ್ಕೆಟಿಂಗ್, SAF, FICO, ಗ್ರಾಫಿಕ್ ಡಿಸೈನ್, VFX ಗಳು ಹಾಗೂ ಅಕೌಂಟಿಂಗ್ ವಲಯದಲ್ಲಿ SSLC, PUC ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ರಾಷ್ಟೀಯ ಮತ್ತು ಬಹು ರಾಷ್ಟ್ರೀಯ(MNC) ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಳ್ಳುವ ಇರಾದೆ ಹೊಂದಿರುವವರಿಗೆ ವಿದ್ಯಾಮಾತಾ ಅಕಾಡೆಮಿಯು ನಿತ್ಯ ನಿರಂತರ ಮಾರ್ಗದರ್ಶನ ತರಬೇತಿ ನೀಡಿ ಯುವ ಜನತೆಯನ್ನು ತಯಾರಿಗೊಳಿಸುವ ಈ ತರಬೇತಿ ಯ ಸದುಪಯೋಗ ಪಡಿಸಿಕೊಳ್ಳಲು ಹಾಗೂ ತರಬೇತಿಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ವಿದ್ಯಾಮಾತಾ ಅಕಾಡೆಮಿಯ ಸಂಪರ್ಕ ಸಂಖ್ಯೆ 9620468869 ನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading