ಸುಳ್ಯದಲ್ಲಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್‌ ಸಿವಿಲ್ ಇಂಜಿನಿಯರ್ಸ್‌(ಇಂಡಿಯಾ) ಸುಳ್ಯ ಸೆಂಟ‌ರ್ ನ ಪದಪ್ರಧಾನ ಸಮಾರಂಭ ; “ಇಂಜಿನಿಯರ್ಸ್‌ಗಳಿಂದ ಸುಳ್ಯ ಅಭಿವೃದ್ಧಿ ಹೊಂದಲಿ” : ಶಾಸಕಿ ಕು| ಭಾಗೀರಥಿ ಮುರುಳ್ಯ

ಸುಳ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಅಸೋಸಿಯೇಷನ್‌ ಆಫ್ ಕನ್ಸಲ್ಟಿಂಗ್ ಸಿವಿಲ್‌ ಇಂಜಿನಿಯರ್ಸ್(ಇಂಡಿಯಾ) ಇದರ ಸುಳ್ಯ ಸೆಂಟರ್ ನ ಪದಪ್ರಧಾನ ಸಮಾರಂಭವು ಮಾ.21ರಂದು ಸುಳ್ಯದ ಅರಂಬೂರಿನಲ್ಲಿರುವ ಹೋಟೆಲ್ ರಸಪಾಕ ಗ್ರಾಂಡ್ ಇದರ ಆಡಿಟೋರಿಯಂ ನಲ್ಲಿ ನಡೆಯಿತು.
ಎ.ಸಿ.ಸಿ.ಇ(ಐ) ಸುಳ್ಯ ಸೆಂಟರ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ಆರ್. ಕೃಷ್ಣರಾವ್ ನಾವೂರು, ಪ್ರಧಾನ ಕಾರ್ಯದರ್ಶಿ ಅವಿನ್ ಮಳಿ, ಕೋಶಾಧಿಕಾರಿ ಶ್ರೇಯಸ್ ಮುತ್ಲಾಜೆ ಹಾಗೂ ಮ್ಯಾನೇಜಿಂಗ್ ಕಮಿಟಿ ಸದಸ್ಯರುಗಳಾದ ಚಂದ್ರಶೇಖರ.ಎ, ಮಣಿಕಂಠನ್, ವಿಜಯ ಕುಮಾ‌ರ್ ತುದಿಯಡ್ಕ ತಂಡದ ಪದಪ್ರಧಾನವನ್ನು ಎ.ಸಿ.ಸಿ.ಇ(ಐ) ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಕಲ್ಬಾವಿ ರಾವ್ ರವರು ನೆರವೇರಿಸಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಭಾಗವಹಿಸಿದ್ದರು.
ಎ.ಸಿ.ಸಿ.ಐ(ಇ)(ಸೌತ್‌) ಉಪಾಧ್ಯಕ್ಷ ಜೆ. ಪ್ರೇಮ್ ಕುಮಾ‌ರ್, ಎ.ಸಿ.ಸಿ.ಇ(ಇ) ಪ್ರಧಾನ ಕಾರ್ಯದರ್ಶಿ ಕಾಶಿ ರಾಮ್ ಅದೆಪು, ಎ.ಸಿ.ಸಿ.ಇ(ಇ) ಕೋಶಾಧಿಕಾರಿ ಸಿ.ಹೆಚ್.ಪ್ರಕಾಶ್, ಎ.ಸಿ.ಸಿ.ಇ(ಇ) ಪುತ್ತೂರು ಸೆಂಟರ್ ನ ಪೂರ್ವಾಧ್ಯಕ್ಷ ಪ್ರಮೋದ್ ಕುಮಾ‌ರ್ ಕೆ.ಕೆ ಶುಭಹಾರೈಸಿದರು. ಪುತ್ತೂರು ಸೆಂಟರ್‌ನ ಅಧ್ಯಕ್ಷ ಶಿವರಾಮ ಎಂ.ಎಸ್, ಕಾರ್ಯದರ್ಶಿ ವೆಂಕಟರಾಜ ಪಿ.ಜಿ, ಕೋಶಾಧಿಕಾರಿ ಕಾವ್ಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಳ್ಯದ ಹಿರಿಯ ಸಿವಿಲ್ ಇಂಜಿನಿಯರ್ ಡಿ.ಎಂ. ಸುಮಿತ್ರ ಅವರನ್ನು, ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಕಲ್ಪಾವಿ, ಪುತ್ತೂರು ಸೆಂಟರ್‌ನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಶ್ರೀಮತಿ ಲಾವಣ್ಯ ಪ್ರಾರ್ಥಿಸಿದರು. ಪುತ್ತೂರು ಸೆಂಟರ್‌ನ ಅಧ್ಯಕ್ಷ ಶಿವರಾಮ.ಎಂ.ಎಸ್ ಸ್ವಾಗತಿಸಿದರು. ಎ.ಸಿ.ಸಿ.ಇ(ಐ) ಪ್ರಧಾನ ಕಾರ್ಯದರ್ಶಿ ಕಾಶಿರಾಮ್ ಅಡೆವು ಎ.ಸಿ.ಸಿ.ಇ(ಐ) ಕುರಿತು ಮಾತನಾಡಿದರು. ಪ್ರಸಾದ್ ಎಂ.ಎಸ್‌, ಶ್ರೀಮತಿ ಸೌಮ್ಯ ಶ್ಯಾಂ ಪ್ರಸಾದ್, ವಿಜೇತ್, ಸನತ್, ಶ್ರೀಮತಿ ಸುವ್ಯ ಭರತ್ ರಾಜ್ ಅತಿಥಿಗಳನ್ನು ಪರಿಚಯಿಸಿದರು. ಎ.ಸಿ.ಸಿ.ಇ(ಐ) ಸುಳ್ಯ ಸೆಂಟರ್ ನ ನೂತನ ಪದಾಧಿಕಾರಿಗಳನ್ನು ಗಿರೀಶ್ ನಾರ್ಕೋಡು ಪರಿಚಯಿಸಿದರು. ಅಜಿತ್‌ ಹೆಬ್ಬಾ‌ರ್ ಪದಪ್ರದಾನ ಕಾರ್ಯಕ್ರಮವನ್ನು ನಿರ್ವಹಿಸಿದರು. ಎ.ಸಿ.ಸಿ.ಐ(ಐ) ಸುಳ್ಯ ಸೆಂಟ‌ರ್ ಕಾರ್ಯದರ್ಶಿ ಅವಿನ್ ಮಳಿ ವಂದಿಸಿದರು. ನವನೀತ್ ರೈ ಪೇರಾಲುಗುತ್ತು ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading