ಬದುಕಿಗೆ ಸ್ಫೂರ್ತಿ ನೀಡುವ “ಜೀವನಯಾನ” ಕವನ ಸಂಕಲನ

✍️ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ

ಮನುಷ್ಯ ತನ್ನ ಜೀವನದಲ್ಲಿ ಹೇಗೆ ತನ್ನ ಬದುಕನ್ನು ರೂಪಿಸಿಕೊಳ್ಳಬೇಕು ಎಂಬುವುದು ಒಬ್ಬ ಕವಿಹೃದಯವಿರುವ ವ್ಯಕ್ತಿಯಲ್ಲಿ ವಿಶಾಲವಾದ ಮನೋಸ್ಥೈರ್ಯ ಹಾಗೂ ಆಶಾವಾದವನ್ನು ಹುಟ್ಟುಹಾಕುತ್ತದೆ. ಬದುಕು ಮೂರು ದಿನದ ಸಂತೆಯಾದರೂ ನಗುನಗುತ್ತಾ ಕಳೆಯುವುದೇ ಒಂದು ಉತ್ಸಾಹ ತುಂಬಿದ ಬದುಕಿಗೆ ಪ್ರೇರಣೆ. ತಾನೂ ಬದುಕಿ ಇತರರನ್ನೂ ಜೀವನೋತ್ಸಾಹದ ಹಾದಿಯಲ್ಲಿ ಬೆಸೆಯುವುದು ಜೀವತುಂಬಿದ ಬದುಕು ಎನಿಸುವುದು. ಇಂತಹ ಬದುಕಿಗೆ ಸ್ಫೂರ್ತಿಯ ಚಿಲುಮೆ ಉಲ್ಲಾಸ್ ಕಜ್ಜೋಡಿ.
“ರವಿ ಕಾಣದ್ದನ್ನು ಕವಿ ಕಂಡ” ಎಂಬ ಮಾತಿದೆ. ಕವಿಯ ಮನಸ್ಸು ಅಂತಹ ಸೂಕ್ಷ್ಮತೆಯ ವಿಚಾರಧಾರೆಗಳನ್ನು ಈ ಜಗತ್ತಿಗೆ ಪರಿಚಯಿಸುವುದು.
“ಜೀವನಯಾನ : ಏಳು-ಬೀಳುಗಳ ಹಾದಿಯಲ್ಲಿ…” ಈ ಕವನ ಸಂಕಲನದಲ್ಲಿ ತನ್ನ ಕಲ್ಪನೆಯ ಭಾವನಾಲೋಕದಲ್ಲಿ ಜೀವನಾನುಭವದ ಭಾವನೆಗಳಿಗೆ ಅಕ್ಷರಗಳ ಹೂರಣವನ್ನು ತುಂಬಿ ಆತ್ಮಸ್ಥೈರ್ಯದ ನುಡಿಗಳಿಂದ ತಮ್ಮ ಮನದ ಭಾವನೆಗಳನ್ನು ತಮ್ಮ ಕವನಗಳ ಮೂಲಕ ಹಂಚುತ್ತಿದ್ದಾರೆ ನಮ್ಮ ಉಲ್ಲಾಸ್ ಕಜ್ಜೋಡಿ. ಇವರು ಹೊರತಂದಿರುವ ಈ ಕವನ ಸಂಕಲನ ಓದುಗರ ಮನಸ್ಸಿನಲ್ಲಿ ಧೈರ್ಯ ತುಂಬುವುದು, ನೊಂದ ಮನಸ್ಸುಗಳಿಗೆ ಪ್ರೇರಣೆ ನೀಡುವುದು, ಜೀವನದ ಅರಿವಿನ ಬಗ್ಗೆ ತಿಳಿಸುವುದು…
ಇಂತಹ ಉದಯೋನ್ಮುಖ ಕವಿಗಳನ್ನು, ಬರಹಗಾರರನ್ನು ಸದಾ ಪ್ರೋತ್ಸಾಹಿಸುತ್ತಾ ಅವರ ಬರಹಗಳಿಗೆ ಪ್ರೇರಣೆ ತುಂಬೋಣ. ಮನುಷ್ಯ ಮನಸ್ಸು ಮಾಡಿದರೆ ಎಂತಹಾ ಸಾಧನೆಗಳನ್ನು ಮಾಡಲು ಶಕ್ತನಾಗಿರುವನು. ಆದರೆ ಆ ಸಾಧಿಸುವ ಛಲ ನಮ್ಮಲ್ಲಿರಬೇಕು.
ಉತ್ತಮ ಬರಹಗಾರನಾಗಿ, ಸದಾ ನಮ್ರತೆಯ ಭಾವದಿಂದ ಓದುಗರ ಮನಸ್ಸು ಸೋರೆಗೊಳ್ಳುವ ಪದಗಳಿಂದ ಉಲ್ಲಾಸನ ಕವಿತೆಗಳು ಸದಾ ಕವಿ ಹೃದಯದ ಮನಸ್ಸುಗಳಲ್ಲಿ ರಾರಾಜಿಸಲಿ. ಇವರ ಬರಹಗಳು ಇನ್ನಷ್ಟು ಮನಸ್ಸುಗಳನ್ನು ತಲುಪಲಿ. ಸದಾ ಇವರ ಬರಹಗಳಿಗೆ ಪ್ರೋತ್ಸಾಹ ನೀಡೋಣ. ಈ ಮೂಲಕ ಸಹೃದಯಿ, ಮಮತಾಮಯಿ, ಕವಿಹೃದಯಿ, ದೈಹಿಕ ನ್ಯೂನತೆಯಿದ್ದರೂ ಸದಾ ಉತ್ಸಾಹ ತುಂಬಿದ ಬರಹಗಳಿಂದ ಓದುಗರ ಮನಸ್ಸಿಗೆ ಸ್ಫೂರ್ತಿ ತುಂಬುವ ಉಲ್ಲಾಸ್ ನಿಮಗೆ ಶುಭವಾಗಲಿ.
✍️ ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ
ಶ್ರೀದುರ್ಗಾ ಕಂಪ್ಯೂಟರ್ ತರಬೇತಿ ಕೇಂದ್ರ, ಗುತ್ತಿಗಾರು

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading