- Sunday
- April 20th, 2025

ಕೇನ್ಯ ಗ್ರಾಮದ ಕಣ್ಕಲ್ ತರವಾಡು ಮನೆಯ ಶ್ರೀ ಧರ್ಮದೈವ ರುದ್ರಚಾಮುಂಡಿ ಮತ್ತು ಪರಿವಾರ ದೈವಗಳ ಧರ್ಮ ನಡಾವಳಿ ಫೆ. 17 ಮತ್ತು ಫೆ.18 ರಂದು ನಡೆಯಲಿದೆ. ಫೆ. 17 ರಂದು ರಾತ್ರಿ ಶ್ರೀ ದೈವಗಳ ಭಂಡಾರ ತೆಗೆದು ದೈವಗಳ ನೇಮೋತ್ಸವ ನಡೆಯಲಿದೆ. ಫೆ. 18 ರಂದು ಧರ್ಮದೈವ ರುದ್ರಚಾಮುಂಡಿ ದೈವದ ನೇಮ ನಡೆಯಲಿದೆ. ಮಧ್ಯಾಹ್ನ ಪ್ರಸಾದ...

ಹರಿಹರ ಪಲ್ಲತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ. 20ರಿಂದ22ರ ವರೆಗೆ ಜಾತ್ರೋತ್ಸವ ನಡೆಯಲಿದ್ದು, ಗೊನೆ ಮುಹೂರ್ತ ಫೆ. 14ರಂದು ನಡೆಯಿತು.ದೇವಸ್ಥಾನದ ಪ್ರದಾನ ಅರ್ಚಕ ಸುಬ್ರಹ್ಮಣ್ಯ ನರಸಿಂಹ ಭಟ್ ಪೂಜಾ ವಿದಿವಿಧಾನ ನೆರವೇರಿಸಿದರು.ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕಿಶೋರ್ ಕೂಜುಗೋಡು, ಸದಸ್ಯರುಗಳಾದ ಭವಾನಿಶಂಕರ ಪೈಲಾಜೆ,ಚಂದ್ರಹಾಸ ಶಿವಾಲ,ಆನಂದ ಕೆರೆಕ್ಕೋಡಿ,ಚಂದ್ರಶೇಖರ ಕಿರಿಭಾಗ,ರೇಷ್ಮಾ ಕಟ್ಟೆಮನೆ,ಜ್ಯೋತಿ ಕಳಿಗೆ,ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶೇಷಪ್ಪ ಗೌಡ ಕಿರಿಭಾಗ,ಸದಸ್ಯರುಗಳಾದ...

ವಿಧಾನಸಭೆಯಲ್ಲಿ ಧ್ವನಿ ಎತ್ತಿದ ಶಾಸಕಿ ಭಾಗೀರಥಿ ಮುರುಳ್ಯರವರು, ಅನುದಾನದ ಮತ್ತು ಅಧಿಕಾರಿಗಳ ಸಿಬ್ಬಂದಿಗಳ ಕೊರತೆಯಿಂದ ಗ್ರಾಮ ಪಂಚಾಯತ್ಗಳ ಕಾರ್ಯನಿರ್ವಹಣೆಯಲ್ಲಿ ತೀವ್ರ ಆಗುತಿದೆ ಎಂದು ಹೇಳಿದರು. ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಅವರು ಅನುದಾನ ಬಾರದೆ ಸುಳ್ಯ ವಿಧಾನ ಸಭಾ ಕ್ಷೇತ್ರದಸುಳ್ಯ ಹಾಗೂ ಕಡಬ ತಾಲೂಕಿನ ಗ್ರಾ.ಪಂ.ಕಟ್ಟಡಗಳ ನಿರ್ಮಾಣ ಪೂರ್ತಿಯಾಗಿಲ್ಲ. ಡಾಟಾ ಎಂಟ್ರಿ ಆಫರೇಟರ್ಗಳ ನೇಮಕ...

ರಂಗಭೂಮಿಯನ್ನೇ ಬದುಕು ಮಾಡಿಕೊಂಡವರಲ್ಲಿ ಜೀವನ್ ರಾಂ ಪ್ರಮುಖರು. ಇವರ ನಾಟಕಗಳಿಗೆ ಎಂದೂ ಪ್ರೇಕ್ಷಕರ ಕೊರತೆ ಆಗಿಲ್ಲ.. ತನ್ನ ವಾಸದ ಮನೆಯನ್ನೇ ಸಾಂಸ್ಕೃತಿಕ ಕೇಂದ್ರವನ್ನಾಗಿಸಿದ ಜೀವನ್ ನಾಡು ಕಂಡ ಅಪರೂಪದ ಶ್ರೇಷ್ಠ ರಂಗಕರ್ಮಿ' ಎಂದು ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಹೇಳಿದರು.ಅವರು ಶ್ರೀ ಮಾತಾ ಚಾರಿಟೇಬಲ್ ಟ್ರಸ್ಟ್ ಹುಳಿಯಾರು ಮತ್ತು ಸೆಂಟರ್ ಸ್ಟೇಜ್ ಬೆಂಗಳೂರು ಇವರು...

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಡ್ನೂರು ಮರ್ಕಂಜ ಇಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಅನ್ನಪೂರ್ಣೇಶ್ವರಿ ಭೋಜನಾಲಯ ಮತ್ತು ಡಿಜಿಟಲ್ ಗ್ರಾಂಥಲಾಯದ ಕೊಠಡಿ ಉದ್ಘಾಟನೆಯನ್ನು ಸಹಾಯಕ ಕಮೀಷನ್ ಪುತ್ತೂರು ಜುಬೀನ್ ಮಹಾಪಾತ್ರ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎಸ್ ಅಂಗಾರ, ಸುಳ್ಯ ತಹಶೀಲ್ದಾರ್ ಜಿ ಮಂಜುನಾಥ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತ ಹೊಸಳಿಕೆ, ಬಾಲಕೃಷ್ಣ...

ಫೆ.13 ಮಂಗಳವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿ ಮೇರಿಹಿಲ್ ಮಂಗಳೂರು ಇಲ್ಲಿ ಗೃಹರಕ್ಷಕರಿಗೆ ಹೃದಯ ಪುನಶ್ಚೇತನ ಕೌಶಲ್ಯ ತರಬೇತಿ ಶಿಬಿರ ನಡೆಯಿತು. ದ ಕ ಜಿಲ್ಲಾ ಗ್ರಹ ರಕ್ಷಕ ದಳ,ಲಯನ್ಸ್ ಕ್ಲಬ್ ಮಂಗಳೂರು ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನ ಇವರ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದ...

ಮಾವಿನಕಟ್ಟೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಾ. 18 ಮತ್ತು 19ರಂದು ಶ್ರೀ ದೈವದ ಒತ್ತೆಕೋಲ ಮಹೋತ್ಸವ ನಡೆಯಲಿದ್ದು ಫೆ.13 ರಂದು ಆಮಂತ್ರಣ ಬಿಡುಗಡೆ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಎ. ವಿ. ತೀರ್ಥರಾಮ, ರಾಧಾಕೃಷ್ಣ ಶ್ರೀ ಕಟೀಲ್ ಮಾವಿನಕಟ್ಟೆ, ಭಾಸ್ಕರ ಬಾಳೆತೋಟ, ಲೋಕೇಶ್ ಪೂಜಾರಿ ತಳೂರು- ಕೆಳಪಾರೆ,...

ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರ ಗಾಯಗೊಂಡ ಘಟನೆ ದ.ಕ. ಸಂಪಾಜೆ ಗ್ರಾಮದ ಕಡೆಪಾಲ ಎಂಬಲ್ಲಿ ಫೆ.13ರಂದು ಅಪರಾಹ್ನ ಸಂಭವಿಸಿದೆ. ಕಲ್ಲುಗುಂಡಿ ಪೂರ್ಣಿಮಾ ಟೆಕ್ಸ್ ಟೈಲ್ಸ್ ಮಾಲಕ ಬಿ.ಆರ್. ಪದ್ಮಯ್ಯ ಅವರು ಸುಳ್ಯದಿಂದ ಕಲ್ಲುಗುಂಡಿಗೆ ಬರುತ್ತಿದ್ದ ವೇಳೆ ಕಡೆಪಾಲ ಎಂಬಲ್ಲಿ ಕಲ್ಲುಗುಂಡಿಯಿಂದ ಸುಳ್ಯಕ್ಕೆ ತೆರಳುತ್ತಿದ್ದ ಬೈಕ್ ಸವಾರ ಪೆರಾಜೆ ಗ್ರಾಮದ ಗಂಗಾಧರ...

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕಾಟಿಪಳ್ಳ ಎಂಬಲ್ಲಿ ಸುಳ್ಯ ಮಂಡೆಕೋಲು ರಸ್ತೆಯ ಪಕ್ಕದಲ್ಲಿ ಯುವಕನಿಗೆ ಯುವಕರು ಥಳಿಸಿದ ಘಟನೆ ಇದೀಗ ವರದಿಯಾಗಿದೆ. ಮೇನಾಲ ಮೂಲದ ಅಜಿತ್ ಎಂಬ ಯುವಕನಿಗೆ ಕಲ್ಲಗುಡ್ಡೆಯ ಯುವಕರ ತಂಡವು ಹಲ್ಲೆ ನಡೆಸುತ್ತಿರುವ ವೀಡಿಯೋ ಇದೀಗ ವೈರಲ್ ಆಗುತ್ತಿದ್ದು ಈ ವೀಡಿಯೋದಲ್ಲಿ ಹಲ್ಲೆ ನಡೆಸುತ್ತಿರುವ ದೃಶ್ಯ ಕಾಣಬಹುದಾಗಿದೆ ಅಲ್ಲದೆ ಇದೀಗ ಪೊಲೀಸ್ ಈ...

All posts loaded
No more posts