
ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಕೊಲ್ಲಮೊಗ್ರು ಗ್ರಾಮದ ಚರಣ್ ಕುಞೇಟಿ ಎಂಬುವವರು ಫೆ.28 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಇವರು ಕೆಲವು ತಿಂಗಳುಗಳಿಂದ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರೆನ್ನಲಾಗಿದೆ.
ಮೃತರಿಗೆ 29 ವರ್ಷ ವಯಸ್ಸಾಗಿದ್ದು, ಮೃತರು ತಂದೆ ಕೊಲ್ಲಮೊಗ್ರದ ಪೋಸ್ಟ್ ಮಾಸ್ಟರ್ ಚಂದ್ರಶೇಖರ, ತಾಯಿ ಕಲಾವತಿ, ಸಹೋದರ ವಚನ್ ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.
