- Tuesday
- January 28th, 2025
ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಕೊಲ್ಲಮೊಗ್ರು ಗ್ರಾಮದ ಚರಣ್ ಕುಞೇಟಿ ಎಂಬುವವರು ಫೆ.28 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಇವರು ಕೆಲವು ತಿಂಗಳುಗಳಿಂದ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರೆನ್ನಲಾಗಿದೆ.ಮೃತರಿಗೆ 29 ವರ್ಷ ವಯಸ್ಸಾಗಿದ್ದು, ಮೃತರು ತಂದೆ ಕೊಲ್ಲಮೊಗ್ರದ ಪೋಸ್ಟ್ ಮಾಸ್ಟರ್ ಚಂದ್ರಶೇಖರ, ತಾಯಿ ಕಲಾವತಿ, ಸಹೋದರ ವಚನ್ ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.

ಸುಳ್ಯ:ಪಾಟಾಳಿ ಯಾನೆ ವಾಣಿಯ ಗಾಣಿಗ ಸಮುದಾಯದ ಕುಲದೇವತೆ, ಕಾಸರಗೋಡು ಜಿಲ್ಲೆಯ ಕಣ್ಣೂರು ಸಮೀಪದ ಕುಂಬಳೆ ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಸುಮಾರು 20 ವರ್ಷಗಳ ನಂತರ ನಡೆಯುವ ಕಳಿಯಾಟ ಮಹೋತ್ಸವು ಮಾ.1ರಂದು ಅದ್ದೂರಿಯಾಗಿ ಚಾಲನೆ ದೊರೆಯಲಿದೆ. https://youtube.com/@amarasuddiamarasuddi7408?si=ihQTNbajE7mlB6ls ಶ್ರೀ ಕ್ಷೇತ್ರವು ತನ್ನ ಶಾಂತಿಯುತ ಮತ್ತು ಕರುಣಾಮಯಿ ದೇವತೆಯಾದ ಶ್ರೀ ಪೆರ್ನೆ ಮುಚ್ಚಿಲೋಟ್ ಭಗವತಿಗೆ ಹೆಸರುವಾಸಿಯಾಗಿದೆ....
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಮಾ.01 ಶುಕ್ರವಾರ ಸೂರ್ಯೋದಯದಿಂದ ಮಾ.02 ಶನಿವಾರ ಸೂರ್ಯೋದಯದವರೆಗೆ ಶ್ರೀ ಜಲದುರ್ಗಾದೇವಿ ಭಜನಾ ಮಂಡಳಿ ಪೆರುವಾಜೆ ಹಾಗೂ ಶ್ರೀ ಜಲದುರ್ಗಾದೇವಿ ಮಹಿಳಾ ಭಜನಾ ಮಂಡಳಿ ಪೆರುವಾಜೆ ಇವರ ಸಂಯುಕ್ತ ಆಶ್ರಯದಲ್ಲಿ 22ನೇ ವರ್ಷದ ಏಕಾಹ ಭಜನೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನದ ಆಡಳಿತಾಧಿಕಾರಿಗಳು ವಿನಂತಿಸಿದ್ದಾರೆ.
ಕೊಡಗು ಸಂಪಾಜೆ ಅರಣ್ಯ ಇಲಾಖೆ ವತಿಯಿಂದ, ಸುಳ್ಯ ಅಗ್ನಶಾಮಕದಳ ಸಹಯೋಗದೊಂದಿಗೆ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಮತ್ತು ಗ್ರಾಮ ಅರಣ್ಯ ಸಮಿತಿಯ ಸದಸ್ಯರುಗಳಿಗೆ ಕಾಡ್ಗಿಚ್ಚು, ಬೆಂಕಿಯಿಂದ ಅರಣ್ಯವನ್ನು ಹೇಗೆ ರಕ್ಷಣೆ ಮಾಡಬಹುದು, ಹಾಗೂ ಬೆಂಕಿ ನಂದಿಸುವಲ್ಲಿ ಸಾರ್ವಜನಿಕರ ಸಹಕಾರದ ಕುರಿತು ಮತ್ತು ಅಣಕು ಪ್ರದರ್ಶನ ಕಾರ್ಯಕ್ರಮವು ಫೆ.29 ರಂದು ಕೊಯನಾಡು ಶಾಲಾ ವಠಾರದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಸಂಪಾಜೆ ಉಪವಲಯ...