ಹಯಾತುಲ್ ಇಸ್ಲಾಂ ಕಮಿಟಿ ಜಟ್ಟಿಪಳ್ಳ ಇದರ ವತಿಯಿಂದ ಮಾ.4 ರಂದು ಜಲಾಲೀಯ್ಯ ರಾತೀಬ್ ಕಾರ್ಯಕ್ರಮದ ವಾರ್ಷಿಕ ನಡೆಯಲಿದೆ ಎಂದು ಜಲಾಲೀಯ್ಯ ವಾರ್ಷಿಕ ಕಾರ್ಯಕ್ರಮದ ಸಹ ಉಸ್ತುವಾರಿ ಶರೀಫ್ ಜಟ್ಟಿಪಳ್ಳ ತಿಳಿಸಿದರು.
ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮತನಾಡುತ್ತಾ ಈ ಕಾರ್ಯಕ್ರಮದ ನೇತೃತ್ವವನ್ನು ಸಯ್ಯದ್ ಜಹಫರ್ ಸ್ವಾದಿಕ್ ತಂಙಳ್ ಕುಂಬೋಳ್ ವಹಿಸಲಿದ್ದಾರೆ ಎಂದು ತಿಳಿಸಿದರು.
ಮಾ.4 ರಂದು ನಡೆಯುವ ಜಲಾಲೀಯ್ಯ ಕಾರ್ಯಕ್ರಮವನ್ನು ಸಯ್ಯದ್ ಕುಂಞಿಕೋಯ ತಂಙಳ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸುಳ್ಯದ ಧಾರ್ಮಿಕ ಮುಖಂಡರು ,ಸಾಮಾಜಿಕ ಮುಂಖಡರು ಬಾಗವಹಿಸಲಿದ್ದಾರೆ.
ಅಲ್ಲದೆ ಈ ಕಾರ್ಯಕ್ರಮದಲ್ಲಿ ಹಲವಾರು ಮಸೀದಿಗಳ ಅಭಿವೃದ್ಧಿಯಲ್ಲಿ ಕೈಜೋಡಿಸಿ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿ ಕೊಂಡಿರುವ ಹಿರಿಯ ರಾಜಕಾರಣಿ ಹಾಜಿ ಇಸಾಕ್ ಸಾಹೇಬ್ ಪಾಜಪಳ್ಳ ರವರಿಗೆ ಗೌರವರ್ಪಣೆ ನಡೆಯಲಿದೆ.ಮಾ.4 ರಂದು ಮಗರಿಬ್ ನಮಾಝ್ ನ ಬಳಿಕ ಕಾರ್ಯಕ್ರಮ ನಡೆಯಲಿದೆ, ಕಾರ್ಯಕ್ರಮದ ಕೊನೆಯಲ್ಲಿ ಅನ್ನಸಂತರ್ಪಣೆ ನಡೆಯಲಿದೆ ಎಂದವರು ತಿಳಿಸಿದರು.
ಗೋಷ್ಠಿಯಲ್ಲಿ ಹಯಾತುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್ ಎಸ್ ಎ ಎಸ್ ಮಹಮ್ಮದ್, ಹಯಾತುಲ್ ಇಸ್ಲಾಂ ಕಮಿಟಿ ಮಾಜಿ ಅಧ್ಯಕ್ಷ ರಶೀದ್ ಜಟ್ಟಿಪಳ್ಳ, ಗೌರವದ್ಯಕ್ಷ ಅಬೂಭಕ್ಕರ್ ಕೆ.ಎ,ಮಾಜಿ ಅಧ್ಯಕ್ಷ ಬಶೀರ್ ಕ್ವಾಲಿಟಿ ,ಜಲಾಲೀಯ್ಯ ಕಾರ್ಯಕ್ರಮದ ಸಹ ಉಸ್ತುವಾರಿ ಆಲಿ ಕೆ.ಎ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.