Ad Widget

ಮಾರ್ಚ್ 8-9: ಮೇಲಡ್ತಲೆ ಕುಟುಂಬದ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಧರ್ಮ ನಡಾವಳಿ

ಅರಂತೋಡು ಗ್ರಾಮದ ಮೇಲಡ್ತಲೆ ಕುಟುಂಬದ ಶ್ರೀ ನಾಗದೇವರ ಪ್ರತಿಷ್ಠಾ ವಾರ್ಷಿಕೋತ್ಸವ, ತಂಬಿಲ, ಶ್ರೀ ವೆಂಕಟರಮಣ ದೇವರ ಹರಿಸೇವೆ ಹಾಗೂ ಧರ್ಮ ನಡಾವಳಿ ಮಾರ್ಚ್ 8 ಮತ್ತು 9 ರಂದು ನಡೆಯಲಿದೆ.

. . . . . . .

ಮಾರ್ಚ್ 08 ರಂದು ಬೆಳಿಗ್ಗೆ ಗಂಟೆ 8-00ರಿಂದ ಶ್ರೀ ನಾಗತಂಬಿಲ, ಶ್ರೀ ವೆಂಕಟ್ರಮಣ ದೇವರ ಹರಿಸೇವೆ, ಮಧ್ಯಾಹ್ನ ಗಂಟೆ 12-00ರಿಂದ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಸಂಜೆ 6.00 ಕ್ಕೆ ಶ್ರೀ ದೈವಗಳ ಭಂಡಾರ ತೆಗೆಯುವುದು, ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ 8.00ರಿಂದ ಉಪದೈವಗಳಾದ ಗುರುಕಾರ್ನೊರು, ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ನಾಗಬ್ರಹ್ಮ, ನಾಗಚಾಮುಂಡಿ, ಚಾಮುಂಡಿ, ಅಕ್ರಮ ಚಾಮುಂಡಿ ದೈವಗಳ ನೇಮೋತ್ಸವ ನಡೆಯಲಿದೆ.

ಮಾರ್ಚ್ 09ರಂದು ಶನಿವಾರ ಪ್ರಾತಃಕಾಲ ಗಂಟೆ 5-00ರಿಂದ ಶ್ರೀ ಕುಕ್ಕೆತ್ತಿ ಬಲ್ಲು ಮತ್ತು ಶ್ರೀ ಪಿಲಿಭೂತ ದೈವಗಳ ನಡಾವಳಿ ನಡೆದು ಬೆಳಿಗ್ಗೆ 10-30ರಿಂದ ಧರ್ಮದೈವ ಶ್ರೀ ರುದ್ರಚಾಮುಂಡಿ ಮತ್ತು ಶ್ರೀ ಗುಳಿಗ ದೈವಗಳ ನಡಾವಳಿ ನಡೆದು ಮಧ್ಯಾಹ್ನ 12-30ರಿಂದ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 7-00ರಿಂದ ಉಪದೈವಗಳಾದ ಶ್ರೀ ಪಾಷಾಣಮೂರ್ತಿ, ಶ್ರೀ ಭೂಮಿ ಗುಳಿಗ ಮತ್ತು ಶ್ರೀ ಅಂಗಾರ ದೈವಗಳ ನೇಮೋತ್ಸವ ನಡೆಯಲಿದೆ ಕುಟುಂಬದ ಹಿರಿಯರಾದ ವೆಂಕಪ್ಪ ಮೇಲಡ್ತಲೆ ಹಾಗೂ ತಳಮನೆ ಮುಖ್ಯಸ್ಥರಾದ ಮನಮೋಹನ ಮೇಲಡ್ತಲೆ ತಿಳಿಸಿದ್ದಾರೆ.

Related Posts

error: Content is protected !!