
ಜಾಲ್ಸೂರು ಗ್ರಾಮದ ಅಡ್ಕಾರು ಅಂಜನಾದ್ರಿ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಕ್ಷೇತ್ರದಲ್ಲಿ ಕಾಲಾವಧಿ ಜಾತ್ರೋತ್ಸವದ ಅಂಗವಾಗಿ ಹನುಮ ನೇಮೋತ್ಸವು ಫೆ. 27ರಂದು ನಡೆಯಿತು.
ಅಪರೂಪವಾಗಿ ಕಂಡುರುವ ಹನುಮ ನೇಮೋತ್ಸವು ದೇವಸ್ಥಾನದ ಸಮೀಪದ ಕಾಡಿನಿಂದ ಕೋಲ ಕಟ್ಟಿ ದೇವಸ್ಥಾನದ ಅಂಗಣಕ್ಕೆ ಕರೆ ತರಲಾಗುತ್ತದೆ.
ಕೋಲ ರೂಪದಲ್ಲಿ ಅವತರಿಸಿದ ಆಂಜನೇಯ, ಮೈಯೆಲ್ಲ ಕಪ್ಪು ಬಣ್ಣ, ಅದರ ಮಧ್ಯೆ ಬಿಳಿ ಚುಕ್ಕೆ, ಬಿಳಿ ಪಂಚೆ ಸುತ್ತಿ ಕೈಗೆ ಮತ್ತು ಕಾಲಿಗೆ ಗೆಜ್ಜೆ ಕಟ್ಟಿ ಕ್ಷೇತ್ರಾಂಗಣದಲ್ಲಿ ಪ್ರತ್ಯಕ್ಷನಾಗುವ ಹನುಮ ದೈವವು ಚೆಂಡೆಯ ಮತ್ತು ವಾದ್ಯದ ತಾಳಕ್ಕೆ ಹೆಜ್ಜೆ ಹಾಕಿ ದೇವಸ್ಥಾನದ ಸುತ್ತಲೂ ನರ್ತನ ಮಾಡುತ್ತಾ ನೆರೆದ ಭಕ್ತರನ್ನು ಹರಸಿತು.