ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ತಾಂತ್ರಿಕ ನೈಪುಣ್ಯತೆ ಅಗತ್ಯ – ಡಾ. ಉಜ್ವಲ್ ಯು.ಜೆ
ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗೆ ಡೇಟಾಬೇಸ್ ಡೈನಾಮಿಕ್ಸ್ ವಿಷಯದಲ್ಲಿ ನಾಲ್ಕು ದಿನಗಳ ಕಾರ್ಯಾಗಾರವು ಫೆ. ೨೪ ರಂದು ಆರಂಭವಾಯಿತು. ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ವಿಭಾಗ ಮುಖ್ಯಸ್ಥರು, ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ವಿಟಿಯುನ ಎಕ್ಸೆಕ್ಯುಟಿವ್ ಕೌನ್ಸಿಲ್ ಸದಸ್ಯರು ಆದ ಡಾ. ಉಜ್ವಲ್ ಯು.ಜೆ. ಯವರು, ತಾಂತ್ರಿಕತೆಯ ನೈಪುಣ್ಯತೆಯು ವಿದ್ಯಾರ್ಥಿಗಳಿಗೆ ಅತೀ ಅಗತ್ಯ. ಹೊಸ ತಂತ್ರಜ್ಞಾನವನ್ನು ಕಲಿಯುವುದರಿಂದ ವಿದ್ಯಾರ್ಥಿಗಳ ಜ್ಞಾನದ ಮೌಲ್ಯವು ವೃದ್ಧಿಯಾಗುವುದರ ಜೊತೆಗೆ ಕಂಪೆನಿಗಳ ಅವಶ್ಯಕತೆಗೆ ತಕ್ಕ ಹಾಗೆ ತಮ್ಮನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು. ಸಂಪನ್ಮೂಲವ್ಯಕ್ತಿ ಟಾಕಲ್-ಡಿ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ಮ್ಯಾನೇಜಿಂಗ್ ಡೈರೆಕ್ಟರ್, ಚೇತನ್ ಎಸ್.ಪಿ. ಕಾರ್ಯಾಗಾರವನ್ನು ನಡೆಸಿಕೊಟ್ಟರು. ಸಂಯೋಜಕರಾದ ಪ್ರೊ. ಬಾಲಪ್ರದೀಪ್ ಕೆ.ಎನ್., ಪ್ರೊ. ವೆಂಕಟೇಶ್ ಯು.ಸಿ ಉಪಸ್ಥಿತರಿದ್ದರು.
- Friday
- November 22nd, 2024