Ad Widget

ರೈತರ ಪರ ಸಾಲ ಮನ್ನಾ ಬಾಕಿಯ ಕುರಿತು ಭಾರತೀಯ ಕಿಸಾನ್ ಸಂಘ ಹೈಕೋರ್ಟ್ ಗೆ ದೂರು




೨೦೧೮ರಲ್ಲಿ ಆಗಿನ ಕರ್ನಾಟಕ ಸರಕಾರವು ರೈತರ ಸಂಕಷ್ಟ ಪರಿಹರಿಸಲು ರೈತರು ಸಹಕಾರಿ ಸಂಘಗಳಿAದ ಪಡೆದ ಸಾಲಗಳಲ್ಲಿ ರೂಪಾಯಿ ೧ ಲಕ್ಷದವರೆಗಿನ ಮೊಬಲಗನ್ನು ಮನ್ನಾ ಮಾಡಿ ಆದೇಶ ನೀಡಿತು. ಸಾಲವಿರುವ ರೈತರು ಅಗತ್ಯ ದಾಖಲೆಗಳನ್ನು ನೀಡಿ ಈ ಕುರಿತು ಅರ್ಜಿ ಸಲ್ಲಿಸಲು ಸೂಚಿಸಲಾಯಿತು. ಇದನ್ನು ನಂಬಿ ಸರಕಾರ ಸೂಚಿಸಿದ ಅರ್ಹತಾ ಪಟ್ಟಿಯಲ್ಲಿ ಬರುವ ರೈತರಿಂದ ಒತ್ತಾಯಿಸಿ ಅರ್ಜಿಗಳನ್ನು ಸಹಕಾರಿ ಸಂಘಗಳ ಮೂಲಕ ಸಲ್ಲಿಕೆಯಾಯಿತು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸಾಲಮನ್ನಾದ ಮೊಬಲಗು ರೈತರ ಖಾತೆಗಳಿಗೆ ಜಮೆಯಾಗತೊಡಗಿತು. ಎರಡು ವರ್ಷಗಳ ತನಕ ಕೆಲವು ರೈತರಿಗೆ ಹಣ ಬಂದಿದ್ದು, ಆಮೇಲೆ ಈ ಪ್ರಕ್ರಿಯೆ ನಿಂತಿತು.ಇನ್ನೂ ಹಲವಾರು ರೈತರಿಗೆ ಸಾಲಮನ್ನಾ ಮೊಬಲಗು ಬರಲು ಬಾಕಿಯಿದ್ದು ‘ಸಾಲಮನ್ನಾ’ ಸೌಲಭ್ಯ ವಂಚಿತರಾಗಿದ್ದಾರೆ. ಎಂದು ಕಿಸಾನ್ ಸಂಘದ ಅಧ್ಯಕ್ಷ ಎನ್.ಜಿ.ಪ್ರಭಾಕರ ರೈಯವರು ಫೆ.೨೬ರಂದು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಈ ಕುರಿತು ಹಿಂದಿನ ಅವಿಭಜಿತ ಸುಳ್ಯ ತಾಲೂಕಿನ ರೈತರ ‘ಸಾಲಮನ್ನಾ’ ಮೊಬಲಗು ಬರಲು ಬಾಕಿಯಿರುವ ರೈತರ ವಿವರಗಳನ್ನು ಸಂಗ್ರಹಿಸಿ ಮಾನ್ಯ ಕರ್ನಾಟಕ ಉಚ್ಚನ್ಯಾಯಾಲಯಕ್ಕೆ ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕು ಸಮಿತಿಯು ಸಾರ್ವಜನಿಕ ಹಿತಾಸಕ್ತಿ ದೂರು ನೀಡಿರುತ್ತದೆ. ಈ ದೂರಿನಲ್ಲಿ ೩೩೪ ರೈತರು ತಮಗೆ ಇನ್ನೂ ಕೂಡ ಸಾಲಮನ್ನಾದ ಮೊಬಲಗು ಬಂದಿಲ್ಲವೆAದು ವಿವರ ನೀಡಿದ್ದು ಆ ಮೊಬಲಗು ರೂಪಾಯಿ ೩,೦೦.೪೭.೪೩೫-೦೦ ಆಗಿರುತ್ತದೆ. ರಾಜಕೀಯ ಪಕ್ಷಗಳ ನಾಯಕರು ಈಗಲೂ ಕೂಡ ರೈತರ ಸಾಲಮನ್ನಾ ಮಾಡಬೇಕೆಂದು ಒತ್ತಾಯ ಮಾಡುತ್ತಿರುವುದು ಕಾಣುತ್ತದೆ. ಆದರೆ ಅವರ ಸರಕಾರದ ಅವಧಿಯಲ್ಲಿ ಅದು ಯಾಕೆ ರೈತರಿಗೆ ತಲುಪಿಲ್ಲವೆಂದು ವಿಚಾರಿಸುವ ಗೋಜಿಗೆ ಹೋಗುತ್ತಿಲ್ಲ. ಈ ಪಕ್ಷದ ಆಡಳಿತವಿರುವಾಗ ಆ ಪಕ್ಷದ ನಾಯಕರು, ಆ ಪಕ್ಷದ ಆಡಳಿತವಿರುವಾಗ ಈ ಪಕ್ಷದ ನಾಯಕರು ರೈತರ ಸಾಲ ಮನ್ನಾಕ್ಕಾಗಿ ಬೇಡಿಕೆ ಇಡುವುದು ಕಾಣುತ್ತದೆ. ಆದರೆ ಅದರಲ್ಲಿರುವ ಪ್ರಾಮಾಣಿಕತೆ ಎಷ್ಟು ಎಂದು ನಾವು ಗಮನಿಸಬೇಕಾಗಿದೆ. ೨೦೧೮ರಲ್ಲಿ ಕರ್ನಾಟಕ ಸರಕಾರ ಆದೇಶಿಸಿ ತೆಗೆದಿಟ್ಟ ಸಾಲಮನ್ನಾದ ಮೊಬಲಗುಗಳು ಆದಷ್ಟು ಶೀಘ್ರದಲ್ಲಿ ಸಾಲಮನ್ನಾ ವಂಚಿತ ರೈತರಿಗೆ ಸಿಗಲಿ ಎಂದು ಆಶಿಸಿ ಈ ಬಗ್ಗೆ ಕರ್ನಾಟಕ ಸರಕಾರವು ತ್ವರಿತ ಕ್ರಮ ಕೈಗೊಳ್ಳಲಿ ಎಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದು ಅವರು ಹೇಳಿದರು.
೨೦೨೪-೨೭ನೇ ಸಾಲಿನ ಭಾರತೀಯ ಕಿಸಾನ್ ಸಂಘದ ಸದಸ್ಯತ್ವ ಅಭಿಯಾನ ಈಗಾಗಲೇ ಪ್ರಾರಂಭಗೊAಡಿದ್ದು ತಾಲೂಕಿನ ಎಲ್ಲಾ ರೈತ ಬಾಂಧವರು ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದರು.

ಅಡಿಕೆ ಆಮದಿನಿಂದಾಗಿ ಅಡಿಕೆ ಬೆಲೆ ಕುಸಿದಿದೆ.ಅದನ್ನು ಸರಕಾರ ನಿಲ್ಲಿಸಬೇಕು.ಅಡಿಕೆಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಬೆಲೆ ಕುಸಿತದ ಹಿನ್ನೆಲೆಯಲ್ಲಿ ಕ್ಯಾಂಪ್ಕೋ ಸಂಸ್ಥೆ ರೈತರ ಪರವಾಗಿ ನಿಲ್ಲಬೇಕು.ರೈತರ ಮಕ್ಕಳಿಗೆ ಸ್ಕಾಲರ್ ಶಿಪ್ ಕೊಡುವ ವ್ಯವಸ್ಥೆ ಸರಕಾರ ಮಾಡಬೇಕು ಎಂದು ಕಾರ್ಯದರ್ಶಿ ಸಾಯಿಶೇಖರ ಕರಿಕ್ಕಳ ಹೇಳಿದರು.

ಸುಳ್ಯದ ವಿದ್ಯುತ್ ಸಮಸ್ಯೆಗಾಗಿ ಇಲ್ಲಿಯ ಕೃಷಿಕರು, ಬಳಕೆದಾರರು ನಮ್ಮೊಂದಿಗೆ ಕೈಜೋಡಿಸಿದರೆ ಹೋರಾಟ ಮಾಡುತ್ತೇವೆ ಎಂದು ಗೌರವಾಧ್ಯಕ್ಷ ನೆಟ್ಟಾರು ಗೋಪಾಲಕೃಷ್ಣ ಭಟ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಿಸಾನ್ ಸಂಘದ ಉಪಾಧ್ಯಕ್ಷ ಜಯಪ್ರಕಾಶ್ ಕೂಜುಗೋಡು,ಈಶ್ವರ ಭಟ್ ಕಾವಿನಮೂಲೆ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading