ಕಲ್ಮಡ್ಕ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಒತ್ತೆಕೋಲ ನಡಾವಳಿ ಫೆ. 25 ಮತ್ತು ಫೆ.26 ರಂದು ನಡೆಯಿತು.
ಫೆ.25 ರಂದು ಬೆಳಿಗ್ಗೆ ಗಣಪತಿ ಹವನ, ನವಕ ಕಲಾಶಾಭಿಷೇಕ, ನಂತರ ಮೇಲೇರಿಗೆ ಕೊಳ್ಳಿ ಜೋಡಣೆ ಆರಂಭವಾಯಿತು. ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಸಂಜೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಭಂಡಾರ ತೆಗೆಯುವುದು, ರಾತ್ರಿ ಮೇಲೇರಿಗೆ ಅಗ್ನಿ ಸ್ಪರ್ಶ, ಶ್ರೀ ರಾಮ ಭಜನಾ ಮಂಡಳಿ ಕಾಚಿಲ-ಕಲ್ಮಡ್ಕ, ತಾಳ ನಿನಾದಂ ಭಜನಾ ತಂಡ ಪಡ್ಪಿನಂಗಡಿ, ಮರಾಟಿ ಯುವ ವೇದಿಕೆ ಪುತ್ತೂರು ಇವರಿಂದ ಭಜನಾ ತಂಡಗಳಿಂದ ಕುಣಿತ ಭಜನೆ ನೆರವೇರಿತು. ಆಕರ್ಷಕ ಸುಡುಮದ್ದು ಪ್ರದರ್ಶನ, ಶ್ರೀ ಮಹಾವಿಷ್ಣುಮೂರ್ತಿ ದೈವದ ಕುಳಿಚಟ್ಟು ನೆರವೇರಿತು. ಫೆ.26 ರಂದು ಮಂಜಾನೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, ಮಾರಿಕಳ, ಪ್ರಸಾದ ವಿತರಣೆ ನಡೆಯಿತು.
ಫೆ.25 ರಂದು ರಾತ್ರಿ ಶಾಲಾ ಮಕ್ಕಳು, ಅಂಗನವಾಡಿ ಪುಟಾಣಿಗಳು ಹಾಗೂ ವೈದೇಹಿ ಯುವತಿ ಮಂಡಲ ಕಾಚಿಲ ಕಲ್ಮಡ್ಕ ಹಾಗೂ ಊರವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ದೈವದ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಮೊಕ್ತೇಸರರಾದ ರಾಮಚಂದ್ರ ಎಡಪತ್ಯ, ಸೇವಾ ಸಮಿತಿ ಅಧ್ಯಕ್ಷ ಲೋಕಯ್ಯ ನಾಯ್ಕ ಬೊಳಿಯೂರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.