Ad Widget

ಕ್ರಿಕೆಟ್ ಪಂದ್ಯಾಟದಲ್ಲಿ ಪವರ್ ಟ್ರೋಫಿ ಗೆದ್ದ  ಸುಬ್ರಹ್ಮಣ್ಯ ಉಪವಿಭಾಗ ಮೆಸ್ಕಾಂ ತಂಡ

ಪುತ್ತೂರು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಫೆ.24 ರಂದು ನಡೆದ 5ನೆ ವರ್ಷದ ಪುತ್ತೂರು ಮೆಸ್ಕಾಂ ವಿಭಾಗ ಮಟ್ಟದ ಪವರ್ ಟ್ರೋಫಿ-2024 ಕ್ರಿಕೆಟ್ ಪಂದ್ಯಾಟದಲ್ಲಿ ಸುಬ್ರಹ್ಮಣ್ಯ ಉಪವಿಭಾಗ ತಂಡವು ಗೆದ್ದು ಪ್ರಥಮ ಸ್ಥಾನ ಗಳಿಸಿರುತ್ತದೆ.

ಒಟ್ಟು 12 ತಂಡಗಳು ಭಾಗವಹಿಸಿದ್ದು, ಪುತ್ತೂರು ನಗರ ಉಪವಿಭಾಗದ ತಂಡದೆದುರು ಅಭೂತಪೂರ್ವ ಪ್ರದರ್ಶನ ತೋರ್ಪಡಿಸಿ ಸುಬ್ರಹ್ಮಣ್ಯ ಉಪವಿಭಾಗವು ಜಯಶಾಲಿಯಾಗಿರುತ್ತದೆ. ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಂಜ ಶಾಖೆಯ ಚಂದನ್ ಪಡೆದುಕೊಂಡರೆ, ಸರಣಿ ಶ್ರೇಷ್ಠ ಪ್ರಶಸ್ತಿ ಗುತ್ತಿಗಾರು ಶಾಖೆಯ ದಂಡಪ್ಪ ಇವರ ಪಾಲಾಯಿತು. ಹರಿಕೃಷ್ಣ ಕೆ.ಜಿ. ಸಹಾಯಕ ಇಂಜಿನಿಯರ್ ಇವರ ನಾಯಕತ್ವದಲ್ಲಿ, ಚಿದಾನಂದ ಕೆ. ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಹಾಗೂ ಗುತ್ತಿಗಾರು, ಪಂಜ ಮತ್ತು ಸುಬ್ರಹ್ಮಣ್ಯ ಶಾಖೆಯ ಸಿಬ್ಬಂದಿಗಳು ತಂಡದಲ್ಲಿದ್ದು, ಎರಡನೇ ಬಾರಿಗೆ ಪವರ್ ಟ್ರೋಫಿ ಯನ್ನು ಪಡೆದುಕೊಂಡಿದೆ.

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!