Ad Widget

ಸುಳ್ಯ ; ವೆಂಕಟರಮಣ ಸೊಸೈಟಿ ಬೆಳ್ಳಿಹಬ್ಬ ಆಚರಣೆ ಪ್ರಯುಕ್ತ ಗುದ್ದಲಿಪೂಜೆ ಮತ್ತು ಕ್ರೀಡಾ ಸಮ್ಮಿಲನ ಕಾರ್ಯಕ್ರಮ

ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಬೆಳ್ಳಿಹಬ್ಬದ ಪ್ರಯುಕ್ತ ಮಹಾತ್ಮಗಾಂಧಿ ಮಲ್ನಾಡ್ ವಿದ್ಯಾಸಂಸ್ಥೆಗಳ ಶಾಲಾ 2 ಕೊಠಡಿಗಳಿಗೆ ಗುದ್ದಲಿಪೂಜೆ ಹಾಗೂ ಕ್ರೀಡಾ ಸಮ್ಮಿಲನ ಕೊಡಿಯಾಲಬೈಲು ಎಂ.ಜಿ.ಎಂ. ಶಿಕ್ಷಣ ಸಂಸ್ಥೆಗಳ ವಠಾರದಲ್ಲಿ ನಡೆಯಿತು.

. . . . . . . . .

ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಕ್ರೀಡಾಪಟು ಬಾಲಕೃಷ್ಣ ಗೌಡ ಕುದ್ವ ನೆರವೇರಿಸಿದರು. “ಕ್ರೀಡೆ ಪ್ರತಿಯೊಂದು ಜೀವಿಯ ಅವಿಭಾಜ್ಯ ಅಂಗ. ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ದೇಹದ ರಕ್ಷಣೆ, ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ನಮ್ಮಲ್ಲಿ ಕೌಶಲ್ಯವೂ ವೃದ್ಧಿಯಾಗುತ್ತದೆ. ನಿರಂತರವಾಗಿ ಕ್ರೀಡಾ ಅಭ್ಯಾಸದಲ್ಲಿ ತೊಡಗಿಸಿಕೊಂಡಾಗ ಯಶಸ್ಸು ಲಭಿಸುತ್ತದೆ ” ಎಂದು ಹೇಳಿದರು.

. . . . . . .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಇದರ ಅಧ್ಯಕ್ಷ ಪಿ.ಸಿ.ಜಯರಾಮರು ವಹಿಸಿ, ಎಂ.ಜಿ.ಎಂ. ವಿದ್ಯಾಸಂಸ್ಥೆಗಳ ಶಾಲಾ 2 ಕೊಠಡಿಗಳಿಗೆ ಗುದ್ದಲಿಪೂಜೆ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ವಿಶ್ರಾಂತ ದೈಹಿಕ ಶಿಕ್ಷಣ ನಿರ್ದೇಶಕ ರಾಧಾಕೃಷ್ಣ ಮಾಣಿಬೆಟ್ಟು, ಸುಳ್ಯ ಗೌಡ ಸೋಶಿಯೋ ಎಜ್ಯುಕೇಶನ್ ಫೌಂಡೇಶನ್ ಅಧ್ಯಕ್ಷ ಚಂದ್ರಾ ಕೋಲ್ಚಾರ್ ಉಪಸ್ಥಿತರಿದ್ದರು.
ಎಂ.ಜಿ.ಎಂ.ಶಾಲಾ ಸಂಚಾಲಕ ದೊಡ್ಡಣ್ಣ ಬರೆಮೇಲು, ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರುಗಳಾದ ಜಾಕೆ ಸದಾನಂದ, ಪಿ.ಎಸ್.ಗಂಗಾಧರ್, ನಿತ್ಯಾನಂದ ಮುಂಡೋಡಿ, ಕೆ.ಸಿ.ಸದಾನಂದ, ದಾಮೋದರ ನಾರ್ಕೋಡು, ನಳಿನಿ ಸೂರಯ್ಯ, ಜಯಲಲಿತಾ ಕೆ.ಎಸ್., ಪಿಟಿಎ ಅಧ್ಯಕ್ಷೆ ಪೂಜಾ ಆಲೆಟ್ಟಿ, ನವೀನ್ ಚಂದ್ರ ಜೆ.ವಿ., ಲತಾ ಎಸ್ ಮಾವಜಿ, ಹೇಮಚಂದ್ರ ಐ.ಕೆ., ಎಂ.ಜಿ.ಎಂ. ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ , ಉಪಸ್ಥಿತರಿದ್ದರು.
ಬ್ಯಾಂಡ್ ಸೆಟ್ ಕೊಡುಗೆ : ಸೊಸೈಟಿ ನಿರ್ದೇಶಕ ಕೆ.ಸಿ.ಸದಾನಂದರ ಪುತ್ರ ಅರ್ಜುನ್ ಕುರುಂಜಿಯವರು ರೂ.35 ಸಾವಿರ ವೆಚ್ಚದಲ್ಲಿ ಎಂ.ಜಿ.ಎಂ. ಶಾಲೆಗೆ ಬ್ಯಾಂಡ್ ಸೆಟ್ ಕೊಡುಗೆಯಾಗಿ ನೀಡಿದ್ದು, ಅದನ್ನು ಸಮಾರಂಭಲ್ಲಿ ಕೆ.ಸಿ.ಸದಾನಂದರು ಶಾಲೆಯ ಮುಖ್ಯಸ್ಥರಿಗೆ ಹಸ್ತಾಂತರ ಮಾಡಿದರು. ಬಳಿಕ ಸದಾನಂದರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ಸ್ವಾಗತಿಸಿದರು. ನಿರ್ದೇಶಕ ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ಚಂದ್ರಶೇಖರ ಮೇರ್ಕಜೆ ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading