Ad Widget

ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಕಲ್ಮಡ್ಕ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಒತ್ತೆಕೋಲ ನಡಾವಳಿ


ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಕಲ್ಮಡ್ಕದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಒತ್ತೆಕೋಲ ನಡಾವಳಿ ಫೆ. ೨೫ ಮತ್ತು ೨೬ರಂದು ನಡೆಯಲಿದೆ. ಕಾರ್ಯಕ್ರಮವು ಪೂಜ್ಯ ಬ್ರಹ್ಮಶ್ರೀ ರವೀಶ್ರೀ ತಂತ್ರಿ ಕುಂಟಾರು ಇವರ ನೇತೃತ್ವದಲ್ಲಿ ನಡೆಯಲಿದೆ.

. . . . .


ಫೆ.೨೫ರಂದು ಬೆಳಗ್ಗೆ ಗಣಪತಿ ಹವನ, ನವಕ ಕಲಾಶಾಭಿಷೇಕ, ಮೇಲೇರಿಗೆ ಕೊಳ್ಳಿ ಜೋಡಣೆ, ನಂತರ ಶ್ರೀ ರಾಮ ಭಜನಾ ಮಂಡಳಿ ಕಾಚಿಲ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ತೆಗೆಯುವುದು, ಮೇಲೇರಿಗೆ ಅಗ್ನಿ ಸ್ಪರ್ಶ, ರಾತ್ರಿ ಶ್ರೀ ರಾಮ ಭಜನಾ ಮಂಡಳಿ ಕಾಚಿಲ-ಕಲ್ಮಡ್ಕ, ತಾಳ ನಿನಾದಂ ಭಜನಾ ತಂಡ ಪಡ್ಪಿನಂಗಡಿ ಮತ್ತು ಮರಾಟಿ ಯುವ ವೇದಿಕೆ ಭಜನಾ ತಂಡ ಪುತ್ತೂರು ಇವರಿಂದ ಕುಣಿತ ಭಜನೆ ಕಾರ್ಯಕ್ರಮ ನಡೆಯಲಿದೆ. ರಾತ್ರಿ ೧೨.೩೦ರಿಂದ ವೈದೇಹಿ ಯುವತಿ ಮಂಡಲ ಕಾಚಿಲ ಕಲ್ಮಡ್ಕ ಹಾಗೂ ಊರವರಿಂದ “ ಭಾರತ ದರ್ಶನ” ವಿನೂತನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಫೆ.೨೬ ರಂದು ಬೆಳಗ್ಗೆ ೫.೦೦ ಗಂಟೆಗೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ ಮಾರಿಕಳ, ಪ್ರಸಾದ ವಿತರಣೆ ನಡೆಯಲಿದೆ. ೭.೦೦ ಗಂಟೆಗೆ ಶ್ರೀ ಮುಳ್ಳುಗುಳಿಗ ದೈವದ ನೇಮ ನಡೆದು ಪ್ರಸಾದ ವಿತರಣೆ ನಡೆಯಲಿದೆ.

Related Posts

error: Content is protected !!