ಕಾರ್ಯನಿರ್ವಹಣಾ ಸಭೆಯಲ್ಲಿ ಗೊಂದಲಗಳ ಬಗ್ಗೆ ಒಪ್ಪಿಕೊಂಡ ಅಧ್ಯಕ್ಷರು
ಸುಳ್ಯ ಬಿಜೆಪಿ ಮಂಡಲ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಹಿನ್ನಲೆಯಲ್ಲಿ ಇಂದು ಜಿಲ್ಲಾಧ್ಯಕ್ಷರ ಉಪಸ್ಥಿತಿಯಲ್ಲಿ ಕಾರ್ಯನಿರ್ವಹಣಾ ಸಭೆಯು ಸುಳ್ಯ ಬಿಜೆಪಿ ಮಂಡಲ ಕಛೇರಿಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರೀಶ್ ಕಂಜಿಪಿಲಿ ವಹಿಸಿದ್ದರು. ಉದ್ಘಾಟನೆ ನೆರವೇರಿಸಿ ಸತೀಶ್ ಕುಂಪಲ ಮಾತನಾಡುತ್ತಾ ಸುಳ್ಯದಲ್ಲಿ ಗೊಂದಲ ಇರುವುದು ನಿಜ ಆದರೆ ಅವೆಲ್ಲವನ್ನು ಮರೆತು ಕೆಲಸಗಳನ್ನು ಮಾಡೋಣ ಎಂದರು . ನಾವೆಲ್ಲ ಊಹಿಸದ ರೀತಿಯಲ್ಲಿ ರಾಮ ಮಂದಿರ ಮೋದಿ ನೇತೃತ್ವದಲ್ಲಿ ನಿರ್ಮಾಣವಾಗಿದೆ ಹಾಗಿರುವಾಗ ಇಲ್ಲಿನ ಗೊಂದಲಗಳು ನಿವಾರಣೆ ಮಾಡಲಿದ್ದೇವೆ. ಸುಳ್ಯದಲ್ಲಿ ಸುಮಾರು 70 ಸಾವಿರ ಮತಗಳ ಮುನ್ನಡೆ ನೀಡುವಂತೆ ಕೆಲಸ ಮಾಡಬೇಕು ಸುಳ್ಯದಿಂದ 70 ಸಾವಿರ ಲೀಡ್ ನೀಡಬೇಕು ಎಂದು ಹೇಳಿದರು.
ಅಧಿಕೃತವಾಗಿ ಅಧಿಕಾರಿ ಹಸ್ತಾಂತರ.
ಹರೀಶ್ ಕಂಜಿಪಿಲಿ ನೂತನ ಅಧ್ಯಕ್ಷರಾದ ವೆಂಕಟ್ ವಳಲಂಬೆರವರಿಗೆ ಅಧಿಕಾರವನ್ನು ಹಸ್ತಾಂತರಿಸಿದ್ದು ಮಂಡಲ ನೂತನ ಸಮಿತಿಯ ಸದಸ್ಯರುಗಳ ಪಟ್ಟಿ ಕೂಡ ನೀಡಲಾಗಿದ್ದು ಕೆಲವೇ ಕ್ಷಣಗಳಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ
ಈ ಸಭೆಯಲ್ಲಿ ನೇಮಿತ ಅಧ್ಯಕ್ಷರಾದ ವೆಂಕಟ್ ವಳಲಂಬೆ , ಪ್ರಮುಖರಾದ ರವೀಂದ್ರ ಶೆಟ್ಟಿ , ಕಿಶೋರ್ ಬೊಟ್ಯಾಡಿ , ಪೂವಪ್ಪ ನಾಯ್ಕ್ , ಎ ವಿ ತೀರ್ಥರಾಮ , ವಿನಯ ಕುಮಾರ್ ಮುಳುಗಾಡು , ಸುಭೋದ್ ಶೆಟ್ಟಿ ಮೇನಾಲ , ಕಾರೇಶ್ ರೈ ಕೆಡೆಂಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.