Ad Widget

ಸಂವಿಧಾನ ಅಮೃತ ಮಹೋತ್ಸವ ಜಾಥಾಕ್ಕೆ ಸುಬ್ರಹ್ಮಣ್ಯದಲ್ಲಿ ಭವ್ಯ ಸ್ವಾಗತ

    ಭಾರತ ದೇಶಕ್ಕೆ ಸಂವಿಧಾನ ರೂಪುಗೊಂಡು 75 ವರ್ಷಗಳು ಪೂರ್ತಿ ಗೊಂಡ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸುವ ಜಾತಕ್ಕೆ ಚಾಲನೆ ನೀಡಿದ್ದು ಫೆ.21ರಂದು ಬುಧವಾರ ಮಧ್ಯಾಹ್ನ ಸುಬ್ರಮಣ್ಯಕ್ಕೆ ಜಾತ ವಾಹನ ತಲುಪಿದಾಗ ಭವ್ಯ ಸ್ವಾಗತದೊಂದಿಗೆ ಬರ ಮಾಡಿಕೊಂಡು ಸಮಾರಂಭವನ್ನು ಏರ್ಪಡಿಸಲಾಯಿತು.

. . . . .

         ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೇ ಸುಜಾತ ಕಲ್ಲಾಜೆ ವಹಿಸಿ ದೀಪ ಪ್ರಜ್ವಲನ ಮಾಡಿದರು. ಜಾತ್ರಾದ ನೋಡಲ್ ಅಧಿಕಾರಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕೃಷ್ಣರವರು ಪ್ರಸ್ತಾವಿಕದೊಂದಿಗೆ ಜಾತಾದ ಉದ್ದೇಶ ಹಾಗೂ ವಿವರಗಳನ್ನು ನೀಡಿದರು ಮುಖ್ಯ ಅತಿಥಿಗಳಾಗಿ ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ಸಂವಿಧಾನದ ಉದ್ದೇಶ ನಡೆದು ಬಂದ ದಾರಿಯ ಬಗ್ಗೆ ಮಾತನಾಡಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಅವರು ಭಾರತದ ಸಂವಿಧಾನದ ಪೀಠಿಕೆಯ ಪ್ರತಿಜ್ಞೆ ಬೋಧಿಸಿದರು.

ಇದೇ ಸಂದರ್ಭದಲ್ಲಿ ಜಾನಪದ ಕಲಾವೇದಿಕೆ ಸುರತ್ಕಲ್ ನವರು ಸಂವಿಧಾನಕೆ ಸಂಬಂಧಪಟ್ಟ ಬೀದಿ ನಾಟಕವನ್ನು ಮಾಡಿ ತೋರಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಚ್ಎಲ್ ವೆಂಕಟೇಶ್ ಗ್ರಾಮಕರಣಿಕರಾದ ರವಿಚಂದ್ರ ಗ್ರಾಮ ಪಂಚಾಯಿತಿನ ಸದಸ್ಯರುಗಳು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪದವಿ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕುಮಾರಸ್ವಾಮಿ ವಿದ್ಯಾಲಯದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಎನೇಕಲ್ ಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಐನೆಕಿದು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಹಾಗೂ ವಿದ್ಯಾರ್ಥಿಗಳು ಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ  ವಿದ್ಯಾರ್ಥಿಗಳು ಹಾಜರಿದ್ದರು. ಜಾಗೃತಿ ಜಾತ ಕಾರ್ಯಕ್ರಮಕ್ಕೆ ಸುಬ್ರಹ್ಮಣ್ಯದ ಹಲವು ಸಂಘ-ಸಂಸ್ಥೆಗಳ ಅಧ್ಯಕ್ಷರು ಹಾಗೂ ಸದಸ್ಯರುಗಳು ಸಂಪೂರ್ಣ ಸಹಕಾರದೊಂದಿಗೆ ಕೈಜೋಡಿಸಿದ್ದರು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋನಪ್ಪ. ಡಿ ಸ್ವಾಗತದೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ತದನಂತರ ಜಾತವಾಹನವನ್ನು ಭವ್ಯ ಮೆರವಣಿಗೆಯೊಂದಿಗೆ ಸುಬ್ರಹ್ಮಣ್ಯದಿಂದ ಬಳಪಕ್ಕೆ ಬೀಳ್ಕೊಡಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!