
ವ್ಯಕ್ತಿಯೋರ್ವನ ಕೈಯಲ್ಲಿ ಪಟಾಕಿ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡ ಘಟನೆ ಫೆ.20ರಂದು ಬೆಳಿಗ್ಗೆ ಕನಕಮಜಲಿನಲ್ಲಿ ಸಂಭವಿಸಿದೆ.
ಕೈಯ ಬೆರಳುಗಳಿಗೆ ಗಂಭೀರವಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದ ಏಕಹಾ ಭಜನೆಯು ಜರುಗುತ್ತಿದ್ದು, ಕನಕಮಜಲು ಗ್ರಾಮದ ಗಬ್ಬಲಡ್ಕ ಪುರುಷೋತ್ತಮ ನಾಯ್ಕರ ಮಗ ಚಂದ್ರಶೇಖರ ಗಬ್ಬಲಡ್ಕ ಎಂಬವರು ಪಟಾಕಿಯೊಂದನ್ನು ಸಿಡಿಸುವ ವೇಳೆ ಕೈಯಲ್ಲೇ ಸ್ಪೋಟಗೊಂಡು, ಗಂಭೀರವಾಗಿ ಗಾಯಗೊಂದಿದೆ. ತಕ್ಷಣ ಸ್ಥಳೀಯರು ಸೇರಿ ಅವರನ್ನು ಸುಳ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.