Ad Widget

ಸಂಪಾಜೆ ಗ್ರಾಮ ಪಂಚಾಯತ್ ಗ್ರಾಮ ಸಭೆ

ಸಂಪಾಜೆ ಗ್ರಾಮ ಪಂಚಾಯತ್ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಕೆ. ಹನೀಫ್ ಸರ್ವರನ್ನು ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ ಪ್ರಸ್ತಾವಿಕವಾಗಿ ಮಾತನಾಡಿ ಗ್ರಾಮ ಪಂಚಾಯತ್ ತೆರಿಗೆ ಕುಡಿಯುವ ನೀರು, ಲೈಸೆನ್ಸ್ ಸಮಯಕ್ಕೆ ಸರಿಯಾಗಿ ಪಾವತಿಮಾಡಿ ಸಹಕರಿಸುವಂತೆ ಹಾಗೂ ಗ್ರಾಮದ ಅಭಿವೃದಿಯಲ್ಲಿ ಕೈಜೋಡಿಸುವಂತೆ ಕರೆ ನೀಡಿದರು ಕಾರ್ಯದರ್ಶಿ ಪದ್ಮಾವತಿ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಅನುಪಾಲನ ವರದಿ ಓದಲಾಯಿತು ವರದಿ ಮೇಲೆ ಚರ್ಚೆ ನಡೆಯಿತು. ಕುಡಿಯುವ ನೀರಿನ ತೆರಿಗೆ ವಸೂಲಿ ಕಡಿಮೆಯಾಗಿದೆ. ಖರ್ಚು ಜಾಸ್ತಿ ಆಗಿದೆ ಕುಡಿಯುವ ನೀರು ಬಿಲ್ ಯಾಕೆ ಬಾಕಿ. ಕುಡಿಯುವ ನೀರಿನ ಬಗ್ಗೆ ಹೆಚ್ಚು ನಿಗಾ ವಹಿಸಿ ನೀರು ಬಿಲ್ಲು ಕಟ್ಟಡವರ ಸಂಪರ್ಕ ಕಡಿತ ಗೊಳಿಸುವ ಬಗ್ಗೆ ಅಭಿವೃದ್ಧಿ ಅಧಿಕಾರಿಗೆ ಸೂಚಿಸಲಾಯಿತು.. ದರ್ಖಾಸ್ ಹಾಗೂ ಕಡೆಪಾಲ ಬಳಿ ಕುಡಿಯುವ ನೀರಿನ ಟ್ಯಾಂಕ್ ರಚನೆ. ಗ್ರಾಮದ ರಸ್ತೆ ಚರಂಡಿ ರಚನೆ ಬಗ್ಗೆ ಗ್ರಾಮಸ್ಥರು ಚರ್ಚಿಸಿದರು ಮೆಸ್ಕಾಂ ಸಬ್ ಸ್ಟೇಷನ್ ಕಾಮಗಾರಿ ದರ್ಖಾಸ್ ಬಳಿ ವಿದ್ಯುತ್ ತಂತಿ ಬದಲಾವಣೆ. ಪ -ಜಾತಿ ಕಾಲನಿಯಲ್ಲಿ ವಿದ್ಯುತ್ ತಂತಿ ಬದಲಾವಣೆ. ದರ್ಖಾಸ್ ಕುಡಿಯುವ ನೀರಿನ ಸಮಸ್ಯೆ. ಜನತಾ ಕಾಲನಿ ಬಾಲಕೃಷ್ಣ ಮನೆಗೆ ಕುಡಿಯುವ ನೀರಿನ ಸಮಸ್ಯೆ ಆನೆ ಹಾವಳಿ, ಗೂನಡ್ಕ ಶಾರದಾ ಶಾಲಾ ಬಳಿ ಇರುವ ವಿದ್ಯುತ್ ತಂತಿ ಬದಲಾವಣೆ. ಕಲ್ಲುಗುಂಡಿ ಆರ್. ಎಂ. ಎಸ್. ಎ ಹೈಸ್ಕೂಲ್ ಆರಂಭ ಆಗಿ 10 ವರ್ಷ ಕಳೆದರೂ ಸ್ವತಃ ಕಟ್ಟಡ ಇಲ್ಲ, ಅಧ್ಯಾಪಕರ ಕೊರತೆ, ಕೆನರಾ ಬ್ಯಾಂಕ್ ಸಿಬ್ಬಂದಿ ಕೊರತೆ, ಪೆರುಂಗೋಡಿ ಪೇರಡ್ಕ ರಸ್ತೆಯಲ್ಲಿ ಉಬ್ಬು ತಗ್ಗಿಸುವಿಕೆ, ಕೃಷಿ ತೋಟಗಾರಿಕೆ. ಸವಲತ್ತುಗಳ. ಮಾಹಿತಿ. ಅರಣ್ಯ, ಕಂದಾಯ, ಅಬಕಾರಿ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್, ಪಶುಸಂಗೋಪನೆ , ಅಂಚೆ, ಕೆನರಾ ಬ್ಯಾಂಕ್, ಪೊಲೀಸ್, ಶಿಕ್ಷಣ, ದೇವರಾಜ ಅರಸ್ ಹಿಂದುಳಿದ ವರ್ಗಗಳ ಇಲಾಖೆ , ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ , ಅರೋಗ್ಯ ಇಲಾಖೆ, ಮೆಸ್ಕಾಂ ,ನರೇಗಾ ಯೋಜನೆ ಹೀಗೆ ಬಹುತೇಕ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಸುಹಾನಾ ನೋಡೆಲ್ ಅದಿಕಾರಿಯಾಗಿ ಭಾಗವಹಿಸಿ ಸುಸೂತ್ರವಾಗಿ ಗ್ರಾಮಸಭೆ ನಡೆಸಿ ಕೊಟ್ಟರು ಸಭೆಯಲ್ಲಿ ಬೀದಿ ದೀಪ, ಕುಡಿಯುವ ನೀರು, ಕಲ್ಲುಗುಂಡಿ ಪೇಟೆಯಲ್ಲಿ ವಾಹನ ಪಾರ್ಕಿಂಗ್ ಬಗ್ಗೆ ಚರ್ಚೆ ನಡೆಯಿತು. ತೆರಿಗೆ ಪರಿಷ್ಕರಣೆ, ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮ ಬಗ್ಗೆ ಚರ್ಚೆ ನಡೆಯಿತು ಚರ್ಚೆಯಲ್ಲಿ ಗಣಪತಿ ಭಟ್, ಕಿಶೋರ್, ಹಸೈನಾರ್ ಕೇಶವ ಬಂಗ್ಲೆಗುಡ್ಡೆ ವಿಜಯ ಆಲಡ್ಕ ಮಹಮ್ಮದ್ ಕುಂಞ, ನಾಗೇಶ್ ಪಿ. ಆರ್, ರಾಜೇಶ್, ಸವಿತಾ ರೈ, ಪುಷ್ಪರಾಜ್ ಗಾಂಭೀರ, ಜಯಂತಿ, ಕಾಂತಿ, ಭಾಗವಹಿಸಿದರು. ಅಧಿಕಾರಿಗಳು ಇಲಾಖೆಯ ಮಾಹಿತಿ ನೀಡಿದರು. ಆಶಾ, ಅಂಗನವಾಡಿ, ಅರೋಗ್ಯ, ಕಾರ್ಯಕರ್ತರು, ಶಾಲಾ ಮುಖ್ಯ ಗುರುಗಳು, ಪಂಚಾಯತ್ ಸಿಬ್ಬಂದಿಗಳು, ಕುಡಿಯುವ ನೀರಿನ ಪಂಪ್ ಆಪರೇಟರ್ ಗಳು ಹಾಜರಿದ್ದರು. ವೇದಿಕೆಯಲ್ಲಿ ಸದಸ್ಯರುಗಳಾದ ಸೋಮಶೇಖರ್ ಕೊಇಂಗಾಜೆ, ಜಿ. ಕೆ. ಹಮೀದ್ ಗೂನಡ್ಕ , ಜಗದೀಶ್ ರೈ, ಸುಂದರಿ ಮುಂಡಡ್ಕ ವಿಮಲಾ ಪ್ರಸಾದ್, ಲಿಸ್ಸಿ ಮೊನಾಲಿಸಾ, ಅನುಪಮಾ, ಶವಾದ್, ರಜನಿ, ಸುಶೀಲ, ವಿಜಯ ಕುಮಾರ್ ಉಪಸ್ಥಿತರಿದ್ದು ಚರ್ಚೆಯಲ್ಲಿ ಭಾಗವಹಿಸಿದರು ಜಗದೀಶ್ ರೈ ವಂದಿಸಿದರು ಹರ್ಶಿತ್ ಕಾರ್ಯಕ್ರಮ ನಿರೂಪಿಸಿದರು

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!