

ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ವಿಸ್ತರಿಸಲು ವಿಕೇಂದ್ರೀಕರಣದ ದ್ಯೇಯದೊಂದಿಗೆ ಹಾಗೂ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಆಸಕ್ತಿಯನ್ನು ಮೂಡಿಸಲು ಹೋಬಳಿ ಘಟಕ ಸ್ಥಾಪಿಸುವ ಜೊತೆಗೆ ಗ್ರಾಮ ಮಟ್ಟದಲ್ಲೂ ಸಾಹಿತ್ಯ ಪರಿಷತ್ತಿನ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಶ್ರೀನಾಥ್ ಎಂ.ಪಿ. ಸುಳ್ಯ ಹಾಗೂ ಪಂಜ ಹೋಬಳಿ ಘಟಕದ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭದಲ್ಲಿ ಮಾತಾನಾಡಿದರು. ಮುಖ್ಯ ಅಥಿತಿಗಳಾಗಿ ಆಗಮಿಸಿದ ಶ್ರೀ ಕುತ್ಯಾಳ ನಾಗಪ್ಪ ಗೌಡ ಇವರು ಮಾತನಾಡಿ ಸಾಹಿತ್ಯ ಸಮ್ಮೇಳನಗಳ ಜೊತೆಗೆ ಸಾಹಿತ್ಯದ ವಿಮರ್ಷೆಗಳು ಕೂಡ ನಡೆಯಬೇಕೆಂದು ಕರೆ ಇತ್ತರು. ಜಿಲ್ಲಾಧ್ಯಕ್ಷ ಶ್ರೀನಾಥ್ ಉಜಿರೆ ಇವರು ಕನ್ನಡ ಧ್ವಜವನ್ನು ಹಸ್ತಾಂತರಿಸುವ ಮೂಲಕ ಪದ ಸ್ವೀಕಾರ ಕಾರ್ಯಕ್ರಮವನ್ನು ನೇರವೇರಿಸಿದರು ಮತ್ತು ಪದಾಧಿಕಾರಿಗಳಿಗೆ ಶಾಲು ನೀಡಿ ಸ್ವಾಗತಿಸಿದರು. ಸಭೆಯಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತಿ ನಾಗಪ್ಪ ಗೌಡ (ಕಿರಣ) ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ, ಸುಳ್ಯ ಹೊಬಳಿ ಘಟಕ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಪಂಜ ಹೋಬಳಿ ಘಟಕ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ ಉಪಸ್ತಿತರಿದ್ದರು. ಸುಳ್ಯ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಶೇಖರ ಪೆರಾಲು ಎಲ್ಲಾರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು.

ಗೌರವ ಕಾರ್ಯದರ್ಶಿ ಚಂದ್ರಮತಿ ಧನ್ಯವಾದ ಗೈದರು. ಲತಾಶ್ರೀ ಸುಪ್ರೀತ್ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಸುಳ್ಯ ಹೋಬಳಿ ಸಮಿತಿಯ ಅಧ್ಯಕ್ಷರಾಗಿ ಚಂದ್ರಾವತಿ ಬಡ್ಡಡ್ಕ, ಗೌರವ ಕಾರ್ಯದರ್ಶಿಯಾಗಿ ಅಬ್ದುಲ್ಲಾ ಅರಂತೋಡು, ಗೌರವ ಕೋಶಾಧ್ಯಕ್ಷರಾಗಿ ಚಿದಾನಂದ ಯು ಎಸ್, ಸದಸ್ಯರುಗಳಾಗಿ ಅಶ್ವಿನಿ ಕೋಡಿಬೈಲು, ನಂದರಾಜ್ ಸಂಕೇಶ, ಎ. ವಿಜಯ ಕುಮಾರ್, ಸಂಧ್ಯಾ ಮಂಡೆಕೋಲು, ಅಬ್ದುಲ್ಲಾ ಅರಂತೋಡು ಆಯ್ಕೆಯಾಗಿದ್ದಾರೆ. ಪದ ನಿಮಿತ್ತ ಸದಸ್ಯರು ಶಿಕ್ಷಣ ಇಲಾಖೆ ಪ್ರತಿನಿಧಿಯಾಗಿ ಮಮತಾ ರವೀಶ್ ಪಡ್ಡಂಬೈಲ್, ಪ.ಪೂರ್ವ ಪ್ರೌಢ ಶಾಲಾ ಮುಖ್ಯಸ್ಥರಾಗಿ ಪ್ರಕಾಶ್ ಮೂಡಿತ್ತಾಯ, ಸಂಘಟನಾ ಕಾರ್ಯದರ್ಶಿರಾಗಿ ಭಾಗೀಶ್ ಕೆ.ಟಿ, ಸಲಹೆಗಾರರಾಗಿ ಕಿಶೋರ್ ಕಿರ್ಲಾಯ, ಡಾ. ರಂಗಯ್ಯ, ಮನಮೋಹನ ಮುಡೂರು ಆಯ್ಕೆಯಾದರು. ಪಂಜ ಹೋಬಳಿ ಘಟಕ ಪದಾಧಿಕಾರಿಯಾಗಿ ಅಧ್ಯಕ್ಷರಾಗಿ ಬಾಬು ಗೌಡ ಅಚ್ರಪ್ಪಾಡಿ, ಗೌರವ ಕಾರ್ಯದರ್ಶಿಯಾಗಿ ರೂಪವಾಣಿ, ಕೋಶಾಧ್ಯಕ್ಷರಾಗಿ ಪ್ರಭಾಕರ ಕಿರಿಭಾಗ, ಸದಸ್ಯರಾಗಿ ರಮೇಶ ಮೆಟ್ಟಿನಡ್ಕ, ಶಿವರಾಮ ಶಾಸ್ತ್ರಿ ಆಚಳ್ಳಿ, ಶ್ರೀಮತಿ ಸವಿತಾ, ಶ್ರೀಮತಿ ಪೂರ್ಣಿಮಾ, ಶ್ರೀಮತಿ ರಮ್ಯಾ ದೀಲಿಪ್ ಬಾಬ್ಲುಬೆಟ್ಟು, ಶ್ರೀ ಬಿಟ್ಟಿ ಬಿ ನೆಡುನಿಲಮ್, ಪದನಿಮ್ಮಿತ್ತ ಸದಸ್ಯರುಳಾಗಿ ವೆಂಕಪ್ಪ ಕೇನಾಜೆ, ಪ್ರಾಂಶುಪಾಲರು ಸಪಪೂ ಕಾ . ಪಂಜ., ಕುಶಾಲಪ್ಪ ಟಿ ಸಿಆರ್ ಪಿ .ಶಿಕ್ಷಣ ಇಲಾಖೆ ಪ್ರತಿನಿಧಿ, ಗೌರವ ಸಲಹೆಗಾರರಾಗಿ ಮಂಜುನಾಥ ಉಂಚನ, ಕುಶಾಲಪ್ಪ ಗೌಡ ಯು., ಮೋಹನ ಪಾರೆಪ್ಪಾಡಿ ಆಯ್ಕೆಯಾದರು.