
ಸುಬ್ರಹ್ಮಣ್ಯ ಫೆ.17: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಒಳಾಂಗಣದ ಅರಿ ಕೊಟ್ಟಿಲು (ನೈವೇದ್ಯ ಕೊಠಡಿ) ದುರಸ್ತಿಯಲ್ಲಿದ್ದು ,ದುರಸ್ತಿ ಕಾರ್ಯ ಈ ಹಿಂದೆ ಆರಂಭಗೊಂಡು ಇದೀಗ ಪೂರ್ಣಗೊಂಡಿದ್ದು 24ರಂದು ಶನಿವಾರ ದೇವಳದ ವಾರ್ಷಿಕ ಬ್ರಹ್ಮ ಕಳಸೋತ್ಸವದ ವಾರ್ಷಿಕ ದಿನದಂದು ಲೋಕಾರ್ಪಣೆಗೊಳ್ಳಲಿರುವುದಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ. ಇದರ ಅಂಗವಾಗಿ 22ನೇ ತಾರೀಕು ಗುರುವಾರದಂದು ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭಗೊಂಡು 24ರಂದು ಮುಕ್ತಾಯಗೊಳ್ಳಲಿದೆ ಪ್ರಾರಂಭದ ದಿನ22 ರಂದು ಪ್ರಾತಕಾಲ 12 ತೆಂಗಿನ ಕಾಯಿ ಗಣಪತಿ ಹವನ ,ವಾಸ್ತು ಪೂಜೆ, ರಾಕ್ಷೋಜ್ಞ ಹೋಮ, ಮತ್ತು ವಾಸ್ತು ಬಲಿ ನಡೆಯಲಿರುವುದು. 23 ರಂದು ಬೆಳಿಗ್ಗೆ ಪವಮಾನ ಹೋಮ ನಡೆಯಲಿದೆ. 24ರಂದು ಬ್ರಹ್ಮಕಲಶೋತ್ಸವದ ವಾರ್ಷಿಕ ದಿನದಂದು ಬೆಳಿಗ್ಗೆ 108 ಸಿಯಾಳ ಭಿಷೇಕ ಹೋಮ ಸಹಿತ 108 ಕಲಶ ರಾಧನೆ ,ಕಲಶಾಭಿಷೇಕ, ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿರುವುದಾಗಿ ಅವರು ತಿಳಿಸಿರುತ್ತಾರೆ. ಬ್ರಹ್ಮ ಕಲಶೋತ್ಸವದ ವಾರ್ಷಿಕ ದಿನವಾದ 24ರಂದೆ ಖ್ಯಾತ ಉದ್ಯಮಿಗಳಾದ ಎಎಂಆರ್ ಗ್ರೂಪ್ ಹೈದರಾಬಾದ್ ಇಲ್ಲಿಯ ಶ್ರೀ ಮಹೇಶ್ ರೆಡ್ಡಿ ಅವರು ಶ್ರೀ ದೇವರಿಗೆ ಅಂದಾಜು ಒಂದು ಕೋಟಿ ಮೌಲ್ಯದ ಚಿನ್ನದ ಪ್ರಭಾವಳಿಯನ್ನು ಸಮರ್ಪಣೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.