ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಪ್ರತಿಭಟನಾಕಾರರು.
ದೆಹಲಿಯಲ್ಲಿ ರೈತ ಸಂಘಟನೆಗಳು ಹಮ್ಮಿಕೊಂಡಿರುವ ಬ್ರಹತ್ ಹೋರಾಟ ದಿಲ್ಲಿ ಚಲೋ ಅಂಗವಾಗಿ ರೈತರು ಮತ್ತು ಕಾರ್ಮಿಕರು ಕರೆ ಕೊಟ್ಟಿರುವ ದೇಶದಾಧ್ಯಂತ ಗ್ರಾಮೀಣ ಭಾರತ್ ಬಂದ್ ಗೆ ಬೆಂಬಲವಾಗಿ ಇಂದು
ಸಮಾನಮನಸ್ಕ ರೈತಪರ ಹೋರಾಟಗಾರರು ಮತ್ತು ರೈತ ಸಂಘಟನೆಗಳ ನೇತೃತ್ವದಲ್ಲಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನಾ ಸಭೆ ನಡೆಯಿತು.
ಪ್ರತಿಭಟನೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ ವೆಂಕಪ್ಪ ಗೌಡ, ಆಮ್ ಆದ್ಮಿ ಪಕ್ಷದ ಮುಖಂಡ ಅಶೋಕ್ ಅಡಮಲೆ, ಕಾರ್ಮಿಕ ಮುಖಂಡ ಕೆ.ಪಿ ಜಾನಿ, ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಬೂತಕಲ್ಲು, ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪ್ರಮುಖರಾದ ಚೇತನ್ ಕಜೆಗದ್ದೆ, ಪಿ ಎಸ್ ಗಂಗಾಧರ, ಸುರೇಶ್ ಎಂ ಹೆಚ್, ಕೆ ಎಂ ಮುಸ್ತಫಾ, ಶಿವಕುಮಾರ್ ಕಂದಡ್ಕ, ರೋಹನ್ ಪೀಟರ್, ದಿವಾಕರ ಪೈ, ರಾಮಚಂದ್ರ ಅಮೈ, ಧೀರಾ ಕ್ರಾಸ್ತಾ, ಚೆನ್ನಕೇಶವ ಕನಿಪ್ಪಿಲ, ವಸಂತ ಪೆಳ್ತಡ್ಕ, ಭೋಜಪ್ಪ ನಾಯ್ಕ, ರವಿಕುಮಾರ್ ಕಿರೀಭಾಗ, ಸತ್ಯಕುಮಾರ್ ಅಡಿಂಜ, ಇಬ್ರಾಹಿಂ ಶಿಲ್ಪಾ, ರಾಜು ಪಂಡಿತ್, ಉಮ್ಮರ್ ಕುರುಂಜಿ ಗುಡ್ಡೆ, ಶಶಿಧರ್ ಕೇರ್ಪಳ, ವಿಶ್ವನಾಥ ನೆಲ್ಲಿಬಂಗಾರಡ್ಕ, ಯೂಸುಫ್ ಅಂಜಿಕಾರ್, ಶಹೀದ್ ಪಾರೆ, ಶಾಫಿ ಕುತ್ತಮೊಟ್ಟೆ, ಹರಿಶ್ಚಂದ್ರ ಪಂಡಿತ್, ಕೃಷ್ಣ ಭಟ್ ಮುಂಡಕಜೆ, ಶಾರಿಕ್ ಮೊಗರ್ಪಣೆ, ಮಾಧವ ಗೌಡ ಸುಳ್ಯಕೋಡಿ, ಮಂಜುನಾಥ್ ಮಡ್ತಿಲ, ಜತ್ತಪ್ಪ ರೈ, ಅಕ್ಷತ್ ಕ್ರಾಸ್ತಾ, ರಜಾಕ್, ಸಿದ್ದಿಕ್ ಕೊಕ್ಕೊ, ಸೇರಿದಂತೆ ರೈತ ಮುಖಂಡರು, ವಿವಿಧ ಪಕ್ಷಗಳ ನಾಯಕರು, ಭಾಗವಹಿಸಿದ್ದರು. ಗೋಕುಲ್ ದಾಸ್ ಸುಳ್ಯ ಸ್ವಾಗತಿಸಿ, ಭವಾನಿಶಂಕರ್ ಕಲ್ಮಡ್ಕ ವಂದಿಸಿದರು. ಶಶಿಧರ್ ಎಂ ಜೆ ಕೊಯಿಕುಳಿ ಕಾರ್ಯಕ್ರಮ ನಿರ್ವಹಿಸಿದರು.