Ad Widget

ಸುಳ್ಯ; ಮಾ.3 ರಂದು ಪಲ್ಸ್ ಪೋಲಿಯೊ – ಪೂರ್ವಭಾವಿ ಸಭೆ


ತಾಲೂಕು ಕಚೇರಿಯಲ್ಲಿ ಮಾ.3ರಂದು ನಡೆಯಲಿರುವ ಪಲ್ಸ್  ಪೋಲಿಯೊ ಕಾರ್ಯಕ್ರಮದ ಪೂರ್ವಭಾವಿ ಸಭೆಯು ನಡೆಯಿತು.

ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮಹೋತ್ರರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ತಹಶೀಲ್ದಾರ್ ಮಂಜುನಾಥ್, ಇ.ಒ. ಪರಮೇಶ್ವರ, ತಾಲೂಕು ವೈದ್ಯಾಧಿಕಾರಿ ಡಾ.ನಂದಕುಮಾರ್, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಕರುಣಾಕರ,ಡಾ .ಮಂಜುನಾಥ್,  ಡಾ. ತ್ರಿಮೂರ್ತಿ, ಡಾ.ವೀಣಾ, ನ.ಪಂ. ಮುಖ್ಯಾಧಿಕಾರಿ ಸುಧಾಕರ್, ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ಪಿ.ಬಿ., ರೋಟರಿ‌ಕ್ಲಬ್ ಅಧ್ಯಕ್ಷ ಆನಂದ ಖಂಡಿಗ, ಸಿಡಿಪಿಒ ಮೇಲ್ಚಿಚಾರಕರು, ಮೆಸ್ಕಾಂ ಇಲಾಖೆಯವರು, ಕೆ.ವಿ.ಜಿ. ಆಸ್ಪತ್ರೆಯವರು ಮೊದಲಾದವರಿದ್ದರು.

ಸಭೆಯಲ್ಲಿ ಡಾ.ನಂದಕುಮಾರ್ ರವರು, ಮಾ.3ರಂದು ಪಲ್ಸಿ ಪೋಲಿಯೊ ನಡೆಯಲಿದ್ದು, 10220 ಮಕ್ಕಳ ಗುರಿ ನೀಡಲಾಗಿದೆ. ತಾಲೂಕಿನಲ್ಲಿ 75 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ. ಅಂಗನವಾಡಿ ಕೇಂದ್ರ, ತಾಲೂಕು ಆಸ್ಪತ್ರೆ, ಉಪಕೇಂದ್ರ, ಸುಳ್ಯ‌ಬಸ್ ನಿಲ್ದಾಣ, ಸುಬ್ರಹ್ಮಣ್ಯ ದೇವಸ್ಥಾನ ದ ವಠಾರದಲ್ಲಿ ಪೋಲಿಯೊ ನೀಡಲಾಗುವುದು. ಮಾ.3ರಂದು ಬೆಳಗ್ಗೆ 8 ಗಂಟೆಯಿಂದ 5 ಗಂಟೆ ತನಕ ಲಸಿಕೆ ನೀಡಲಾಗುವುದು ಎಂದು ವಿವರ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಎ.ಸಿ. ಜುಬಿನ್ ಮೊಹಾತ್ರ ಮಾತನಾಡಿ, ಲಸಿಕೆಯಲ್ಲಿ ನೀಡಿದ ಗುರಿ ತಲುಪಬೇಕು. ಈ ನಿಟ್ಟಿನಲ್ಲಿ ಲಸಿಕಾ ಕಾರ್ಯ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಸೂಚನೆ ನೀಡಿದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!