ಕಾಸರಗೋಡು ಜಿಲ್ಲೆಯ ಕುಂಬಳೆ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವವು ಮಾ.1 ರಿಂದ ಮಾ.7ರ ತನಕ ನಡೆಯಲಿದ್ದು, ಆ ಪ್ರಯುಕ್ತ ಮಾ.3ರಂದು ಸುಳ್ಯದ ಚೆನ್ನಕೇಶವ ದೇವಾಲಯದ ಬಳಿಯಿಂದ ಪೆರ್ಣೆ ಕ್ಷೇತ್ರಕ್ಕೆ ಹಸಿರುವಾಣಿ ಸಮರ್ಪಣೆಯು ನಡೆಯುವುದು. ಇದಕ್ಕಾಗಿ ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ತಾಲೂಕು ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಉದ್ದಂತಡ್ಕ ಹೇಳಿದರು.
ಫೆ.16ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಅವರು, ನಮ್ಮ ಸಮಾಜದ ಕುಲದೇವತೆಯಾಗಿರುವ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ನಡೆದು 20 ವರ್ಷಗಳು ಕಳೆದಿದ್ದು ಇದೀಗ ಮಾರ್ಚ್ ತಿಂಗಳ 1 ರಿಂದ 7 ರವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.ಮಾ.1ರಂದು ಉಗ್ರಾಣ ತುಂಬಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯುವುದು. ಬಳಿಕ ಉತ್ಸವಗಳು ನಡೆಯುವುದು. ಮಾ.3ರಂದು ಬೀರ್ಣಾಳ್ವ ದೈವದ ನರ್ತನ ಸೇವೆ ನಡೆದು ಪ್ರಸಾದ ವಿತರಣೆ ನಡೆಯಲಿದೆ. ಮಾ.4, 5 ಹಾಗೂ 6ರಂದು ಕೂಡಾ ದೈವದ ನರ್ತನ ನಡೆದು, ಮಾ.7 ರಂದು ಶ್ರೀ ಮುಚ್ಚಿಲೋಟ್ ಭಗವತೀ ಅಮ್ಮನವರ ಸಿರಿಮುಡಿ ದರ್ಶನ ಪುಲ್ಲೂರ್ ಕಾಳಿ ದೈವದೊಂದಿಗೆ ಭೇಟಿ, ಪ್ರಸಾದ ವಿತರಣೆ ನಡೆಯುವುದು ಎಂದು ಅವರು ವಿವರ ನೀಡಿದರು.
ಮಾ.3ರಂದು ಸುಳ್ಯದಿಂದ ಸಮಾಜ ಬಾಂಧವರಿಂದ ಹಸಿರುವಾಣಿ ಸಮರ್ಪಣೆ.
ಮಾ.3ರಂದು ನಮ್ಮ ಸಮಾಜದ ಎಲ್ಲರೂ ಸೇರಿಕೊಂಡು ಕ್ಷೇತ್ರಕ್ಕೆ ಹಸಿರುವಾಣಿ ಸಮರ್ಪಣೆ ಮಾಡಲಿzವೆ. ಆ ದಿನ ಬೆಳಗ್ಗೆ ಸುಳ್ಯ ಚೆನ್ನಕೇಶವ ದೇವಸ್ಥಾನದ ಎದುರಿನಿಂದ ವಾಹನ ಮೆರವಣಿಗೆ ಆರಂಭಗೊಳ್ಳುವುದು. ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಹರಪ್ರಸಾದ್ ತುದಿಯಡ್ಕರು ಚಾಲನೆ ನೀಡುವರು. ಅಲ್ಲದೆ ಕಾರ್ಯಕ್ರಮಕ್ಕೂ ಮೊದಲು ಸುಳ್ಯದಿಂದ ಪೆರ್ಣೆಗೆ ಹೋಗಿ ಶ್ರಮ ಸೇವೆಯಲ್ಲಿ ಪಾಲು ಪಡೆಯಲಿzವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಸಿರುವಾಣಿ ಸಮರ್ಪಣಾ ಸಮಿತಿಯ ಗೌರವ ಸಂಚಾಲಕರಾದ ಕಿರಣ್ ಬಿಳಿಯಾರು, ಸಂಚಾಲಕರಾದ ಬಾಲಚಂದ್ರ ಅಡ್ಕಾರು, ಸಹ ಸಂಚಾಲಕ ಪ್ರದೀಪ್ ಪೆರಾಜೆ, ಪೆರ್ಣೆ ಮುಚ್ಚಿಲೋಟ್ ಭಗವತೀ ಕ್ಷೇತ್ರದ ಲೆಕ್ಕಪಾಲಕರಾದ ಚಂದ ಪಾಟಾಳಿ ಕುಡೆಕಲ್ಲು, ಪ್ರಮುಖರಾದ ಮಹಾಲಿಂಗನ್ ಬಾಜಿರ್ ತೊಟ್ಟಿ, ತಾಲೂಕು ಸಮಿತಿಯ ಕಾರ್ಯದರ್ಶಿ ಸುರೇಶ್ ಕರ್ಲಪ್ಪಾಡಿ, ಖಜಾಂಚಿ ವಿಜಯ ಎರ್ಮೆಟ್ಟಿ, ಜತೆ ಕಾರ್ಯದರ್ಶಿ ಸೌಮ್ಯ ರಮೇಶ್, ಮಹಿಳಾ ಸಮಿತಿ ಸಂಚಾಲಕಿ ಪ್ರೇಮಾ ಚಂದ ಕುಡೆಕಲ್ಲು, ಪೆರ್ಣೆ ಮುಚ್ಚಿಲೋಟ್ ಭಗವತೀ ಕ್ಷೇತ್ರದ ಸುಳ್ಯದ ಹಸಿರುವಾಣಿ ಪ್ರತಿನಿಧಿ ನಾರಾಯಣ ಎಸ್.ಎಂ., ನಿರ್ದೇಶಕರಾದ ರಾಧಾಕೃಷ್ಣ ಬೇರ್ಪಡ್ಕ ಮೋದಲಾದವರು ಉಪಸ್ಥಿತರಿದ್ದರು.