
20ರಂದು ಪೂರ್ವಾಹ್ನ 11 ಗಂಟೆಗೆ ಮೆಸ್ಕಾಂ ಸುಳ್ಯ ಮತ್ತು ಸುಬ್ರಹ್ಮಣ್ಯ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆಯು ಸುಳ್ಯ ಉಪವಿಭಾಗ ಕಚೇರಿಯಲ್ಲಿ ನಡೆಯಲಿದೆ.
ಅಧೀಕ್ಷಕ ಇಂಜಿನಿಯರ್ ಕಾರ್ಯ ಮತ್ತು ಪಾಲನಾ ವೃತ್ತ ಕಚೇರಿ ಮಂಗಳೂರು ಇವರ ಅಧ್ಯಕ್ಷತೆಯಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ ನಡೆಯಲಾಗುವುದು. ಗ್ರಾಹಕರು ತಮ್ಮ ಕುಂದುಕೊರತೆಗಳನ್ನು ಸುಳ್ಯ ಉಪವಿಭಾಗ ಕಚೇರಿಯಲ್ಲಿ ಅಥವಾ ದೂರವಾಣಿ ಕರೆಯ ಮೂಲಕ ಸಲ್ಲಿಸಬಹುದು ಎಂದು ಸುಳ್ಯ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.