Ad Widget

ಅರಂತೋಡು ಗ್ರಾ.ಪಂ.ಸಾಮಾನ್ಯ ಸಭೆ

ಅರಂತೋಡು ಗ್ರಾಮ ಪಂಚಾಯಿತಿನ ಆಡಳಿತ ಮಂಡಳಿಯ ಸಾಮಾನ್ಯ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಯವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸ್ವರಾಜ್ ಸಭಾಂಗಣದಲ್ಲಿ ಫೆ.14 ರಂದು ನಡೆಯಿತು.‌ ಸರಕಾರದ ಸುತ್ತೋಲೆಯನ್ನು ಪಿಡಿಓ ವಾಚಿಸಿದರು.

. . . . . . . . .

ಕರ್ನಾಟಕ ಸರಕಾರದ ನಾಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಯವರು ಹೊರಡಿಸಿದ ಆದೇಶದಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಏಕ ನಿವೇಶನ ಅನುಮೋದನೆಯನ್ನು ನೀಡುವುದನ್ನು ತಡೆಹಿಡಿಯಲಾದ ಕುರಿತು ಚರ್ಚಿಸಲಾಯಿತು.‌ ದಿನಾಂಕ 9.1.2024ರ ನಂತರ ಗ್ರಾಮ ಪಂಚಾಯಿತಿನಲ್ಲಿ ಸ್ವೀಕೃತವಾದ ಎಲ್ಲಾ ನಮೂನೆ 9&11 ಅರ್ಜಿಗಳ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟೀಕರಣ ಕೋರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆಯಲು ಸರ್ವಾನುಮತದಿಂದ ನಿರ್ಣಯಿಸಲಾಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬ್ಯಾನರ್ ಮತ್ತು ಬಂಟಿಂಗ್ಸ್ ಅಳವಡಿಸುವವರು ಕಡ್ಡಾಯವಾಗಿ ತಾವು ಬ್ಯಾನರ್ ಗಳನ್ನು ಅಳವಡಿಸುವ ಜಾಗದ ಕುರಿತು ನಿಖರ ಮಾಹಿತಿಯನ್ನು ಗ್ರಾಮ ಪಂಚಾಯಿತಿಗೆ ನೀಡುವುದು ಮತ್ತು ಗ್ರಾಮ ಪಂಚಾಯಿತಿನಿಂದ ಅನುಮತಿಯನ್ನು ಪಡೆದಿರುವ ಅವಧಿಯ ಮಾಹಿತಿಯನ್ನು ಬ್ಯಾನರ್ ನಲ್ಲಿ ಅಳವಡಿಸಲು ಕ್ರಮ ಕೈಗೊಳ್ಳುವುದು, ಬ್ಯಾನರ್ ಗಳಿಗೆ ಹಾನಿಯಾದರೆ ಬ್ಯಾನರ್ ಅಳವಡಿಸಿ ದವರೇ ಜವಾಬ್ದಾರರು ಎಂಬ ನಿಬಂಧನೆ ವಿಧಿಸಿ ಅನುಮತಿಯನ್ನು ನೀಡಲು ಸಭೆ ಸರ್ವಾನುಮತದಿಂದ ನಿರ್ಣಯಿಸಿತು. ಸಭೆಯಲ್ಲಿ ಅರಂತೋಡು,ತೋಡಿಕಾನ ಅವಳಿ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪಗಳ ಕುರಿತು ಚರ್ಚೆ ನಡೆಸಿತು. ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸಿಎ ಭವಾನಿ, ಸದಸ್ಯರಾದ ಶ್ರೀಮತಿ ಹರಿಣಿ ದೇರಾಜೆ, ಶ್ವೇತಾ ಅರಮನೆಗಯ, ಶ್ರೀಮತಿ ಮಾಲಿನಿ ವಿನೋದ್ ಉಳುವಾರು, ಶ್ರೀಮತಿ ಸುಜಯ ಲೋಹಿತ್ ಮೇಲಡ್ತಲೆ, ಶ್ರೀಮತಿ ಸರಸ್ವತಿ ಬಿಳಿಯಾರು, ಶಿವಾನಂದ ಕುಕ್ಕುಂಬಳ, ವೆಂಕಟರಮಣ ಪೆತ್ತಾಜೆ, ರವೀಂದ್ರ ಪಂಜಿಕೋಡಿ, ಗಂಗಾಧರ ಗುಡ್ಲಂಬನ, ಪುಷ್ಪಾಧರ ಕೊಡಂಕಿರಿ ಭಾಗವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಮ್ ಆರ್ ಸ್ವಾಗತಿಸಿ, ವಂದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading