2019ರ ಫೆಬ್ರವರಿ 14ರಂದು ಪುಲ್ವಾಮಾ ಜಿಲ್ಲೆಯ ಅವಂತಿ ಪಾರದಲ್ಲಿ ಆತ್ಮಹುತಿ ದಾಳಿ ಕೋರನ ಕಾರ್ ಬಾಂಬ್ ಸ್ಫೋಟದಲ್ಲಿ ಹುತಾತ್ಮರಾದ 40 ಜನ ಸಿಆರ್ಪಿಎಫ್ ಯೋಧರಿಗೆ ಗೌರವ ನಮನ ಸಲ್ಲಿಕೆ ಕಾರ್ಯಕ್ರಮವು ನಗರ ಪಂಚಾಯತ್ ಆವರಣದಲ್ಲಿ ನಿರ್ಮಾಣಗೊಂಡಿರುವ ಯುದ್ಧ ಸ್ಮಾರಕದ ಎದುರು ಭಾಗದಲ್ಲಿ ನಡೆಯಿತು.
ನಗರ ಪಂಚಾಯಿತ್ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಅವರು ಪುಲ್ವಾಮಾ ಹತ್ಯಾಕಾಂಡದ ಘಟನೆಗಳನ್ನು ನೆನಪಿಸಿಕೊಂಡು ಭಯೋತ್ಪಾದನೆಯನ್ನು ಮಟ್ಟ ಹಾಕಲು ನಾವೆಲ್ಲರೂ ಒಂದಾಗಬೇಕೆಂದು ಈ ಸಂದರ್ಭದಲ್ಲಿ ಕರೆ ನೀಡಿದರು. ನಗರ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರುಗಳಾದ ಎಂ ವೆಂಕಪ್ಪಗೌಡ, ಕೆ ಸುಧಾಕರ್, ಶರೀಫ್ ಕಂಠಿ, ಶೀಲಾ ಅರುಣ್ ಕುರುಂಜಿ , ಶಶಿಕಲಾ ಎನ್, ಪೂಜಿತ ಕೆಯು, ಶಿಲ್ಪಾಸುದೇವ್, ನಗರ ಪಂಚಾಯತ್ನ ಎಲ್ಲಾ ಸಿಬ್ಬಂದಿಗಳು, ಸಾರ್ವಜನಿಕರಾದ ಎ ಎಂ ಭಟ್ , ಸುಭೋದ್ ಶೆಟ್ಟಿ, ಕುಸುಮಾಧರ ಎಟಿ, ನ್ಯಾಯವದಿಗಳಾದ ಜಗದೀಶ್ ಡಿಪಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಯುದ್ದ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಮಡಿದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.