ಮುಡ್ನೂರು ಮರ್ಕಂಜ ಸ.ಹಿ.ಪ್ರಾ.ಶಾಲೆಯ ಭೋಜನಾಲಯ ಮತ್ತು ಡಿಜಿಟಲ್ ಗ್ರಾಂಥಲಾಯದ ಕೊಠಡಿ ಉದ್ಘಾಟನೆ-ಪ್ರತಿಭಾ ಪುರಸ್ಕಾರದ ಸಭ ಕಾರ್ಯಕ್ರಮವು ಎಸ್ ಡಿ ಎಂ ಸಿ ಅಧ್ಯಕ್ಷರಾದ ಮೀನಾಕ್ಷಿ ಬೊಮ್ಮೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಶ್ರೀ ಶ್ರೀ ರಾಜೇಶ್ ನಾಥ ಸ್ವಾಮೀಜಿ ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ರಾಜಕೀಯವನ್ನು ಮಾಡುವುದು ಬೇಡ ಜೊತೆ ಜೊತೆ ಸೇರಿ ಬದುಕುವ ಕೆಲಸಗಳನ್ನು ಮಾಡೋಣ ಎಂದರು ಅಲ್ಲದೇ ಇಲ್ಲಿ ಈ ವರೆಗೆ ಯಾವುದೇ ರೀತಿಯಲ್ಲಿ ಏನನ್ನು ನೀಡದೇ ಇದ್ದವರು ಮುಂದಿನ ದಿನಗಳಲ್ಲಿ ನೀಡುವಂತೆ ಆಗಲಿ ಎಂದು ಹೇಳಿದರು ಸರಕಾರವು ಜನತೆಯನ್ನು ನಡೆಸುವುದು ಮಾತ್ರ ಆದರೆ ಸರಕಾರ ಇಲ್ಲಿಗೆ ಇನ್ನಷ್ಟು ಅನುಧಾನ ನೀಡಿ ಈ ಗ್ರಾಮವನ್ನು ಹೆಚ್ಚಿನ ಅಭಿವೃದ್ಧಿ ಪಡಿಸಲಿ ಹೆಸರಿಗಾಗಿ ಪ್ರತಿಷ್ಠೆಗಾಗಿ ಯಾರು ಕೂಡ ಈ ಕಾರ್ಯಕ್ರಮದ ಬಗ್ಗೆ ಹಿಂದಿನಿಂದ ಮಾತನಾಡಬಾರದು ಎಂದು ಹೇಳಿದರು.
ನಮ್ಮ ಶಾಲೆಯ ಅಭಿವೃದ್ಧಿಯಾದಗ ನಮ್ಮ ಗ್ರಾಮದ ಅಭಿವೃದ್ಧಿ ಆಗುತ್ತದೆ ಅಲ್ಲದೆ ಈ ರೀತಿಯಲ್ಲಿ ಮುಂದೆಯು ಎಲ್ಲಾ ಶಾಲೆಗಳಲ್ಲಿ ಕೂಡ ಅಭಿವೃದ್ಧಿ ಕಾರ್ಯಗಳು ಆಗುವಂತೆ ಆಗಲಿ ಎಂದು ಸಭಾ ಕಾರ್ಯಕ್ರಮದ ಮುಖ್ಯ ಅಥಿತಿಗಳಲ್ಲಿ ಓರ್ವರಾದ ಗ್ರಾಮದ ಮೊದಲ ಪ್ರಜೆ ಗೀತಾ ಹೋಸಳಿಕೆ ಹಾರೈಸಿದರು .
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದ ಬಾಲಕೃಷ್ಣ ಕೊಡೆಂಕಿರಿ ಮಾತಾಡಿ ಕೆಲಸ ಮಾಡಲು ಆಗದೇ ಇದ್ದರು ಪರವಾಗಿಲ್ಲಾ ಆದರೆ ದೂಶಿಸಿಕೊಂಡು ಹೋಗುವುದು ಸರಿಯಲ್ಲಾ ಎಂದು ಹೇಳಿದರು ಅಲ್ಲದೇ ಪ್ರೋಟೋಕಾಲ್ ಬಗ್ಗೆ ಈ ಸಂದರ್ಭದಲ್ಲಿ ಹೇಳುತ್ತಾ ಜನ ಪ್ರತಿನಿಧಿಗಳು ಬರುವಾಗ ತಡವಾಗುತ್ತದೆ ಆ ಹಿನ್ನಲೆಯಲ್ಲಿ ಇದನ್ಜು ಕೂಡ ಸರಿಪಡಿಸಬೇಕಿದೆ ಎಂದು ಹೇಳಿದರು. ಸಾಮಾನ್ಯ ಜನರಿಗೆ ಒಂದು ಮಾತಿದೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ಮಾತ್ರ ಉನ್ನತ ಸ್ಥಾನ ಮಾನ ಪಡೆಯಲು ಸಾಧ್ಯವೆಂದು ಆದು ಅದು ತಪ್ಪು ಕಲ್ಪನೆ ಕನ್ನಡ ಮಾಧ್ಯಮದಲ್ಲಿ ಕಲಿತರು ಫಸ್ಟ್ ರಾಂಕ್ ಬರುತ್ತಾರೆ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿ ಶಾಲೆಗಳನ್ನು ಉಳಿಸಬೇಕು ಎಂದು ಹೇಳಿದರು.
ವಿಧ್ಯಾರ್ಥಿ ಉಜ್ವಲ್ ತಮ್ಮ ಅಭಿಪ್ರಾಯವನ್ನು ಕಾರ್ಯಕ್ರಮದಲ್ಲಿ ವ್ಯಕ್ತಪಡಿಸುತ್ತ ನಾವು ಊಟ ಮಾಡಲು ನಮಗೆ ಸ್ಥಳ ಇರಲಿಲ್ಲ ನಲಿಕಲಿ ಕೊಠಡಿಯಲ್ಲಿ ಊಟವನ್ನು ಮಾಡುತ್ತಿದ್ದೆವು ನಮಗೆ ಇದೀಗ ಉತ್ತಮ ರೀತಿಯಲ್ಲಿ ಒಂದು ಊಟ ಮಾಡಲು ಹಾಲ್ ನಿರ್ಮಾಣ ಮಾಡಿಕೊಟ್ಟಿದ್ದಿರಿ ಇದಕ್ಕೆ ಸಹಕರಿಸಿದ ಎಲ್ಲರಿಗು ಧನ್ಯವಾದಗಳು ಎಂದು ಹೇಳಿದರು.
ಶಾಲಾ ಅಭಿವೃದ್ದಿ ಸಮಿತಿ ರಾಜ್ಯಾಧ್ಯಕ್ಷರು ಮತನಾಡುತ್ತಾ ರಾಜಕಾರಣಿಗಳ ಮಕ್ಕಳು ಸರಕಾರಿ ಶಾಲೆಗೆ ಹೊಗಬೇಕು ಅಲ್ಲದೆ ಪ್ರಣಾಳಿಕೆಯಲ್ಲಿ ಇದನ್ನು ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ದೇಶದ ಭವಿಷ್ಯದ ನಿರ್ಮಾತೃರರು ಇಂದಿನ ಮಕ್ಕಳು ,ರಾಜ್ಯದಲ್ಲಿ ಪ್ರತಿ ವರ್ಷ 30 ರಿಂದ 40 ಶಾಲೆಗಳನ್ನು ಮುಚ್ಚುತ್ತಿದೆ ಎಂದು ಹೇಳಿದರು . ಶಿಕ್ಷಕರ ಮೇಲೆ ಒತ್ತಡಗಳನ್ನು ಹೇರಲಾಗುತ್ತಿದೆ , ಮಾನವನು ಪ್ರಜ್ಞಾವಂತರಾದಗ ಮಾತ್ರ ಸಮಾಜ ಸರಿಯಾಗುತ್ತದೆ ಎಂದು ನಿನ್ನೆ ನಡೆದ ಘಟನೆಯ ಎಲ್ಲಾ ವಿಚಾರಗಳನ್ನು ತಿಳಿದ ಬಳಿಕ ಮಾರ್ಮಿಕವಾಗಿ ಹೇಳಿದರು .
ಜಿ ಜಗನ್ನಾಥ ಜಯನಗರ ಮತನಾಡುತ್ತಾ
ಶಿಕ್ಷಣ ಎಮಬುವುದು ಹುಲಿಯ ಹಾಲು ,ಗರ್ಜಿಸುವ ಸಂದರ್ಭದಲ್ಲಿ ಗರ್ಜಿಸಲೇ ಬೇಕು , ನಮ್ಮ ಕೆಲಸ ಕಾರ್ಯಗಳು ರಾಜಕೀಯ ಬಣ್ಣದಲ್ಲಿ ನೋಡುವುದು ಸರಿಯಲ್ಲ ನಾವು ಸೆಪ್ಟೆಂಬರ್ 13 2023 ರಂದು ಗುದ್ದಲಿ ಪೂಜೆ ನೆರವೇರಿಸಿ 14-02-24 ರಂದು ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿದ್ದೆವೆ ಎಂದು ಹೇಳಿದರು . ಇನ್ನೋರ್ವ ಅಥಿತಿಗಳಾದ ಹೇಮಕುಮಾರ್ ಜೋಗಿ ಮೂಲೆ ಮತನಾಡುತ್ತಾ
ನಮ್ಮ ಮೇಲಿನ ಸಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ನಿಲ್ಲಿಸಲು ಬಿಇಒ ಇತಿಹಾಸದಲ್ಲೆ ಇದೇ ಮೊದಲ ಬಾರಿಗೆ ಪೋಲೀಸ್ ಇಲಾಖೆಗೆ ದೂರು ಕೊಟ್ಟು ಇಂದಿನ ಉದ್ಘಾಟನೆಯನ್ನು ತಡೆಯಲು ಪ್ರಯತ್ನಿಸಿದ್ದಾರೆ ಬಿಇಒ ಮಕ್ಕಳ ಮೇಲೆ ಈ ರೀತಿಯಲ್ಲಿ ಮಾಡುತ್ತಿರುವುದು ಸರಿಯಲ್ಲ ಅಲ್ಲದೇ ಬಿಇಒ ರವರು ಮುಖ್ಯ ಶಿಕ್ಷಕರನ್ನು ಸಸ್ಪೆಂಡ್ ಮಾಡುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ ಅಲ್ಲದೆ ವರ್ಗಾವಣೆ ಮಾಡುವುದಾಗಿ ಹೇಳುತ್ತಿದ್ದು ಅದು ಯಾವ ರೀತಿಯಲ್ಲಿ ಮಡಲಾಗುತ್ತದೆ ಇದು ನ್ಯಾಯವೇ ಎಂದು ಸಭಾ ವೇದಿಕೆಯಲ್ಲಿ ಕೇಳಿದರು . ನಾವು ರಾಜಕಾರಣಿಗಳ ಹಿಂದೆ ಹೋದವರು ಅಲ್ಲ ನಮಗೆ ರಾಜಕೀಯ ಬೇಕಾಗಿಲ್ಲಾ ನಮಗೆ ಊರಿನ ಮತ್ತು ಶಾಲೆಯ ಅಭಿವೃದ್ಧಿ ಮುಖ್ಯ ಎಂದು ಹೇಳಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ಮಾತುಗಳನ್ನಾಡುತ್ತಾ ನನ್ನ ನೋವು ತೋಡಿಕೊಳ್ಳಲು ಸಮಯವಿಲ್ಲ ಆದರು ನನಗೆ ಮಾಡಿದ ಅವಮಾನದಲ್ಲಿ ನಾನು ಮನೆಯಲ್ಲಿ ಕುಳಿತುಕೊಳ್ಳಬೇಕಿತ್ತು ಆದರು ಇಂದು ಈ ವೇದಿಕೆಯಲ್ಲಿ ನಿಂತಿದ್ದೇನೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರ ಅಭಿಮಾನಿ ಬಳಗ ಗುಂಪಿನಲ್ಲಿ ಮತ್ತು ಇತರೆ ಗುಂಪಿನಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರು ಸರಿ ಇಲ್ಲಾ ಅಂತ ಹೇಳುತ್ತಿದ್ದಾರೆ ಅಲ್ಲವೇ ಹಾಗಿದ್ದರೆ ನಾನು ಊರಿನ ದಾನಿಗಳನ್ನು ಸಂಘ ಸಂಸ್ಥೆಗಳನ್ನು ಸೇರಿದಿಕೊಂಡು ಉತ್ತಮ ಕಾರ್ಯ ಮಾಡಿದ್ದು ತಪ್ಪೆ ನಿಮ್ಮ ಪ್ರಕಾರ ಎಂದು ಖಾರವಾಗಿ ಹೇಳಿದರು. ಈ ಶಾಲೆಯ ಮೊದಲಿನ ಅಧ್ಯಕ್ಷರುಗಳು ಮಾತನಾಡುತ್ತಾ ಇರಲಿಲ್ಲಾ ಆದರೆ ಈಗ ನಾನು ಮಾತನಾಡುತ್ತಿದ್ದೆನೆ ಅದು ಇವರಿಗೆ ಸಹಿಸುತ್ತಿಲ್ಲ ಎಂದು ಹೇಳಿದರು. ನಮ್ಮ ಇಡೀ ತಂಡಕ್ಕೆ ಅಪವಾದ ಅವಮಾನಗಳೇ ಮಾಡುತ್ತಿದ್ದಾರೆ ಧೈರ್ಯವಿದ್ದರೆ ಎದುರು ಬಂದು ಹೇಳಿ ಬನ್ನಿ ಎಂದು ಆಹ್ವಾನಿಸಿದರು . ನಮ್ಮ ಶಾಲೆಯ ಮಕ್ಕಳಿಗೆ ಕುಡಿಯಲು ನೀರು ಇಲ್ಲಾ , ಊರಿಗೆ ಸರಿಯಾದ ರಸ್ತೆ ಇಲ್ಲಾ ಮಕ್ಕಳು ನಡೆದಾಡಲು ಕಷ್ಟದಲ್ಲಿರುವಾಗ ಇದು ಯಾವುದನ್ನು ಗಮನಕ್ಕೆ ತೆಗೆದುಕೊಳ್ಳದ ಬಿಇಒ ಪೋಲೀಸ್ ಇಲಾಖೆಯಲ್ಲಿ ಅಧ್ಯಕ್ಷರು ಮತ್ತು ಇತರರ ವಿರುದ್ದ ದೂರು ನೀಡಲು ನಿನ್ನೆ ಹೋಗಿದ್ದು ಯಾವ ರೀತಿಯ ಕೆಲಸ ಎಂದು ಬಿಇಒ ಬಿ ಇ ರಮೇಶ್ ರವರು ಉತ್ತರಿಸಬೇಕು ಎಂದು ಅವರಿಗೆ ನೇರ ಪ್ರಶ್ನೆಗಳನ್ನು ವೇದಿಕೆಯಿಂದಲೇ ಕೇಳಿದರು.
ಸಭಾ ಕಾರ್ಯಕ್ರಮದಲ್ಲಿ ದೇಣಿಗೆ ಮತ್ತು ಶ್ರಮದಾನದ ಮೂಲಕ ಸಹಕರಿಸಿದವರನ್ನು ಗೌರವಿಸಿ ಸನ್ಮಾನವನ್ನು ನೆರವೇರಿಸಲಾಯಿತು. ವೇದಿಕೆಯಲ್ಲಿ ಪ್ರಮುಖರಾದ ಪದ್ಮನಾಭ ಜೈನ್ ಜನ ಜಾಗೃತಿ ವೇದಿಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಸುಳ್ಯ ವಲಯ , ಯುವರಾಜ್ ಜೈನ್ , ಸಿದ್ದೇಗೌಡ ಮೈಸೂರು , ಗೋವಿಂದ ಅಳವುಪಾರೆ ಗ್ರಾಮ ಪಂಚಾಯತ್ ಸದಸ್ಯರು , ಜಿ ಜಗನ್ನಾಥ ಜಯನಗರ ಕಾರ್ಯ ನಿರ್ವಾಹಣಾ ಸಂಚಾಲಕರು ಸ.ಹಿ.ಪ್ರಾಶಾಲೆ ಮುಡ್ನೂರು ಮರ್ಕಂಜ , ನವೀನ ನಳಿಯಾರು ಅಧ್ಯಕ್ಷರು ಹಿರಿಯ ವಿಧ್ಯಾರ್ಥಿ ಸಂಘ , ಮುಖ್ಯ ಶಿಕ್ಷಕರಾದ ದೇವರಾಜ್ ಕೆ ಎಸ್ ಸೇರಿದಂತೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇವರಾಜ್ ಕೆ ಎಸ್ ಸ್ವಾಗತಿಸಿದರು ನಿತ್ಯಾನಂದ ಭೀಮಗುಳಿ ಮತ್ತು ಅಶ್ವಿನಿ ಎಂ ಆರ್ ಕಾರ್ಯಕ್ರಮ ನಿರೋಪಿಸಿದರು.