
ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕಾಟಿಪಳ್ಳ ಎಂಬಲ್ಲಿ ಸುಳ್ಯ ಮಂಡೆಕೋಲು ರಸ್ತೆಯ ಪಕ್ಕದಲ್ಲಿ ಯುವಕನಿಗೆ ಯುವಕರು ಥಳಿಸಿದ ಘಟನೆ ಇದೀಗ ವರದಿಯಾಗಿದೆ.
ಮೇನಾಲ ಮೂಲದ ಅಜಿತ್ ಎಂಬ ಯುವಕನಿಗೆ ಕಲ್ಲಗುಡ್ಡೆಯ ಯುವಕರ ತಂಡವು ಹಲ್ಲೆ ನಡೆಸುತ್ತಿರುವ ವೀಡಿಯೋ ಇದೀಗ ವೈರಲ್ ಆಗುತ್ತಿದ್ದು ಈ ವೀಡಿಯೋದಲ್ಲಿ ಹಲ್ಲೆ ನಡೆಸುತ್ತಿರುವ ದೃಶ್ಯ ಕಾಣಬಹುದಾಗಿದೆ ಅಲ್ಲದೆ ಇದೀಗ ಪೊಲೀಸ್ ಈ ಕುರಿತು ಮಾಹಿತಿ ಕಲೆ ಹಾಕುತ್ತಿರುವುದಾಗಿ ತಿಳಿದುಬಂದಿದೆ.