Ad Widget

ಪೇರಡ್ಕ ಊರೂಸ್ ಸಮಾರೋಪ ಕಾರ್ಯಕ್ರಮದಲ್ಲಿ ಸರ್ವ ಧರ್ಮ ಸಮ್ಮೇಳನ

. . . . . . . . .

ಪೇರಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ಊರೂಸ್ ಸಮಾರೋಪ ಕಾರ್ಯಕ್ರಮದಲ್ಲಿ ಸರ್ವ ಧರ್ಮ ಸಮ್ಮೇಳನ ಸರ್ವ ಧರ್ಮದ ವಿವಿಧ ಕ್ಷೇತ್ರಗಳಲ್ಲಿ ಭಾರತೀಯ ಸೇನೆ, ಉದ್ಯೋಗ, ಪೊಲೀಸ್ ಇಲಾಖೆ ವಿವಿಧ ಕ್ಷೇತ್ರದಲ್ಲಿ ದುಡಿದ 18 ಸಾಧಕರಿಗೆ ಸನ್ಮಾನ. ಸಹ ಭೋಜನ ಪೇರಡ್ಕ ದರ್ಗಾ ವಠಾರದಲ್ಲಿ ನಡೆಯಿತು. ಸರ್ವ ಧರ್ಮದ ಬಗ್ಗೆ, ಪೇರಡ್ಕ ಊರಿನ ಸಾಮರಸ್ಯದ ಬಗ್ಗೆ ವಿಶೇಷವಾಗಿ ಪ್ರಮುಕ ವಾಗ್ಮಿ ಅಝೀಜ್ ಧಾರಿಮಿ ಚೊಕ್ಕಬೆಟ್ಟು ಬೆಳಕು ಚೆಲ್ಲಿದರು ಸ್ಥಳೀಯ ವಿಚಾರದ ಬಗ್ಗೆ ದಾಮೋದರ ಮಾಸ್ತರ್ ಬೈಲೆ, ಸತೀಶ್ ಬೀಜದಕಟ್ಟೆ, ಡಾ ಲೀಲಾದರ್, ಚಕ್ರಪಾಣಿ,  ಪಿ. ಎನ್. ಗಣಪತಿ ಭಟ್,  ಡಾ. ಉಮ್ಮರ್ ಬೀಜದಕಟ್ಟೆ, ಲೂಕಾಸ್ ಟಿ. ಐ. ಸದಾನಂದ ಮಾವಜಿ,ವಖ್ಫ್ ಸಲಹಾ ಸಮಿತಿಯ ಅಬ್ದುಲ್ ರಹಿಮಾನ್. ಉಪ ವಲಯ ಅರಣ್ಯ ಅದಿಕಾರಿ ಚಂದ್ರು, ತಮ್ಮದೇ ಶೈಲಿಯಲ್ಲಿ ಸೌಹಾರ್ದತೆ ಬಗ್ಗೆ ಬೆಳಕು ಚೆಲ್ಲಿದರು. ವೇದಿಕೆಯಲ್ಲಿ 18 ಜನ ಸಾಧಕರಿಗೆ ಸನ್ಮಾನಿಸಲಾಯಿತು, ಕಾರ್ಯಕ್ರಮ ಕ್ಕೆ ಮುಂಚಿತವಾಗಿ ಬಂದ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಇನಾಯತ್ ಆಲಿ ಸಾಮರಸ್ಯದ. ಸ್ಥಳೀಯ ಗ್ರಾಮೀಣ ಪ್ರದೇಶದ ಆಚಾರ ವಿಚಾರಗಳ ಬಗ್ಗೆ ತಿಳಿದುಕೊಂಡು. ಅನ್ನದಾನ ಸ್ಥಳಕ್ಕೆ ಭೇಟಿ ಕೊಟ್ಟು ಯುವಕರ ಜೊತೆಗೆ ತೆಂಗಿನ ಕಾಯಿ ಯಂತ್ರದ ಮೂಲಕ ಕೆರೆಸುವ ಮೂಲಕ ಜೊತೆಗೆ ನಿಂತು ಪ್ರೋತ್ಸಾಹ ನೀಡಿದರು. ಸ್ಥಳೀಯ ಪ್ರವಾಸಿ ಮಂದಿರ ಕಾಮಗಾರಿ ವೀಕ್ಷಣೆ ಮಾಡಿ ಹಳೆಯದಾದ ಮಸೀದಿ ಬಗ್ಗೆ ಖುಷಿ ಪಟ್ಟರು ಮಸೀದಿ ಆಡಳಿತ ಮಂಡಳಿ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ದಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಶಂಸುದ್ದಿನ್, ಕೆ. ಎಂ. ಮಸ್ತಫಾ, ಫರ್ಮೆಡ್ ಗ್ರೂಪ್ ಜನರಲ್ ಮೆನೇಜರ್ ಪಿ. ಎಂ ಆರೀಸ್ ನಗರ ಪಂಚಾಯತ್ ಸದಸ್ಯರುಗಳಾದ ಉಮ್ಮರ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕಾರ್, ಸಿದ್ದಿಕ್ ಕಟ್ಟೆಕಾರ್, ಮೂಸ ಪೈಬೆಚಾಲ್, ಸಂಪಾಜೆ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಕೆ. ಹನೀಫ್,

ಸನ್ಮಾನಿತರಾದ ನವೀನ್ ಇರ್ನೆ, ಜಯಕರ ಮಡ್ತಿಲ, ಲಕ್ಸ್ಮಿನಾರಾಯಣ ಪೇರಡ್ಕ, ಜಿ. ಎಚ್. ರವುಫ್, ಪೊಲೀಸ್ ಇಲಾಖೆಯ ಸಾದಿಕ್ ಪೇರಡ್ಕ,ಚಿದಾನಂದ ಮೂಡನಕಜೆ ಜಿ. ಎಚ್. ಶರೀಫ್, ಸೈನಿಕರ ಪರವಾಗಿ ಅವರ ಕುಟುಂಬ ವರ್ಗದವರು ಸನ್ಮಾನ ಸ್ವೀಕರಿಸಿದರು ವೇದಿಕೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹಮೀದ್ ಕುತ್ತಮೊಟ್ಟೆ. ಮದೆ ಗ್ರಾಮ ಪಂಚಾಯತ್ ಸದಸ್ಯರಾದ ಸೈದಲವಿ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಎ. ಕೆ ಹನೀಫ್ ,ಸಿದ್ದಿಕ್ ಕೊಕ್ಕೋ,. ಲಯನ್ ಪ್ರಶಾಂತ್ ವಿ. ವಿ. ಸಂಪಾಜೆ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಯೋಗಿಶ್ವರ್, ಕಲ್ಲುಗುಂಡಿ ಮಹಾವಿಷ್ಣುಮೂರ್ತಿ ದೆವ್ವಸ್ಥಾನದ ಅಧ್ಯಕ್ಷರಾದ ಜಗದೀಶ್ ರೈ, ನೆಲ್ಲಿಕುಮೆರಿ ಮುತ್ತು ಮಾರಿಯಮ್ಮ ದೇವಸ್ಥಾನ ಅಧ್ಯಕ್ಷರಾದ ಜ್ಯಾನಶಿಲನ್ (ರಾಜು )  ಮಾಜಿ

ತಾಲೂಕು ಪಂಚಾಯತ್ ಸದಸ್ಯರಾದ ಅಬ್ದುಲ್ ಗಫೂರ್,. ಉದ್ಯಮಿ ಲತೀಫ್ ಹರ್ಲಡ್ಕ,ಪ್ರಸನ್ನ ಅಜ್ಜನಗದ್ದೆ ಜನಾರ್ದನ ಗೌಡ ಪೇರಡ್ಕ ಮಾಜಿ ಪೇರಡ್ಕ ಖತೀಬ್ ಇಬ್ರಾಹಿಂ ಖಲಿಲ್ ಪೈಜಿ ಉಪಸ್ಥಿತರಿದ್ದರು ವೇದಿಕೆ ಮುಂಭಾಗದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು, ಮಾಜಿ ಅಧ್ಯಕ್ಷರಾದ ಯಮುನಾ. ಸದಸ್ಯರುಗಳಾದ ವಿಮಲಾ ಪ್ರಸಾದ್, ಅಬೂಸಾಲಿ ಪಿ. ಕೆ.  ಕಾಂತಿ ಬಿ. ಎಸ್, ಪತ್ರಕರ್ತ ಶರೀಫ್ ಜಟ್ಟಿಪಳ್ಳ , ಕೃಷ್ಣ ಬೆಟ್ಟ, ಸೊಸೈಟಿ ನಿರ್ದೇಶಕರಾದ ಹಮೀದ್. ಎಚ್  ಮಾಜಿ ಪಂಚಾಯತ್ ಸದಸ್ಯರಾದ ದಮಯಂತಿ ಪೇರಡ್ಕ ಉಪಸ್ಥಿತರಿದ್ದರು. ಪ್ರಗತಿ ಸೌಂಡ್ಸ್ ಮಾಲೀಕ ಶಾಫಿ ಫೈಚಾರ್ ಉತ್ತಮ ಸೌಂಡ್ಸ್ ಸೇವೆಗೆ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಸರ್ವ ಧರ್ಮಿಯರು ಭಾಗವಹಿಸಿ ಶುಭ ಹಾರೈಕೆ ಮಾಡಿದರು  ಧಾರ್ಮಿಕ ಗುರುಗಳಾದ ಸಯ್ಯದ್ ಜೈನುಲ್ ಅಭಿದೀನ್ ತಂಗಳ್ ದುಹಾ ನೇತೃತ್ವ ವಹಿಸಿ ಪೇರಡ್ಕ ಖತೀಬ್ ರಿಯಾಜ್ ಫೈಜಿ ಹಸೈನಾರ್ ಮುಸ್ಲಿಯಾರ್ ಧಾರ್ಮಿಕ ಪ್ರಭಾಷಣ ಮಾಡಿದರು ಮಸೀದಿ ಅಧ್ಯಕ್ಷರಾದ ಟಿ. ಎಂ ಶಾಹಿದ್ ತೆಕ್ಕಿಲ್ ಅಧ್ಯಕ್ಷತೆ ವಹಿಸಿದ್ದರು, ಜಿ ಕೆ. ಹಮೀದ್ ಗೂನಡ್ಕ ಸ್ವಾಗತಿಸಿ ಸನ್ಮಾನ ಕಾರ್ಯಕ್ರಮ ನಡೆಸಿ ಕೊಟ್ಟರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಸಹ ಭೋಜನ ಹಾಗೂ ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ಮಾಡಲಾಯಿತು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!