Ad Widget

ಕೆ.ವಿ.ಜಿ. ಇಂಜಿನಿಯರಿಗ್ ಕಾಲೇಜಿನಲ್ಲಿ ೨೦೨೩-೨೪ನೇ ಸಾಲಿನ ಪ್ರಥಮ ವರ್ಷದ ಎಂ.ಬಿ.ಎ ಹಾಗೂ ಎಂ.ಟೆಕ್ವಿ ದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

. . . . . . . . .

ಕೌಶಲ್ಯಾಭಿವೃದ್ಧಿ ಹಾಗೂ ಕಠಿಣ ಪರಿಶ್ರಮದಿಂದ ಯಶಸ್ಸು – ಅಶ್ವಿನ್ ಎಲ್. ಶೆಟ್ಟಿ,

. . . . . . .

ನೂತನ ಶೈಕ್ಷಣಿಕ ಪದ್ಧತಿಯಲ್ಲಿ ಹೊಸ ತಂತ್ರಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ಮೆರುಗನ್ನು ನೀಡಿದೆ – ಡಾ. ಉಜ್ವಲ್ ಯು.ಜೆ.

ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ಎಂ.ಬಿ.ಎ. ಹಾಗೂ ಎಂ.ಟೆಕ್  ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವು ಕೆ.ವಿ.ಜಿ.ಸಿ.ಇ. ಸಂಸ್ಥೆಯ ಸಭಾಂಗಣದಲ್ಲಿ ಫೆ.೧೨ ರಂದು ನಡೆಯಿತು. ಈ ಸಮಾರಂಭಕ್ಕೆ ರೊಟೇರಿಯನ್ ಇಂಜಿನಿಯರ್ ಅಶ್ವಿನ್ ಎಲ್. ಶೆಟ್ಟಿ, ಆಡಳಿತಾಧಿಕಾರಿ, ವಿದ್ಯಾರಶ್ಮಿ ಸಮೂಹ ಶಿಕ್ಷಣಗಳ ಸಂಸ್ಥೆ, ನಿವೃತ್ತ ಇಂಜಿನಿಯರ್ ಮ್ಯಾನೇಜರ್

ಏರ್‌ಬಸ್, ಆಸ್ಟೆಲಿಯ ಇವರು ಮುಖ್ಯ ಅತಿಥಿಯಾಗಿದ್ದರು. ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆಧುನಿಕ ಜೀವನದಲ್ಲಿ ಎಂ.ಬಿ.ಎ. ಮತ್ತು ಎಂ.ಟೆಕ್ ವಿದ್ಯಾರ್ಥಿಗಳು ಕೌಶಲ್ಯಾಭಿವೃದ್ಧಿ ಹಾಗೂ ಕಠಿಣ ಪರಿಶ್ರಮದಿಂದ ಯಶಸ್ಸನ್ನು ಗಳಿಸಲು ಪೂರಕವಾದ ನಡವಳಿಕೆಯನ್ನು

ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಇದೇ ಸಂದರ್ಭದಲ್ಲಿ ಡಾ. ಉಜ್ವಲ್ ಯು.ಜೆ., ವಿ.ಟಿ.ಯು ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯರು/ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ &ಚಿmಠಿ; ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಇವರು ಅತಿಥಿ ನೆಲೆಯಲ್ಲಿ ಮಾತನಾಡಿ ಕೆ.ವಿ.ಜಿ. ಇಂಜಿನಿಯರಿAಗ್ ಕಾಲೇಜು ಹೊಸ ತಂತ್ರಜ್ಞಾನಕ್ಕೆ ಅನುಗುಣವಾಗಿ ಕಾಲೇಜಿನ ಶೈಕ್ಷಣಿಕ ಪದ್ಧತಿಯಲ್ಲೂ ಅತೀ ಹೆಚ್ಚಿನ ಪ್ರಾಮುಖ್ಯತೆಯನ್ನು ಪ್ರಾಯೋಗಿಕ ವಿಷಯಗಳಿಗೆ ಹಾಗೂ ಉದ್ಯೋಗ ತರಬೇತಿಗಳನ್ನು ನೀಡುತ್ತಿದ್ದು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡು ಉತ್ತಮ ರೀತಿಯ ಉದ್ಯೋಗ ಪಡೆದು ಕಾಲೇಜಿಗೆ ಉತ್ತಮ ಹೆಸರು ತರಬೇಕೆಂದು ಶುಭಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ.ಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಜೀವನದಲ್ಲಿ ಶಿಸ್ತು ಮತ್ತು ನೈಪುಣ್ಯತೆಯು ಉತ್ತಮ ಶ್ರೇಣಿಯನ್ನು ಗಳಿಸುವುದರೊಂದಿಗೆ ಯಶಸ್ವಿ ಜೀವನಕ್ಕೆ ಉನ್ನತ ವಿದ್ಯಾಭ್ಯಾಸದ ಅವಶ್ಯಕತೆಯನ್ನು ತಿಳಿಯಪಡಿಸಿದರು. ಕಾರ್ಯಕ್ರಮದಲ್ಲಿ ಎಂ.ಬಿ.ಎ.

ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣಾನಂದ ಎ ಅತಿಥಿಗಳನ್ನು ಪರಿಚಯಿಸಿದರು ಹಾಗೂ ಸ್ವಾಗತಿಸಿದರು. ಪ್ರೊ. ಮನೋಹರ್ ಎ.ಎನ್. ಧನ್ಯವಾದ ಸಮರ್ಪಿಸಿದರು. ಎಂ.ಬಿ.ಎ. ಅಂತಿಮ

ವಿಭಾಗದ ವಿದ್ಯಾರ್ಥಿಗಳಾದ ಗಾಯತ್ರಿ ಎನ್. ನಂಬಿಯಾರ್ ಹಾಗು ಶಿಫಾ ಎಂ.ಎ. ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ., ಕಾಲೇಜಿನ ಆಡಳಿತಾಧಿಕಾರಿ ಶ್ರೀ ನಾಗೇಶ್ ಕೊಚ್ಚಿ, ಎಂ.ಬಿ. ಎ. ವಿಭಾಗದ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading