ಚೈತ್ರ ಯುವತಿ ಮಂಡಲ(ರಿ) ಅಜ್ಜಾವರ ಹಾಗೂ ಪ್ರತಾಪ ಯುವಕ ಮಂಡಲ (ರಿ) ಅಜ್ಜಾವರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತುಳುನಾಡಿನ ವಿಶಿಷ್ಟ ಪರ್ವದಿನವಾದ ಕೆಡ್ಡಸವನ್ನು ಸೂರ್ಯಕುಮಾರ್ ನಿಲಯ,ಕಲ್ತಡ್ಕದಲ್ಲಿ ಆಚರಿಸಲಾಯಿತು.ಸರಕಾರಿ ಪ್ರೌಢಶಾಲೆ ಅಜ್ಜಾವರದ ಮುಖ್ಯ್ಯೋಪಾಧ್ಯಾರಾದ ಶ್ರೀ ಗೋಪಿನಾಥ್ ಮೆತ್ತಡ್ಕರವರು ಕೆಡ್ಡಸದ ಮಹತ್ವ ವಿವರಿಸಿದರು.ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಲೋಕಯ್ಯ ಅತ್ಯಾಡಿ,ಯುವಜನ ಸoಯುಕ್ತ ಮಂಡಳಿ ಸುಳ್ಯ ಇದರ ಉಪಾಧ್ಯಕ್ಷರಾದ ವಿಜಯಕುಮಾರ್ ಉಬರಡ್ಕ ಉಪಸ್ಥಿತರಿದ್ದರು.ಭೂಮಿತಾಯಿಯ ಆರಾಧನೆ ಮಾಡುವ ಕೆಡ್ಡಸದ ಈದಿನ ನವಧಾನ್ಯಗಳಿಗೆ ಬೆಲ್ಲ,ತೆಂಗಿನಕಾಯಿ ಚೂರುಗಳನ್ನು ಬೆರೆಸಿ ಬಾಳೆಎಲೆಯಲಿಟ್ಟು ನಮಿಸುವುದರ ಮೂಲಕ ಕತ್ತಿ, ಅರಶಿಣ,ಕಲಶ,ಕುಂಕುಮ,ಸೀಗೆ ಹುಡಿ , ನೊರೆಕಾಯಿ,ಸರೊಳಿ ಎಲೆ, ಮಾವಿನಎಲೆ, ಬಾಳೆಹಣ್ಣು,ಹಲಸಿನ ಎಲೆ ವೀಳ್ಯದೆಲೆ,ಮಸಿತುಂಡು, ಮೆಣಸು,ಹುಳಿ, ಎಣ್ಣೆ ಮುಂತಾದುವುಗಳನ್ನು ಇಟ್ಟು ಕೆಡ್ಡಸದ ವಿಶೇಷ ಖಾದ್ಯ ಕುಚ್ಚಲಕ್ಕಿಯನ್ನು ಹುರಿದು ಕುಟ್ಟಿಪುಡಿ ಮಾಡಿ ತಯಾರಿಸಿದ “ನನ್ನೆರಿ”ಯನ್ನು ಎಲ್ಲರಿಗೂ ಹಂಚಲಾಯಿತು.ಕಾರ್ಯಕ್ರಮದಲ್ಲಿ ಸ್ವಾಗತವನ್ನು ಚೈತ್ರ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಶಶ್ಮಿ ಭಟ್ ಮಾಡಿದರು. ಯುವಕ ಮಂಡಲ ಗೌರವಾಸಲಹೆಗಾರಾದ ಚನಿಯ ಕಲ್ತಾಡ್ಕ ಕಾರ್ಯಕ್ರಮ ನಿರೂಪಣೆ ಮಾಡಿದರು.ಪ್ರತಾಪ ಯುವಕ ಮಂಡಲ ಅಧ್ಯಕ್ಷ ಗುರುರಾಜ್ ಅಜ್ಜಾವರ ಧನ್ಯವಾದ ಮಾಡಿದರು.
- Wednesday
- November 27th, 2024