Ad Widget

ಸುಳ್ಯ; ಅಂಗನವಾಡಿ ಕಟ್ಟಡದ ಗುದ್ದಲಿ ಪೂಜೆ ನೆರವೇರಿಸಿದ  ಶಾಸಕಿ ಕು.ಭಾಗೀರಥಿ ಮುರುಳ್ಯ

ಸುಳ್ಯ ನಗರದ ಬೆಟ್ಟಂಪಾಡಿ ಆಶ್ರಯ ಕಾಲೋನಿ ಪರಿಸರದಲ್ಲಿ ನಗರ ಪಂಚಾಯತ್ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಅಂಗನವಾಡಿ ಕಟ್ಟಡದ ಗುದ್ದಲಿ ಪೂಜೆ ಕಾರ್ಯಕ್ರಮ ವನ್ನು ಮಾನ್ಯ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ರವರು ಫೆ.10 ರಂದು ನೆರವೇರಿಸಿದರು. ನಗರ ಪಂಚಾಯಿತಿನ 15 ಲಕ್ಷ ರೂ ಅನುದಾನದಲ್ಲಿ ಬೆಟ್ಟಂಪಾಡಿಯಲ್ಲಿ ಅಂಗನವಾಡಿ ಕಟ್ಟಡವು ನಿರ್ಮಾಣವಾಗಲಿದ್ದು ಗುದ್ದಲಿ ಪೂಜೆಯ ನೆರವೇರಿಸಿ ಮಾತನಾಡಿದ ಕುಮಾರಿ ಭಾಗೀರಥಿ ಮುರುಳ್ಯರವರು ಕಟ್ಟಡ ಕಾಮಗಾರಿಯ ಶೀಘ್ರ ಪೂರ್ಣಗೊಂಡು ವಿದ್ಯಾರ್ಥಿಗಳ ಉಪಯೋಗಕ್ಕೆ ಲಭ್ಯವಾಗಲೆಂದು ಆಶಿಸಿದರು. ನಗರ ಪಂಚಾಯತ್ ನ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಅವರು ಸ್ವಾಗತಿಸಿದರು . ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ವಂದಿಸಿದರು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯರುಗಳಾದ ನಾರಾಯಣ,ಬುದ್ಧ ನಾಯ್ಕ್, ಸುಧಾಕರ್,  ಶ್ರೀಮತಿ ಶೀಲಾವತಿ ಕುರುಂಜಿ, ಪ್ರವಿತ ಪ್ರಶಾಂತ್ , ರಿಯಾಜ್ ಕಟ್ಟ ಕಾರ್, ಶಶಿಕಲಾ ನೀರ ಬಿದ್ರೆ, ಶಿಲ್ಪಾ ಸುದೇವ್, ಸ್ಥಳೀಯರಾದ ಆನಂದ ಬೆಟ್ಟಂಪಾಡಿ, ಚಂದ್ರಬೆಟ್ಟಂಪಾಡಿ, ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿ ಮತ್ತು ಊರವರು ಉಪಸ್ಥಿತರಿದ್ದರು

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!