ದ.ಕ.ಜಿಲ್ಲಾ ಪಂಚಾಯತ್ ಗ್ರಾಮೀಣ ಕೈಗಾರಿಕಾ ವಿಭಾಗ 2023-24ನೇ ಸಾಲಿನ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಹಾಗೂ ಸುಧಾರಿತ ಉಪಕರಣಗಳ (ಸಲಕರಣೆ ವಿತರಣೆ) ವಿತರಣಾ ಕಾರ್ಯಕ್ರಮ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಯಂತ್ರಗಳನ್ನು ವಿತರಿಸಿದರು.
ಹೊಲಿಗೆ ಯಂತ್ರ 36, ಇಲೆಕ್ಟ್ರಿಕಲ್ 6, ಬಡಗಿ 28, ಕಮ್ಮಾರಿಕೆ, ಗಾರೆ 31, ಆಟೋಮೊಬೈಲ್ ಸೇರಿ ಒಟ್ಟು 110 ಮಂದಿಗೆ ಉಪಕರಣ ವೃತ್ತಿಪರ ಕುಶಲ ಕರ್ಮಿಗಳಿಗೆ ವಿತರಿಸಿದರು.
ಸರಕಾರದಿಂದ ಸಿಗುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಸ್.ಎನ್.ಮನ್ಮಥ, ತಾಲೂಕು ಪಂಚಾಯತ್ ವ್ಯವಸ್ಥಾಪಕರಾದ ಹರೀಶ್.ಕೆ, ಉಪಸ್ಥಿತರಿದ್ದರು. ಕೈಗಾರಿಕೆ ಮತ್ತು ವಾಣೀಜ್ಯ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಇಲಾಖೆಯ ಸಮೀಕ್ಷಾ, ಆಶಾಲತಾ ಮತ್ತಿತರರು ಉಪಸ್ಥಿತರಿದ್ದರು.