Ad Widget

ಐವರ್ನಾಡು : ಜಾತ್ರೋತ್ಸವದ ಅಂಗವಾಗಿ 108 ತೆಂಗಿನಕಾಯಿ ಗಣಪತಿ ಹೋಮ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವವು ಫೆ.08 ರಿಂದ ಪ್ರಾರಂಭಗೊಂಡಿದ್ದು ಫೆ.10 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ. ಫೆ.08 ರಂದು ಬೆಳಿಗ್ಗೆ ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ, ಉಗ್ರಾಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ,...

ಸಂಪಾಜೆಯಿಂದ ಸುಳ್ಯಕ್ಕೆ ಪಾದಯಾತ್ರೆಯಲ್ಲಿ ಬಂದ ದಿವಾಕರ ಪೈ,  ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಮುಖಂಡರುಗಳ ಸ್ವಾಗತ

ತಾಲೂಕು ಕಚೇರಿಯಲ್ಲಿ ಸುಳ್ಯ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಕೆ: ಚುನಾವಣೆಯಲ್ಲಿ ಇ.ವಿ.ಎಂ. ಮತಯಂತ್ರದ ಬದಲು ಬ್ಯಾಲೆಟ್ ಪೇಪರ್ ನೀಡಬೇಕೆಂಬ ಬೇಡಿಕೆಯೊಂದಿಗೆ, ಸಾಮಾಜಿಕ ಕಳಕಳಿಯಿಂದ ರೈತ ಮುಖಂಡ ದಿವಾಕರ ಪೈ ಅವರು ಫೆ.8ರಂದು ಬೆಳಿಗ್ಗೆ ಸಂಪಾಜೆ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಬಳಿಯಿಂದ ಸುಳ್ಯದವರೆಗೆ  ಪಾದಯಾತ್ರೆ ಮೂಲಕ ಸಂಜೆ 4 ಗಂಟೆಗೆ ಗಾಂಧಿನಗರಕ್ಕೆ ಬರುತ್ತಿದ್ದಂತೆ ಸುಳ್ಯ...
Ad Widget

ಶಾಂತಿನಗರ; ಮುತ್ತಪ್ಪ ತಿರುವಪ್ಪ ದೈವಸ್ಥಾನದ ನೇಮೋತ್ಸವದ ಆಮಂತ್ರಣ ಪತ್ರ ಬಿಡುಗಡೆ

ಶಾಂತಿನಗರ ಮುತ್ತಪ್ಪ ತಿರುವಪ್ಪ ದೈವಸ್ಥಾನದ ನೇಮೋತ್ಸವದ ಆಮಂತ್ರಣ ಪತ್ರವು ಫೆ.8 ರಂದು ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು. ಮಾ.9 ಮತ್ತು 10 ರಂದು ಸುಳ್ಯ ಕಸಬಾದ ಶಾಂತಿನಗರ ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನ (ಮಡಪ್ಪುರ) ದ ನೇಮೋತ್ಸವವು  ನಡೆಯಲಿದೆ. ದೈವಸ್ಥಾನದ ಮೊಕ್ತೇಸರ ರಾಮಕೃಷ್ಣ ಎಸ್.ಎನ್,ಮುತ್ತಪ್ಪ ದೈವರಾಧನಾ ಸಮಿತಿ ಅಧ್ಯಕ್ಷಪಿ.ಎಂ. ಮಧುಸೂದನ ಹಾಗೂ ಸದಸ್ಯರು,...

ಸುಳ್ಯದ ನೂತನ ವೃತ್ತ ನಿರೀಕ್ಷಕರಾಗಿ ಕೆ. ಸತ್ಯನಾರಾಯಣ ಅಧಿಕಾರ ಸ್ವೀಕಾರ

ಸುಳ್ಯ ಪೊಲೀಸ್ ವೃತ್ತದ ನೂತನ ವೃತ್ತ ನಿರೀಕ್ಷಕರಾಗಿ ವರ್ಗಾವಣೆಗೊಂಡು ಕೆ . ಸತ್ಯನಾರಾಯಣ ಅಧಿಕಾರ ಸ್ವೀಕಾರ ಮಾಡಿದ್ದಾರೆ.ಚುನಾವಣಾ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರುವಿನಿಂದ ಸುಳ್ಯಕ್ಕೆ ವರ್ಗಾವಣೆಗೊಂಡು ಬಂದ ಅವರನ್ನು ಸುಳ್ಯ ವೃತ್ತ ನಿರೀಕ್ಷಕರಾಗಿದ್ದ ಮೋಹನ್ ಕೊಠಾರಿ ಹಾಗೂ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ನೂತನ ವೃತ್ತ ನಿರೀಕ್ಷಕರನ್ನು ಸ್ವಾಗತಿಸಿದರು. ಕೆ. ಸತ್ಯನಾರಾಯಣರವರು ಶೃಂಗೇರಿ...

ಪೆರಾಜೆ : ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಲವೀನ್ ಡಿ.ಪಿ., ಉಪಾಧ್ಯಕ್ಷರಾಗಿ ಪಿ.ಕರುಣಾಕರ ಆಯ್ಕೆ

ಪೆರಾಜೆ (ಕಲ್ಲುಚರ್ಪೆ) ಹಾಲು ಉತ್ಪಾದಕರ ಸಹಕಾರ ಸಂಘದ 2024 - 2029 ಸಾಲಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಇಂದು ನಡೆಯಿತು. ಅಧ್ಯಕ್ಷರಾಗಿ ಲವೀನ್ ಡಿ.ಪಿ., ಉಪಾಧ್ಯಕ್ಷರಾಗಿ ಪಿ.ಕರುಣಾಕರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕರಾದ ಎಂ.ಎಚ್. ಸತೀಶ, ಪಿ.ಎಂ.ರಾಮಕೃಷ್ಣ, ಎನ್.ಎಸ್. ಮಹಾಬಲ, ಕೆ.ಜೆ.ಉಪೇಂದ್ರ, ವೇದಾವತಿ ಕೆ.ವಿ., ಕೆ. ಬಿ. ಹೊನ್ನಪ್ಪ, ರತ್ನಾವತಿ...

ಸಂಪಾಜೆ: ಕಳ್ಳತನ, ನಗದು-ಚಿನ್ನಾಭರಣ ದೋಚಿ ಪರಾರಿ!

ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರ ಗುಂಪು ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾದ ಘಟನೆ ಫೆ.8 ರಂದು ಕೊಡಗು ಸಂಪಾಜೆಯ ಬೈಲಿನ ಕನ್ಯಾನ ವಿಜಯ ಕುಮಾರ್ ಅವರ ಮನೆಯಲ್ಲಿ ನಡೆದಿದೆ.ಬೆಳಿಗ್ಗೆ ಕಲ್ಲುಗುಂಡಿಯ ತಮ್ಮ ಅಂಗಡಿಗೆ ಹೋಗಿ ಸಂಜೆ ವೇಳೆ ಮನೆಗೆ ಹಿಂದಿರುಗಿ ನೋಡಿದಾಗ ಬಟ್ಟೆ ಗಳು ಚೆಲ್ಲಾಪಿಲ್ಲಿಯಾಗಿತ್ತು. ಕೂಡಲೇ ಸ್ಥಳೀಯರಿಗೆ ವಿಷಯ...

ಕಂದ್ರಪ್ಪಾಡಿ ಶಾಲಾ ಶತಮಾನೋತ್ಸವ ಸಮಾರೋಪ- ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರುಗಳಿಗೆ ಸನ್ಮಾನ

ಕಂದ್ರಪ್ಪಾಡಿ ಸ.ಹಿ.ಪ್ರಾ. ಶಾಲಾ ಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ಶಾಲೆಯಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಶಿಕ್ಷಕರಿಗೆ ಸನ್ಮಾನ , ಸ್ಮರಣ ಸಂಚಿಕೆ ಬಿಡುಗಡೆ ನಡೆಯಿತು. ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಮಾಜಿ ಸಚಿವ ರಮಾನಾಥ ರೈ ಅವರು ಮಾತನಾಡಿ ಊರು ಹೇಗೆ ಉಂಟು ಎಂದು ನೋಡಬೇಕಾದರೇ ಶಾಲೆ ಹೇಗೆ ಇದೆ ಎಂದು ನೋಡಬೇಕು. ನಮ್ಮೂರ...
error: Content is protected !!
ವಾಟ್ಸ್‌ಆಪ್‌ ಗ್ರೂಪ್‌ಗೆ ಸೇರಿ