
ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸುಮಾರು 32 ವರ್ಷಗಳಿಂದ ದೇವಸ್ಥಾನದಲ್ಲಿ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತರಾಗುತ್ತಿರುವ ಪದ್ಮನಾಭ ಭಟ್ ರನ್ನು ಗುರುದೇವ ಭಜನಾ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪಿಡಿಓ ಶ್ಯಾಂ ಪ್ರಸಾದ್ , ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರಾದ ಶ್ರೀನಿವಾಸ ಮಡ್ತಿಲ, ಶಿವಪ್ಪ ಗೌಡ ನೆಕ್ಕರೆಕಜೆ, ಮಾಜಿ ಸದಸ್ಯ ರಾದ ವಾಮನ ಗೌಡ, ತಾರಾ ಆರ್. ರಾವ್, ಪದ್ಮಾವತಿ ಕಣಿಪ್ಪಿಲ, ಪೂಗವನ ಸೇವಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಪಲ್ಲತ್ತಡ್ಕ, ಭಜನಾ ಸಂಘದ ಗೌರವಾಧ್ಯಕ್ಷೆ ಜಯಶ್ರೀ ರಾಮಚಂದ್ರ ಪಲ್ಲತ್ತಡ್ಕ, ಅಧ್ಯಕ್ಷೆ ರೇವತಿ ಬೋಳುಗುಡ್ಡೆ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪದ್ಮನಾಭ ಭಟ್ ಹಾಗೂ ಶ್ರೀಮತಿ ಚಂದ್ರಾವತಿ ದಂಪತಿಗಳು ಸನ್ಮಾನ ಸ್ವೀಕರಿಸಿದರು.