

ಗೂನಡ್ಕ ತಲುಪಿದ ದೃಶ್ಯ
ಚುನಾವಣೆಯಲ್ಲಿ ಇ.ವಿ.ಎಂ. ಮತಯಂತ್ರದ ಬದಲು ಬ್ಯಾಲೆಟ್ ಪೇಪರ್ ನೀಡಬೇಕೆಂಬ ಬೇಡಿಕೆಯೊಂದಿಗೆ, ಸಾಮಾಜಿಕ ಕಳಕಳಿಯಿಂದ ರೈತ ಮುಖಂಡ ದಿವಾಕರ ಪೈ ಅವರು ಫೆ.8ರಂದು ಬೆಳಿಗ್ಗೆ ಸಂಪಾಜೆ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಬಳಿಯಿಂದ ಸುಳ್ಯದವರೆಗೆ ನಡೆಸುವ ಪಾದಯಾತ್ರೆಗೆ ಚಾಲನೆ ನೀಡಲಾಯಿತು.ಈ ಪಾದಯಾತ್ರೆಗೆ ಸಾರ್ವಜನಿಕರಿಗೆ ಅನುಮತಿ ದೊರೆಯದ ಕಾರಣದಿಂದಾಗಿ ರೈತ ಮುಖಂಡರಾದ ದಿವಾಕರ ಪೈ ಅವರೊಬ್ಬರೇ, ಪಾದಯಾತ್ರೆ ಮಾಡಲಿದ್ದಾರೆ.
ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸಂಪಾಜೆ ಗೇಟಿನ ಬಳಿ ತೆಂಗಿನಕಾಯಿ ಒಡೆಯುವುದರ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಇಂದು ಸಂಜೆ 4 ಘಂಟೆ ವೇಳೆಗೆ ಅವರ ಪಾದಯಾತ್ರೆಯು ಸುಳ್ಯ ತಾಲೂಕು ಕಚೇರಿ ಬಳಿ ತಲುಪಲಿದ್ದು, ಅಲ್ಲಿ ಸಾರ್ವಜನಿಕರು ಹಾಗೂ ರೈತಮುಖಂಡರು ಸೇರಲಿದ್ದು, ಅಲ್ಲಿ ಎಲ್ಲರೂ ಸೇರಿ ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿದುಬಂದಿದೆ. ಪ್ರಗತಿಪರ ಚಿಂತಕ ತಿರುಮಲ ಸೋನ, ಕೆ.ಪಿ. ಜಾನಿ, ಮಾದವ ಗೌಡ ಸುಳ್ಯಕೋಡಿ, ಪಿ.ಎಲ್. ಸುರೇಶ್, ವಸಂತ ಪೆಲ್ತಡ್ಕ, ಮೋಹನ ಬಾಳೆಕಜೆ, ಸೇರಿದಂತೆ ಇನ್ನಿತರ ರೈತ ಮುಖಂಡರುಗಳು ಉಪಸ್ಥಿತರಿದ್ದರು.