
ದ.ಕ ಜಿಲ್ಲಾ ಸುಳ್ಯ ತಾಲೂಕು ಮರ್ಕಂಜ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಡ್ನೂರು ಮರ್ಕಂಜ ಇಲ್ಲಿ ಇದರ ನೂತನವಾಗಿ ನಿರ್ಮಿಸಲಾದ ಶ್ರೀ ಅನ್ನಪೂರ್ಣೇಶ್ವರಿ ಭೋಜನಾಲಯ ಮತ್ತು ಡಿಜಿಟಲ್ ಗ್ರಾಂಥಲಾಯದ ಕೊಠಡಿ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವು ಫೆ.೧೪ರ ಬೆಳಗ್ಗೆ ೧೦.೩೦ ಗಂಟೆಗೆ ಶಾಲಾ ಅಭಿವೃದ್ಧಿ ಮೇಲ್ತುರಿ ಸಮಿತಿ ಮತ್ತು ಅಭಿವೃದ್ಧಿ ನಿರ್ವಹಣಾ ಸಮಿತಿ ಸಹಯೋಗದಲ್ಲಿ ಊರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯಲಿದೆ ಎಂದಿ ಅಭಿವೃದ್ಧಿ ನಿರ್ವಹಣಾ ಸಂಚಾಲಕರಾದ ಜಿ ಜಗನ್ನಾಥ ಜಯನಗರ ರವರು ತಿಳಿಸಿದ್ದಾರೆ.
ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮತನಾಡುತ್ತಾ ಫೆ.೧೪ರ ಬೆಳಗ್ಗೆ ೬.೩೦ ಗಣಹೋಮ, ೯.೩೦ ಅತಿಥಿಗಣ್ಯರನ್ನು ಸ್ವಗತದೊಂದಿಗೆ ಬರಮಾಡಿಕೊಳ್ಳುವುದು. ಭೋಜನಾಲಯದ ಉದ್ಘಾಟನೆಯನ್ನು ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಮುಲ್ಲೈ ಮುಹಿಲನ್ ನೆರವೇರಿಸಲಿದ್ದಾರೆ. ಡಿಜಿಟಲ್ ಗ್ರಂಥಾಲಯವನ್ನು ಮಾಜಿ ಸಚಿವರು ಮಾಜಿ ಶಾಸಕರಾದ ಎಸ್ ಅಂಗಾರರವರು ನೆರವೇರಿಸಿಕೊಡಲಿದ್ದಾರೆ. ಸಭಾ ಅಧ್ಯಕ್ಷತೆಯನ್ನು ಶಾಲಾ ಮೇಲಿಸ್ತುವಾರಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಬೊಮ್ಮೊಟ್ಟಿಯವರು ವಹಿಸಲಿದ್ದಾರೆ.
ಗೌರವ ಸನ್ಮಾನಿತರಾಗಿ ಗುಜರಾತ್ ಗ್ರೀನ್ ಹೀರೋ ಆಫ್ ಇಂಡಿಯಾ ಉದ್ಯಮಿಗಳಾದ ಡಾ. ಆರ್.ಕೆ. ನಾಯರ್ ವಹಿಸಲಿದ್ದಾರೆ. ಕರ್ನಾಟಕ ಘನ ಸರಕಾರ ಬೆಂಗಳೂರು ವಿಧಾನ ಪರಿಷತ್ ವಿಪಕ್ಷ ನಾಯಕರು ಕೋಟ ಶ್ರೀನಿವಾಸ್ ಪೂಜಾರಿ, ಸುಳ್ಯ ವಿಧಾನ ಸಭಾ ಕ್ಷೇತ್ರ ಶಾಸಕಿ ಕು. ಭಾಗೀರಥಿ ಮುರುಳ್ಯ, ದ.ಕ ಜಿಲ್ಲೆ ಮಂಗಳೂರು ಮುಖ್ಯ ಕಾರ್ಯ ನಿರ್ವಾಹಣಧಿಕಾರಿ ಡಾ. ಆನಂದ(ಐ.ಎ.ಎಸ್), ದಕ ಜಿಲ್ಲಾ ಪಂಚಯತ್ ಮಂಗಳೂರು ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಡಿ. ಆರ್ ದಯಾನಂದ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಕೂಡಿಗೆ ಕೊಡಗು ಜಿಲ್ಲೆ ಹಿರಿಯ ಉಪನ್ಯಾಸಕರು ಎಸ್ ಪಿ ಮಹದೇವ, ಇವರು ಪ್ರಧಾನ ಮುಖ್ಯ ಅಭ್ಯಾತರರಾಗಿ ವಹಿಸಲಿದ್ದಾರೆ.
ಘನ ಉಪಸ್ಥಿತಿಯಲ್ಲಿ ಪುತ್ತೂರು ಉಪ ವಿಭಾಗ ಸಹಾಯಕ ಕಮೀಷನರ್ ಜುಬೀನ್ ಮಹಾಪಾತ್ರ,
ಸುಳ್ಯ ತಾಲೂಕು ತಹಶೀಲ್ದಾರ್‌ರರು ಜಿ ಮಂಜುನಾಥ್, ತಾಲೂಕು ಪಂಚಾಯತ್ ಸುಳ್ಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳು ರಾಜಣ್ಣ, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಿ ಇ ರಮೇಶ್ ,ಸುಳ್ಯ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳು ನಾಗೇಶ್ ,ಗೌರವ ಉಪಸ್ಥಿತಿಯಲ್ಲಿ ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷರು ಗೀತಾ ಹೊಸೊಳಿಕೆ, ದೃಷ್ಟಿ ಚಾರಿಟೇಬಲ್ಸ್ ಬೆಂಗಳೂರು ಹಾಗೂ ನಿವೃತ್ತ ಪ್ರಾಶುಂಪಾಲರು ಬಾಲಕೃಷ್ಣ ಭಟ್ ಕೊಡೇಂಕಿರಿ, ಅರಂತೋಡು ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಮಮತಾ, ಯುವರಾಜ್ ಜೈನ್ ಬಲ್ನಾಡು ಪೇಟೆ ಮರ್ಕಂಜ, ಬೆಂಗಳೂರು ಸಾಫ್ಟ್‌ವೇರ್ ಇಂಜಿನಿಯರ್ ಅನಿತಾ ರೈ ಪಟ್ಟೆ, ತಾಲೂಕು ಜನ ಜಾಗೃತಿ ವೇದಿಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಸುಳ್ಯ ವಲಯದ ಪದ್ಮನಾಭ ಜೈನ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಶಾಲಾ ಭೋಜನಾಲಯಕ್ಕೆ ಊರವರ ಸಹಕಾರ .
ಶಾಲಾ ಭೋಜಾನಾಲಯಕ್ಕೆ ಸುಮಾರು 8 ಲಕ್ಷಕ್ಕು ಅಧಿಕ ವೆಚ್ಚ ತಗಲಿದ್ದು ಎಲ್ಲವನ್ನು ಕೂಡ ಶ್ರಮಧಾನ ಮತ್ತು ದಾನಿಗಳ ನೆರವಿನಿಂದ ಮಾಡಿದ್ದೆವೆ ಅಲ್ಲದೇ ಇದಕ್ಕೆ ಒಂದು ರೂಪಾಯಿಗಳನ್ನು ಸರಕಾರ ನೀಡಿಲ್ಲಾ ಇದೀಗ ಮಕ್ಕಳ ಸಂಖ್ಯೆ ಕೂಡ ಹೆಚ್ಚಳವಾಗಿದೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅಭಿವೃದ್ಧಿ ನಿರ್ವಹಣಾ ಸಮಿತಿ ಅಧ್ಯಕ್ಷರಾದ ಹೇಮಕುಮಾರ್ ಜೋಗಿಮೂಲೆ, ಎಸ್ ಡಿ ಎಂ ಸಿ ಸಮಿತಿಯ ಶಾಲಾ ಮೇಲುಸ್ತುವಾರಿ ಅಧ್ಯಕ್ಷರು ಮೀನಾಕ್ಷಿ ಬೊಮ್ಮಟ್ಟಿ, ಅಭಿವೃದ್ಧಿ ನಿರ್ವಹಣಾ ಸಮಿತಿಯ ಉಪಾಧ್ಯಕ್ಷರು ಸಂಧ್ಯಾ ದೋಳ ಉಪಸ್ಥಿತರಿದ್ದರು